16ರಿಂದ ರಾಷ್ಟ್ರಮಟ್ಟದ ನಾಣ್ಯ, ನೋಟುಗಳ ಪ್ರದರ್ಶನ

KannadaprabhaNewsNetwork |  
Published : Jan 14, 2026, 02:45 AM IST
ಪೋಟೋ: 13ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್‌ನ ಅಧ್ಯಕ್ಷ  ದೇವದಾಸ್ ಎನ್. ನಾಯಕ್ ಮಾತನಾಡಿರು.  | Kannada Prabha

ಸಾರಾಂಶ

ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್‌ನಿಂದ ಜ.16ರಿಂದ 18ರಂದು ಮೂರು ದಿನಗಳ ಕಾಲ ಶಿವಮೊಗ್ಗ ವಿನೋಬನಗರ 60 ಅಡಿ ರಸ್ತೆಯ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ನಾಣ್ಯ-ನೋಟುಗಳು, ಅಂಚೆಚೀಟಿಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನ ಎರ್ಪಡಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ದೇವದಾಸ್ ಎನ್.ನಾಯಕ್ ತಿಳಿಸಿದರು.

ಶಿವಮೊಗ್ಗ: ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್‌ನಿಂದ ಜ.16ರಿಂದ 18ರಂದು ಮೂರು ದಿನಗಳ ಕಾಲ ಶಿವಮೊಗ್ಗ ವಿನೋಬನಗರ 60 ಅಡಿ ರಸ್ತೆಯ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ನಾಣ್ಯ-ನೋಟುಗಳು, ಅಂಚೆಚೀಟಿಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನ ಎರ್ಪಡಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ದೇವದಾಸ್ ಎನ್.ನಾಯಕ್ ತಿಳಿಸಿದರು.ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ಭಾರತದ ವಿವಿಧೆಡೆಯಿಂದ ವಿಶ್ವ ವಿಖ್ಯಾತ ನಾಣ್ಯ ಸಂಗ್ರಾಹಕರು ಪಾಲ್ಗೊಂಡು ತಮ್ಮ ಸಂಗ್ರಹದ ಅಪರೂಪದ ರಾಜ ಮಹಾರಾಜರ ಆಳ್ವಿಕೆ ಕಾಲದ ಆಕರ್ಷಕ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಸೀಸದ ನಾಣ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.ಜೊತೆಗೆ ದೇಶ ವಿದೇಶದ ನಾಣ್ಯ ಮತ್ತು ನೋಟುಗಳು, ಪಾಲಿಮರ್ ಪ್ಲಾಸ್ಟಿಕ್ ನೋಟುಗಳು ಸೇರಿದಂತೆ ಭಾರತದಲ್ಲಿ ಬ್ರಿಟಿಷರು, ಪೋರ್ಚುಗೀಸರ ಅಳ್ವಿಕೆಯ ಕಾಲದ ನಾಣ್ಯಗಳು, ನೋಟುಗಳು, ಸ್ವತಂತ್ರ ಭಾರತದ ನವೀಕೃತ ವಿಶೇಷ ನಾಣ್ಯ ನೋಟುಗಳೂ ಪ್ರದರ್ಶನದಲ್ಲಿವೆ ಎಂದರು.ಸ್ವತಂತ್ರ್ಯ ಭಾರತದ ಅತಿ ದೊಡ್ಡದಾದ 1000 ರು., 100 ರು. ನೋಟುಗಳು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ದೇಶದ ಮಹಾನ್ ವ್ಯಕ್ತಿಗಳ ಹಾಗೂ ವಿಶೇಷ ಸ್ಮಾರಕಗಳ ಬೆಳ್ಳಿ ನಾಣ್ಯಗಳು ಪ್ರದರ್ಶನ ಸಹ ಇರಲಿದ್ದು, ಶಿವಮೊಗ್ಗೆಯ ಸರ್ವರಿಗೂ ಮತ್ತು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ ಎಂದರು.ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಕಾಂತ್ ಮಾತನಾಡಿ, ಜ.16ರಂದು ಬೆಳಗ್ಗೆ 10.30ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಖ್ಯಾತ ಉದ್ಯಮಿ ಕಿಮ್ಮನ ರೆಸಾರ್ಟ್‌ನ ಕಿಮ್ಮನೆ ಜಯರಾಂ ಅವರು ಒಟ್ಟಾಗಿ ನೆರವೇರಿಸಲಿದ್ದಾರೆ ಎಂದರು.ನಾಣ್ಯ ಪ್ರದರ್ಶನವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ, ನೋಟುಗಳ ಪ್ರದರ್ಶನವನ್ನು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಅಂಚೆ ಚೀಟಿಗಳ ಪ್ರದರ್ಶನವನ್ನು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್, ಡೀಲರ್ ಸ್ಟಾಲ್‌ಗಳನ್ನು ಕೆಪಿಸಿಸಿ ರಾಜ್ಯ ಮುಖಂಡರಾದ ಎಂ.ಶ್ರೀಕಾಂತ್ ಹಾಗೂ ಸ್ಟಾಲ್‌ಗಳ ಉದ್ಘಾಟನೆಯನ್ನು ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಜಿ.ಪಂ.ಮಾಜಿ ಸದಸ್ಯ ಕೆ.ಈ.ಕಾಂತೇಶ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ದೇವದಾಸ್ ಎನ್.ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸೇರಿದಂತೆ ಜಿಲ್ಲೆಯ ಜನ ಪ್ರತಿನಿಧಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.ಶಿವಮೊಗ್ಗ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯದ ನಿರ್ಮಾತೃ ಎಚ್.ಖಂಡೋಬರಾವ್, ರಾಷ್ಟ್ರಮಟ್ಟದ ಖ್ಯಾತ ನಾಣ್ಯ ಸಂಗ್ರಹಕರು ಹಾಗೂ ಕನ್ನಡ ನಾಡು ನಾಣ್ಯ ಸಂಘದ ರಾಜ್ಯಾಧ್ಯಕ್ಷರೂ ಆದ ರಾಜೇಂದ್ರ ಮಾರು ಮತ್ತು ರಾಷ್ಟ್ರೀಯ ಖ್ಯಾತಿಯ ನಾಣ್ಯ ಸಂಗ್ರಹಕ ಬೆಂಗಳೂರಿನ ಮಂಜುನಾಥ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಅಪರೂಪದ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಪ್ರದರ್ಶಿಸಿದ ಮಂಗಳೂರಿನ ಖ್ಯಾತ ನಾಣ್ಯ ಸಂಗ್ರಹಕ ಪ್ರಶಾಂತ್ ಶೇಟ್ ಮತ್ತು ಬೆಂಗಳೂರಿನ ಖ್ಯಾತ ನಾಣ್ಯ ಸಂಗ್ರಾಹಕ ಛಗನ್ ರಾಜ್ ಆವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಂಟಿ ಕಾರ್ಯದರ್ಶಿ ಎಲ್.ಸುಬ್ರಹ್ಮಣ್ಯ, ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್, ಮತ್ತು ಎಲ್ಲಾ ಟ್ರಸ್ಟಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ