ನಗರದ ವಿಶ್ವ ಹಿಂದೂ ಪರಿಷತ್ ವತಿಯಿಂದ Gen Z ( ಹೈಸ್ಕೂಲ್, ಪಿಯುಸಿ, ಡಿಗ್ರಿ) ವಿದ್ಯಾರ್ಥಿನಿಯರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಶ್ರೀನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ಹೌಸಿಂಗ್ ಸೊಸೈಟಿಯ ಶ್ರೀ ಶಿವಾಂಜನೇಯ ಸಾಂಸ್ಕೃತಿಕ ಭವನದಲ್ಲಿ ನ.22ರ ಸಂಜೆ 4.30ಕ್ಕೆ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ವಿಶ್ವ ಹಿಂದೂ ಪರಿಷತ್ ವತಿಯಿಂದ Gen Z ( ಹೈಸ್ಕೂಲ್, ಪಿಯುಸಿ, ಡಿಗ್ರಿ) ವಿದ್ಯಾರ್ಥಿನಿಯರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಶ್ರೀನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ಹೌಸಿಂಗ್ ಸೊಸೈಟಿಯ ಶ್ರೀ ಶಿವಾಂಜನೇಯ ಸಾಂಸ್ಕೃತಿಕ ಭವನದಲ್ಲಿ ನ.22ರ ಸಂಜೆ 4.30ಕ್ಕೆ ಆಯೋಜಿಸಲಾಗಿದೆ. ಆಧುನಿಕತೆಯ ಜೊತೆಗೆ ಸಂಸ್ಕಾರ, ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿ ವಿಶೇಷ ಉಪನ್ಯಾಸ ನಡೆಯಲಿದೆ. 5:45ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗುವುದು. 4.30 ರಿಂದ 5.30 ರವರೆಗೆ ಕೆಲವು ಆಟ, ವಿಶೇಷ ಸಾಧನೆ ಮಾಡಿದ ಹಲವು ಮಹಿಳೆಯರ ವಿಡಿಯೋ ವೀಕ್ಷಣೆ ಮತ್ತು ಚರ್ಚೆ, ಸಂವಾದ ನಂತರ ಚಹಾ ಮತ್ತು ಅಲ್ಪೋಪಹಾರ ಹಾಗೂ ಸಂಜೆ 7:30ಕ್ಕೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಹೈಸ್ಕೂಲ್, ಪಿಯುಸಿ, ಡಿಗ್ರಿ ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದ್ದು, ಗೂಗಲ್ ಫಾರ್ಮ್ ತುಂಬಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ತಾಯಿ, ಮಗಳು ಕೂಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್ಯಕ್ರಮ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.7022815333, ಮೊ.9845111533, ಮೊ.9844992004, ಮೊ.8088926250. ನೋಂದಣಿಗಾಗಿ ಬಾರ್‌ಕೊಡ್ ಸ್ಕ್ಯಾನ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.