ರಾಮಕೃಷ್ಣ ದಾಸರಿ
ಎಸ್ಸೆಸ್ಸೆಲ್ಸಿ ಫಲಿತಾಂಶವಿರಲಿ.. ದ್ವಿತೀಯ ಪಿಯುಸಿ ಫಲಿತಾಂಶವಿರಲಿ.. ಇಲ್ಲವೇ ಸಿಇಟಿ ಫಲಿತಾಂಶವಿರಲಿ.. ರಾಯಚೂರಿನ ಮಟ್ಟಿಗೆ ಕಳಪೆ ಸಾಧನೆ ಕಟ್ಟಿಟ್ಟ ಬುತ್ತಿ ಎನ್ನುವ ಮಟ್ಟಿಗೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕುಸಿತಕಂಡಿದೆ.ಯಾವುದೇ ತರಗತಿಯಾಗಿದ್ದರು ಫಲಿತಾಂಶ ಪ್ರಕಟಗೊಂಡಾಗ ಕುಖ್ಯಾತಿ ಕಳಂಕವು ರಾಯಚೂರಿಗೆ ಪಕ್ಕಾ ಎನ್ನುವ ಖಚಿತ ವಾತಾವರಣ ನಿರ್ಮಾಣವಾಗುತ್ತಿರುವುದು ಪಾಲಕರು, ಶಿಕ್ಷಣ ಪ್ರೇಮಿಗಳಲ್ಲಿ ಬೇಸರ ಮೂಡಿಸುತ್ತಿದೆ.
ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕುಸಿಯಲು ಹತ್ತು ಹಲವು ಕಾರಣಗಳನ್ನು ವಿಶ್ಲೇಷಿಸಬಹುದಾಗಿದೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳುವ ಸರ್ಕಾರ, ಜಿಲ್ಲಾಡಳಿತ, ಜಿಪಂ ಮಕ್ಕಳ ವಿದ್ಯಾಭ್ಯಾಸಕ್ಕೆ ಬುನಾದಿಯಾಗಿರುವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತಿಲ್ಲ. ಜಿಲ್ಲೆಯ ನೂರಾರು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿದೆ. ಅತಿಥಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ, ಶಾಲೆಗಳಲ್ಲಿ ಮೂಲಭೂತ ಸವಲತ್ತು ಕೊರತೆ ಜೊತೆಗೆ ಮಕ್ಕಳಿಗೆ ಪರಿಣಾಮಕಾರಿಯಾದ ಬೋಧನೆ ನೀಡುವಂತಹ ಸುಧಾರಿತ ವ್ಯವಸ್ಥೆಯಿಲ್ಲದ ಕಾರಣಕ್ಕೆ ನಿರಂತರವಾಗಿ ಕಳಪೆ ಸಾಧನೆ ಕಳಂಕವು ಅಂಟಿಕೊಳ್ಳುತ್ತಿದೆ.ಬಾಕ್ಸ್.........ಇವರೇ ಜಿಲ್ಲೆ ಎಸ್ಸೆಸ್ಸೆಲ್ಸಿ ಟಾಪರ್ಸ್:
ನಗರದ ಕೆಡಬ್ಲೂಟಿ ಪ್ರೌಢಶಾಲೆಯ ಪ್ರಥಮ ಮಹಮ್ಮದ್ ಆದಿಲ್ ಫರಹಾನ್ ಅವರು 625ಕ್ಕೆ 618 ಅಂಕಗಳನ್ನು ಗಳಿಸುವ ಮೂಲಕ ಶೇ 98.88ರಷ್ಟು ಫಲಿತಾಂಶ ಪಡೆದಿದ್ದಾರೆ. ದೇವದುರ್ಗ ತಾಲೂಕಿನ ಜಾಲಹಳ್ಳಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ರಾಮನಗೌಡ ಅವರು 625ಕ್ಕೆ 617 ಅಂಕಗಳಿಸಿ ಶೇ 98.72ರಷ್ಟು ಫಲಿತಾಂಶ ಗಳಿಸಿದ್ದಾರೆ. ದೇವದುರ್ಗ ತಾಲೂಕಿ ಜಾಲಹಳ್ಳಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಮಲ್ಲಿಕಾರ್ಜುನ ಅವರು 625ಕ್ಕೆ 616 ಅಂಕ ಗಳಿಸುವ ಮೂಲಕ ಶೇ 98.56ರಷ್ಟು ಫಲಿತಾಂಶ, ರಾಯಚೂರು ನಗರದ ಇನ್‌ಫೆಂಟ್ ಜೀಸಸ್ ಶಾಲೆ ವಿದ್ಯಾರ್ಥಿ ರಘುರಾಮ 625ಕ್ಕೆ 615 ಅಂಕ ಗಳಿಸುವ ಮೂಲಕ ಶೇ 98.40ರಷ್ಟು ಫಲಿತಾಂಶ ಪಡೆದಿದ್ದಾರೆ.
ರಾಯಚೂರಿನ ವಿದ್ಯಾಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ ಮನೋಜಕುಮಾರ ಟಿ.ಎಸ್ ಹಾಗೂ ರಾಯಚೂರಿನ ಲಿಟಲ್ ಏಂಜಲ್ಸ್ ಪ್ರೌಢಶಾಲೆ ವಿದ್ಯಾರ್ಥಿ ಉಮ್ಮೆ ವಾಕಹ ಅವರು 625ಕ್ಕೆ 611 ಅಂಕ ಗಳಿಸುವ ಮೂಲಕ ಶೇ 97.76ರಷ್ಟು ಫಲಿತಾಂಶ ಪಡೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ತಿಳಿಸಿದೆ.
ಕೆ.ಡಿ.ಬಡಿಗೇರ್, ಡಿಡಿಪಿಐ, ರಾಯಚೂರು
ಸೈಯದ್ ಹಫೀಜುಲ್ಲಾ, ಸಂಚಾಲಕ, ಜ್ಞಾನ ವಿಜ್ಞಾನ ಸಂಸ್ಥೆ, ರಾಯಚೂರು
ಮಹಮ್ಮದ್ ಆದಿಲ್ ಫರಾಹನ್, ಎಸ್ಸೆಸ್ಸೆಲ್ಸಿ ಟಾಪರ್