- ದೇಸಿ ಬೀಜ ವೈವಿಧ್ಯತೆ ಜನಜಾಗೃತಿ ಉದ್ದೇಶ । ಬೀಜಮಾತೆಯರಾದ ಮೈಸೂರು ಪದ್ಮಾವತಮ್ಮ, ಕೋಲಾರ ಪಾಪಮ್ಮ ಅವರಿಂದ ಚಾಲನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೋಲಾರದ ಬೀಜಮಾತೆ ಪಾಪಮ್ಮ, ಪ್ರಧಾನಮಂತ್ರಿಗಳಿಂದ ಸನ್ಮಾನಿತ ಮೈಸೂರಿನ ಬೀಜಮಾತೆ ಪದ್ಮಾವತಮ್ಮ ''''''''ಪಾರಂಪರಿಕ ಬೀಜೋತ್ಸವ'''''''' ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆವರೆಗೆ ಬೀಜೋತ್ಸವ ನಡೆಯಲಿದೆ ಎಂದರು.
ಬೀಜ ಎಂಬುದು ಬಿತ್ತನೆ ವಸ್ತುವಲ್ಲ, ಅದು ಕೃಷಿಯ ಜೀವನಾಡಿಯಾಗಿದೆ. ಅಕ್ಕಡಿ, ಮಿಶ್ರಬೆಳೆ, ನವಧಾನ್ಯದಂತಹ ಹಲವಾರು ವಿಶೇಷ ಪದ್ಧತಿಗಳ ಮೂಲಕ ಬೀಜ ವೈವಿಧ್ಯವನ್ನು ಜೀವಂತವಾಗಿಡಲಾಗಿದೆ. ಒಕ್ಕಲು ಮಕ್ಕಳ ಜೀವಾಳವಾದ ಬೀಜ ವೈವಿಧ್ಯಕ್ಕೆ ಧಕ್ಕೆ ಬಂದೊದಗಿದೆ. ಪ್ರಸ್ತುತ ಎದುರಾದ ಕೃಷಿ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರಾದಾಯಿಕ ತಳಿಗಳಿಗೆ ನಾವೆಲ್ಲ ಆದ್ಯತೆ ನೀಡಬೇಕಿದೆ. ದೇಸೀಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು, ಗ್ರಾಹಕರಿಗೆ ಅರಿವು ಮೂಡಿಸಲು ಐಸಿಎಆರ್- ತರಳಬಾಳು ಕೃಷಿವಿಜ್ಞಾನ ಕೇಂದ್ರ, ಐಕಾಂತಿಕಾ ಸಂಸ್ಥೆ, ಸಹಜ ಸಮೃದ್ಧ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ ಪಾರಂಪರಿಕ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸ್ಥಳೀಯ ಆಹಾರ ಸಂಸ್ಕೃತಿಗಳ ಪರಿಚಯಿಸುವ ಉದ್ದೇಶವಿದೆ. ಕರ್ನಾಟಕದ ಬೀಜ ಸಂರಕ್ಷಕರನ್ನೆಲ್ಲಾ ಒಂದೇ ವೇದಿಕೆಯಡಿ ತಂದು, ಕರ್ನಾಟಕ ಬೀಜ ಸಂರಕ್ಷಕರ ಬಳಗ ಹುಟ್ಟು ಹಾಕುವ ಕನಸು ಹೊಂದಿದ್ದೇವೆ. ಕರ್ನಾಟಕವು ಬೀಜ ವೈವಿಧ್ಯದ ತಾಣವಾಗಿದೆ. ರತ್ನಚೂಡಿ, ರಾಜಮುಡಿ, ಆಲೂರು ಸಣ್ಣ, ಗಂಧಸಾಲೆಯಂತಹ ದೇಸಿ ಬತ್ತ, ಕರಿಕಡ್ಡಿ ರಾಗಿ, ಉಂಡೆ ರಾಗಿ, ಮಜ್ಜಿಗೆ ರಾಗಿ, ಕೆಂಪು ನವಣೆ, ಮಲ್ಲಿಗೆ ಸಾವೆ, ಕೊರಲೆನಂತಹ ನೂರಾರು ಸಿರಿಧಾನ್ಯಗಳು, ಮಟ್ಟುಗಳ್ಳ, ಈರಂಗೆರೆ ಬದನೆ ಬೀಜಗಳ ತಾಣ ಇದಾಗಿದೆ ಎಂದು ವಿವರಿಸಿದರು.
ಪಂಡರಾಪುರ ಹತ್ತಿ, ಬ್ಯಾಡಗಿ ಕಡ್ಡಿ ಮೆಣಸು, ಹಾಲುಬ್ಬಲು, ಜೇನುಗೂಡು ರಾಗಿ, ಮರ ಸಜ್ಜೆಯಂತಹ ನೂರಾರು ತಳಿಗಳು ನಾಶದ ಅಂಚಿನಲ್ಲಿವೆ. ಪೋಷಕಾಂಶಗಳ ಆಗರವಾದ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ, ಮಳೆ ವೈಪರೀತ್ಯವನ್ನು ಎದುರಿಸಿ ನಿಲ್ಲುವ ದೇಸಿ ತಳಿಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಬೀಜ ಸಂರಕ್ಷಕರ ಗುಂಪು ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಮಾಹಿತಿ ನೀಡಿದರು.
ಸಹಜ ಕೃಷಿಕರಾದ ಹನುಮಂತಪ್ಪ, ಸುಜಿತಕುಮಾರ ನಿಟ್ಟೂರು, ಅಭಿಷೇಕ್, ಸುಪ್ರಿಯಾ ಇತರರು ಇದ್ದರು.
- - -ಬಾಕ್ಸ್ ವಿವಿಧ ದೇಸಿ ತಳಿಗಳ ಪ್ರದರ್ಶನ ವಿವಿಧ ದೇಸಿ ತಳಿಗಳನ್ನು ಬೀಜ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ. 1 ಸಾವಿರಕ್ಕೂ ಅಧಿಕ ದೇಸಿ ಧಾನ್ಯ, ಧಾನ್ಯ, ತರಕಾರು, ಕಾಳು, ಗೆಡ್ಡೆ ಗೆಣಸು, ಸೊಪ್ಪು, ಹಣ್ಣಿನ ತಳಿಗಳು ಪ್ರದರ್ಶನಕ್ಕೆ ಬರಲಿವೆ. ಗುಣಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜ ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ''''''''ಸಿದ್ಧ ಹಲಸು'''''''', ಇತರೆ ಹಣ್ಣಿನ ಗಿಡ ಮಾರಾಟಕ್ಕಿರುತ್ತವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಸಾವಯವ ಮಳಿಗೆ, ರೈತ ಉತ್ಪಾದಕರ ಗುಂಪು ಬೇಳೆ ಕಾಳುಗಳು, ಹಣ್ಣುಗಳ ಮಾರಾಟ ಏರ್ಪಡಿಸಲಾಗಿದೆ.
ದಾವಣಗೆರೆಯಲ್ಲಿ ಐಕಾಂತಿಕಾ ಸಂಸ್ಥೆಯ ರಾಘವ, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಡಾ. ಎಂ.ಜಿ. ಬಸವನಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.