ಕನ್ನಡಪ್ರಭ ವಾರ್ತೆ ಯಳಂದೂರು
ರಾಜ್ಯ ವಿವಿಧ ಜಿಲ್ಲೆಗಳಿಂದ ಬಂದಿದ್ದ 25 ಮಂದಿ ಪ್ರತಿಭಾವಂತ ಬಾಲ್ ಬ್ಯಾಡ್ಮಿಂಟನ್ ಆಟಗಾರರು ಇದರಲ್ಲಿ ಭಾಗವಹಿಸಿದ್ದರು. ತಮಿಳು ನಾಡಿನ ಈರೋಡ್‌ನಲ್ಲಿ ನಡೆಯಲಿರುವ 2025-26 ನೇ ಸಾಲಿನ 70 ನೇ ರಾಷ್ಟ್ರೀಯ ಜೂನಿಯರ್ ಬಾಲಕರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ರಾಜ್ ತಂಡವನ್ನು ಇದೇ ವೇಳೆ ಪ್ರಕಟಿಸಲಾಯಿತು.ರಾಜ್ಯವನ್ನು ಪ್ರತಿನಿಧಿಸುವ ಆಟಗಾರರಾಗಿ ಚರಣ್, ತಸ್ಲೀಮ್, ಲಿಖಿತ್, ಯತೀಶ್, ಆಕಾಶ್, ಪ್ರತಾಪ್, ಕಾರ್ತಿಕ್, ಧನುಷ್, ರಿತ್ವಿನ್ ಎನ್.ಸ್ವಾಮಿ, ಕಾರ್ತಿಕ್ ಆಯ್ಕೆಯಾದರು. ಮೀಸಲು ಆಟಗಾರರಾಗಿ ರಾಜು, ಕೋಮಲ್ ನಾಯಕ್‌ರನ್ನು ಆಯ್ಕೆ ಮಾಡಲಾಯಿತು. ತರಬೇತುದಾರರಾಗಿ ಬಿ. ಸುದರ್ಶಮ್ ವ್ಯವಸ್ಥಾಪಕರಾಗಿ ಕೌಶಿಕ್ ರಾಮ್‌ರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ತಂಡದ ಅಸೋಸಿಯೇಷನ್ ಅಧ್ಯಕ್ಷರಾದ ನಾರಾಯಣಸ್ವಾಮಿ, ಖಜಾಂಚಿ ಮಹದೇವಯ್ಯ, ರಾಜು, ಮಲ್ಲೇಶ್, ವಿಮಲ್ ಹಾಗೂ ಪ್ರಮೋದ್‌ಚಂದ್ರನ್ ಸೇರಿದಂತೆ ಅನೇಕರು ಇದ್ದರು.