ಹುಬ್ಬಳ್ಳಿ:
ಕೊಂಕಣ ಮರಾಠಾ ಸಮಾಜ:
ಹುಬ್ಬಳ್ಳಿ ಬನಶಂಕರಿ ಬಡಾವಣೆಯ ಹು-ಧಾ ಕೊಂಕಣ ಮರಾಠಾ ಸಮಾಜದ ಕಟ್ಟಡದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಅಧ್ಯಕ್ಷ ರವಿ ನಾಯಕ ಮಾತನಾಡಿ, ಭಾರತ ಇಂದು ವಿಶ್ವದಲ್ಲಿ ಬಲಿಷ್ಠ ಸ್ಥಾನದಲ್ಲಿದೆ. ಭಾರತದ ಸಂಸ್ಕೃತಿ ವಿಭಿನ್ನವಾಗಿದ್ದು, ಇತರ ದೇಶಗಳಿಗೆ ಮಾದರಿಯಾಗಿದೆ ಎಂದರು. ಕಾರ್ಯದರ್ಶಿ ಸುರೇಂದ್ರ ಗಾಂವ್ಕರ್, ಮಾಜಿ ಅಧ್ಯಕ್ಷ ಯಶೋಕರಣೆ, ಅಶೋಕ ನಾಯ್ಕ, ಮಾರುತಿ ಪವಾರ, ವಿನೋದ್ ಸೈಲ, ಪ್ರಕಾಶ್ ನಾಯ್ಕ ಇದ್ದರು.ಅಶ್ವಮೇಧ ಪಾರ್ಕ್:
ಹುಬ್ಬಳ್ಳಿ ಅಮರಗೋಳದ ಅಶ್ವಮೇಧ ಪಾರ್ಕ್‌ನಲ್ಲಿ ಅಶ್ವಮೇಧ ಅಭಿವೃದ್ಧಿ ಸಂಘದಿಂದ ಗಣರಾಜ್ಯೋತ್ಸವ ಹಮ್ಮಿಕೊಳ್ಳಲಾಯಿತು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷ ಈಶ್ವರಗೌಡ ಪಾಟೀಲ, ಪುಂಡಲಿಕ ಕದಂ, ನಿರ್ಮಲಕುಮಾರ ಸಾಬೊಜಿ, ಶಿವಸಂಗಯ್ಯ ಪಂಚಯ್ಯನಮಠ, ನಜೀರಅಹ್ಮದ್ ಕೋಲಕಾರ. ಸಿದ್ದಲಿಂಗಯ್ಯ ನೆರೇಗಲಮಠ. ಮಡಿವಾಳಪ್ಪ ಜಯಪ್ಪನವರ ಸೇರಿದಂತೆ ಹಲವರಿದ್ದರು.ವಾಣಿಜ್ಯೋದ್ಯಮ ಸಂಸ್ಥೆ:
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಪ್ರಕಾಶ ಶೃಂಗೇರಿ, ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ಮಹೇಂದ್ರ ಲದ್ದಾವ, ವಿನಯ ಜವಳಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ಆರ್‌ವಿಎಸ್ ಪಬ್ಲಿಕ್ ಸ್ಕೂಲ್:
ನವಲಗುಂದ ತಾಲೂಕಿನ ಖನ್ನೂರ ಆರ್‌ವಿಎಸ್ ಪಬ್ಲಿಕ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ವೇಳೆ ಧ್ವಜಾರೋಹಣ ನೆರವೇರಿಸಿದ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ವೇಳೆ ಆರ್‌ವಿಎಸ್ ಅಧ್ಯಕ್ಷ ಎಸ್.ಕೆ. ಜಂಗಳೆಪ್ಪಗೌಡ್ರ, ಚೇರಮನ್ ಸುರೇಶ ಅಂಗಡಿ ಹಾಗೂ ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.