ದೊಡ್ಡಬಳ್ಳಾಪುರ: ಕಲಿಕಾ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ, ತಾಂತ್ರಿಕ ಪರಿಸರಕ್ಕೆ ಹೊಸ ಶೈಕ್ಷಣಿಕ ಕಾರ್ಯ ಸೂಚಿಗಳನ್ನು ಪುನರ್‌ರಚಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಸಹಾಯಕವಾಗಿದೆ ಎಂದು ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ ಚಿಕ್ಕಣ್ಣ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹು ಶಿಸ್ತೀಯ ಅಧ್ಯಯನಕ್ಕೆ ಒತ್ತು ನೀಡಲಾಗಿದೆ, ಕೌಶಲ್ಯ ಆಧಾರಿತವಾಗಿಸಲು ಸುಧಾರಣೆಯ ಗುರಿಯನ್ನು ಹೊಂದಿರುವುದು, ಡಿಜಿಟಲ್ ಸೇರ್ಪಡೆ ಮತ್ತು ಸಾಕ್ಷರತೆಯ ಕಡೆ ಗಮನಹರಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಗೌರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ನೀತಿಯಲ್ಲಿ ಶೈಕ್ಷಣಿಕ ಮತ್ತು ಜೀವನ ಕೌಶಲ್ಯಗಳ ನಡುವಿನ ಅಂತರವನ್ನು ತುಂಬುವ ಪ್ರಯತ್ನ ಮಾಡಲಾಗಿದೆ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್ ರವಿಕಿರಣ್, ಮಾನವ ಸಂಪನ್ಮೂಲ ಅಧಿಕಾರಿ ಎನ್.ಎಸ್.ಬಾಬುರೆಡ್ಡಿ, ಐಐಸಿ ಸಂಯೋಜಕಿ ರಮ್ಯಶ್ರೀ, ದಿವ್ಯ, ನಿರ್ವಹಣಾ ವಿಭಾಗ ಮುಖ್ಯಸ್ಥೆ ಚೈತ್ರ, ಉದ್ಯೋಗ ಮತ್ತು ತರಬೇತಿ ವಿಭಾಗದ ಸಂಯೋಜಕರಾದ ಬಾಬುಸಾಬಿ, ಮತ್ತಿತರರು ಹಾಜರಿದ್ದರು.
31ಕೆಡಿಬಿಪಿ3-ದೊಡ್ಡಬಳ್ಳಾಪುರದ ಎಸ್‌ಡಿಯುಐಎಂನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಮಾಹಿತಿ ಕಾರ್ಯಕ್ರಮ ನಡೆಯಿತು.