ಹಡಪದ ಅಪ್ಪಣ್ಣ 12ನೇ ಶತಮಾನದ ವಚನ ಚಳುವಳಿಯ ಪ್ರಮುಖರು

KannadaprabhaNewsNetwork |  
Published : Jul 22, 2024, 01:15 AM IST
ಚಿತ್ರ 2 | Kannada Prabha

ಸಾರಾಂಶ

national festival celbration commeettee celebration in hyriyuru

-ಹಡಪದ ಅಪ್ಪಣ್ಣ ಜಯಂತೋತ್ಸವದಲ್ಲಿ ಉಪತಹಸೀಲ್ದಾರ್ ತಿಪ್ಪೇಸ್ವಾಮಿ

-----

ಕನ್ನಡಪ್ರಭ ವಾರ್ತೆ ಹಿರಿಯೂರು: ಹಡಪದ ಅಪ್ಪಣ್ಣನವರು 12 ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಪ್ರಮುಖರಲ್ಲಿ ಒಬ್ಬರು ಎಂದು ಉಪತಹಸೀಲ್ದಾರ್ ತಿಪ್ಪೇಸ್ವಾಮಿ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ವಿಜಯಪುರ ಜಿಲ್ಲೆಯ ತಂಗಡಗಿ ಯವರಾದ ಅಪ್ಪಣ್ಣನವರು 250ಕ್ಕೂ ಹೆಚ್ಚು ವಚನ ರಚಿಸಿದ್ದಾರೆ. ಬಸವಣ್ಣನವರಿಗೆ ಆಪ್ತರಾಗಿದ್ದ ಹಡಪದ ಅಪ್ಪಣ್ಣನವರು ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದ ಅಪ್ಪಣ್ಣನವರ ವಚನಗಳ ಸಾರ ಮತ್ತು ಸಾರ್ವಜನಿಕ ಸೇವೆ ನಮ್ಮೆಲ್ಲರಿಗೂ ಮಾದರಿ ಎಂದರು.

ಗನ್ನಾಯಕನಹಳ್ಳಿ ಟಿ ಶಿವಪ್ರಸಾದ್, ಬಿಇಒ ಕಛೇರಿ ಟಿಪಿಒ ರವೀಂದ್ರ ನಾಯಕ್, ಸಮಾಜ ಕಲ್ಯಾಣ ಇಲಾಖೆ ಸುರೇಶ್, ಮುಖಂಡರಾದ ಮಹೇಶ್, ಕಾರ್ಮಿಕ ನಿರೀಕ್ಷಕ ಅಲ್ಲಾ ಭಕ್ಷ್, ಶಿಕ್ಷಕಿ ಡಿ ಆರ್ ಗೀತಮ್ಮ, ಶ್ರೀನಿವಾಸ್ ರೆಡ್ಡಿ, ಮಂಜುನಾಥ್, ಸುದೀಪ್ ಮುಂತಾದವರು ಹಾಜರಿದ್ದರು.----

ಫೋಟೊ:1,2

ನಗರದ ತಾಲೂಕು ಕಚೇರಿ ಸಭಾಂಗಣ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಡಪದ ಅಪ್ಪಣ್ಣ ಜಯಂತೋತ್ಸವ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ