ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಸಂಸ್ಕೃತಿಯ ಆಭರಣಗಳ ವಿವರಣೆ ಸಹಿತ ಫ್ಯಾಶನ್ ಶೋ, ಕೊಡವ ಹಾಡಿನ ನೃತ್ಯ, ವಾಲಗ ನೃತ್ಯ ಕೊಡಗಿನ ನಟಿ, ನಿರ್ಮಾಪಕಿ, ಸಹ ನಿರ್ದೇಶಕಿ, ಕವಿಯತ್ರಿ ಈರಮಂಡ ಹರಿಣಿ ವಿಜಯ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಿರಿ ಬಳಗ ಮೂರ್ನಾಡುವಿನ ಸದಸ್ಯರಾದ ತೋರೆರ ನಳಿನಿ ಅಯ್ಯಪ್ಪ, ಕೋಲೆಯಂಡ ನಿಶಾ ಮೋಹನ್, ಹೈ ಕೋರ್ಟ್ ನ್ಯಾಯವಾದಿ ಆನೇಡ ಹರೀಶ್ ಗಣಪತಿ, ತೋತಿಯಂಡ ಕಿರಣ್ ಸೋಮಣ್ಣ, ಅಮ್ಮಾಟಂಡ ದೇವಯ್ಯ, ವಿಂದ್ಯಾ ದೇವಯ್ಯ ಸೇರಿದಂತೆ 25 ಮಂದಿಯ ತಂಡ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ನೆರೆದಿದ್ದ ಗಣ್ಯರು ಹಾಗೂ ವೈದ್ಯ ಪ್ರತಿನಿಧಿಗಳ ಪ್ರಶಂಸೆಗೆ ಪಾತ್ರರಾದರು.
ಕೊಡಗಿನ ಸಂಸ್ಕೃತಿಯನ್ನು ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದರ್ಶಿಸಿ ಯಶಸ್ವಿಯಾದ ಬಗ್ಗೆ ಆಯೋಜಕರಾದ ಡಾ.ಮೋಹನ್ ಅಪ್ಪಾಜಿ, ಹರಿಣಿ ವಿಜಯ್ ಹಾಗೂ ಈರಮಂಡ ವಿಜಯ್ ಅವರು ಹರ್ಷ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಈರಮಂಡ ಹರಿಣಿ ವಿಜಯ್ ದಂಪತಿಯನ್ನು ಅಸೋಸಿಯೇಷನ್ ಆಫ್ ಓಟೋಲರಿಂಗೋಲಜಿಸ್ಟ್ ಆಫ್ ಇಂಡಿಯಾದ ವೈದ್ಯ ಪ್ರಮುಖರು ಸನ್ಮಾನಿಸಿ ಗೌರವಿಸಿದರು.ಮುಂದಿನ ದಿನಗಳಲ್ಲಿ ನಡೆಯುವ ವೈದ್ಯರ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಂಸ್ಕೃತಿ ಸಿರಿ ತಂಡ ಆಯ್ಕೆಗೊಂಡಿತು.