ಈ ಪ್ರತಿಷ್ಠಿತ ಮಾನ್ಯತೆಯಿಂದಾಗಿ ಸಂಸ್ಥೆಯು ರೋಗಿಯ ಸುರಕ್ಷತೆ, ಗುಣಮಟ್ಟದ ಚಿಕಿತ್ಸೆ ಹಾಗೂ ಆಸ್ಪತ್ರೆ ನಿರ್ವಹಣೆಯ ರಾಷ್ಟ್ರೀಯ ಮಾನದಂಡಗಳನ್ನು ಸಮರ್ಥವಾಗಿ ಪಾಲಿಸುತ್ತಿದೆ ಎಂಬುದು ದೃಢಪಟ್ಟಿದೆ. ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ದೇಶದ ವಿರಳ ಗ್ರಾಮೀಣ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ ಈ ಸಂಸ್ಥೆಗೆ ಹೊಸ ಗರಿಮೆ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಮಾನ್ಯತಾ ಮಂಡಳಿ (ಎನ್ಎಬಿಹೆಚ್) ಆರಂಭಿಕ ಹಂತದ ಮಾನ್ಯತೆ ನೀಡಿದೆ. ಇದರೊಂದಿಗೆ ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ಬಲ ಸಿಕ್ಕಂತಾಗಿದೆ.
ಈ ಪ್ರತಿಷ್ಠಿತ ಮಾನ್ಯತೆಯಿಂದಾಗಿ ಸಂಸ್ಥೆಯು ರೋಗಿಯ ಸುರಕ್ಷತೆ, ಗುಣಮಟ್ಟದ ಚಿಕಿತ್ಸೆ ಹಾಗೂ ಆಸ್ಪತ್ರೆ ನಿರ್ವಹಣೆಯ ರಾಷ್ಟ್ರೀಯ ಮಾನದಂಡಗಳನ್ನು ಸಮರ್ಥವಾಗಿ ಪಾಲಿಸುತ್ತಿದೆ ಎಂಬುದು ದೃಢಪಟ್ಟಿದೆ. ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ದೇಶದ ವಿರಳ ಗ್ರಾಮೀಣ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ ಈ ಸಂಸ್ಥೆಗೆ ಹೊಸ ಗರಿಮೆ ಲಭಿಸಿದಂತಾಗಿದೆ.
ನಿರಂತರ ಪರಿಶ್ರಮ: ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದಲ್ಲಿ 2025ರ ಜನವರಿಯಲ್ಲಿ ಆರಂಭವಾದ ಗುಣಮಟ್ಟ ಸುಧಾರಣಾ ಪ್ರಕ್ರಿಯೆ, ಒಂದು ವರ್ಷದ ನಿರಂತರ ಪರಿಶ್ರಮ, ಶಿಸ್ತು ಮತ್ತು ತಂಡದ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ವರ್ಗದ ಪ್ರಯತ್ನಗಳಿಂದ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಂಡು ಜಾರಿಗೊಂಡಿವೆ.
ಆರಂಭಿಕ ಮಾನ್ಯತೆ:
ಈ ಅವಧಿಯಲ್ಲಿ ಆಂತರಿಕ ಹಾಗೂ ಬಾಹ್ಯ ಲೆಕ್ಕಪರಿಶೋಧನೆಗಳನ್ನು ಹಲವು ಹಂತಗಳಲ್ಲಿ ನಡೆಸಿ, ಕಾರ್ಯವಿಧಾನಗಳನ್ನು ಪರಿಶೀಲಿಸಿ ಸುಧಾರಣೆ ಕೈಗೊಳ್ಳಲಾಗಿದೆ. 2026ರ ಜನವರಿ 12ರಂದು ನಡೆದ ಎನ್ಎಬಿಹೆಚ್ ಪರಿಶೀಲನೆಯಲ್ಲಿ ಸಂಸ್ಥೆ ಯಶಸ್ವಿಯಾಗಿ ಉತ್ತೀರ್ಣವಾಗಿದೆ.
ಬಾಕ್ಸ್.. ಸಂಪೂರ್ಣ ಮಾನ್ಯತೆ: ಡಾ. ಪದ್ಮಶ್ರೀ ವಿಶ್ವಾಸ
ದೇಶದಲ್ಲಿರುವ ಸುಮಾರು 80 ರಿಂದ 90 ಸಾವಿರ ಆಸ್ಪತ್ರೆಗಳ ಪೈಕಿ ಕೇವಲ ಶೇ. 1.4 ರಷ್ಟು ಆಸ್ಪತ್ರೆಗಳು ಮಾತ್ರ ಸಂಪೂರ್ಣ ಮಾನ್ಯತೆ ಪಡೆದಿವೆ. ಸುಮಾರು ಶೇ.3 ಆಸ್ಪತ್ರೆಗಳು ಮಾತ್ರ ಆರಂಭಿಕ ಹಂತದ ಮಾನ್ಯತೆ ಹೊಂದಿವೆ. ಸಂಪೂರ್ಣ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುವ ಆಸ್ಪತ್ರೆಗಳ ಸಂಖ್ಯೆ ತೀರಾ ಕಡಿಮೆ. ನಮ್ಮ ಸಂಸ್ಥೆಗೆ ಮಾನ್ಯತೆ ದೊರಕಿರುವುದು ಮೊದಲ ಹೆಜ್ಜೆಯಾಗಿದೆ. ಶೀಘ್ರದಲ್ಲೇ ಸಂಪೂರ್ಣ ಎನ್ಎಬಿಹೆಚ್ ಮಾನ್ಯತೆ ಪಡೆಯುವ ವಿಶ್ವಾಸವೂ ನಮಗಿದೆ ಎಂದು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಪದ್ಮಶ್ರೀ ಹೇಳಿದರು. ಸಿಕೆಬಿ-1 ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.