ಎಸ್‌ಡಿಎಂಎ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಸಮಾಲೋಚನ ಸಂಪನ್ನ

KannadaprabhaNewsNetwork |  
Published : May 15, 2025, 01:37 AM IST
14ಸಮಾಲೋಚನ | Kannada Prabha

ಸಾರಾಂಶ

ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮನೋವಿಜ್ಞಾನ ಮತ್ತು ಮಾನಸರೋಗ ವಿಭಾಗವು ಸಮಾಲೋಚನ 2025 ಎಂಬ ರಾಷ್ಟ್ರೀಯ ಮಟ್ಟದ ಏಕದಿನ ‘ಸಾಂವೇದನಾತ್ಮಕ ವರ್ತನೆ ಚಿಕಿತ್ಸೆ (ಸಿಬಿಟಿ) ಹಾಗೂ ವ್ಯವಹಾರಾತ್ಮಕ ವಿಶ್ಲೇಷಣೆ (ಟಿಎ)’ ಕಾರ್ಯಾಗಾರ ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮನೋವಿಜ್ಞಾನ ಮತ್ತು ಮಾನಸರೋಗ ವಿಭಾಗವು ಸಮಾಲೋಚನ 2025 ಎಂಬ ರಾಷ್ಟ್ರೀಯ ಮಟ್ಟದ ಏಕದಿನ ‘ಸಾಂವೇದನಾತ್ಮಕ ವರ್ತನೆ ಚಿಕಿತ್ಸೆ (ಸಿಬಿಟಿ) ಹಾಗೂ ವ್ಯವಹಾರಾತ್ಮಕ ವಿಶ್ಲೇಷಣೆ (ಟಿಎ)’ ಕಾರ್ಯಾಗಾರ ಆಯೋಜಿಸಿತು.ಈ ಕಾರ್ಯಾಗಾರದಲ್ಲಿ ಕರ್ನಾಟಕ ಮತ್ತು ಇತರ ರಾಜ್ಯಗಳ ವಿವಿಧ ಆಯುರ್ವೇದ ಮಹಾವಿದ್ಯಾಲಯಗಳ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿದಂತೆ ಒಟ್ಟು 122 ಪ್ರತಿನಿಧಿಗಳು ಭಾಗವಹಿಸಿ, ಕಾರ್ಯಾಗಾರದ ಶೈಕ್ಷಣಿಕ ಮಹತ್ವವನ್ನು ಪ್ರತಿಬಿಂಬಿಸಿದರು.ಕಾರ್ಯಾಗಾರವನ್ನು ಉದ್ಘಾಟಿಸಿದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ., ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಇತ್ತೀಚಿನ ದಿನಗಳಲ್ಲಿ ರೋಗಿಗಳ ಮತ್ತು ಅವರ ಪರಿಚಾರಕರ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹುದೊಡ್ಡ ಸವಾಲಾಗಿದೆ ಎಂದು ಹೇಳಿದರು.

ನಂತರ ಕಾರ್ಯಾಗಾರದ ವಿಷಯ ವಸ್ತು ಪರಿಚಯವನ್ನು ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ವಿಜಯೇಂದ್ರ ಜಿ. ಭಟ್ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಪೌಲೋಮಿ ಎಂ. ಸುಧೀರ್ ಮತ್ತು ಡಾ.ಪ್ರಸನ್ನ ಹೆಗಡೆ ಕಾರ್ಯಾಗಾರದ ವಿಷಯಗಳಾದ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಮತ್ತು ಟ್ರಾನ್ಸಾಕ್ಷನಲ್ ಅನಾಲಿಸಿಸ್ ಬಗ್ಗೆ ವಿಶ್ಲೇಷಣೆ ನಡೆಸಿ ಮಾನವನ ವರ್ತನೆ ಮತ್ತು ವ್ಯವಹಾರದ ನಕಾರಾತ್ಮಕ ಹಿನ್ನೆಲೆ ಹಾಗೂ ಪರಿಹಾರದ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ನೀಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಡಾ. ನಾಗರಾಜ ಎಸ್., ಡಾ. ವೀರಕುಮಾರ್ ಕೆ., ಡಾ. ಶ್ರೀಲತಾ ಕಾಮತ್, ಡಾ. ಅಶೋಕ್ ಕುಮಾರ್ ಬಿ.ಎನ್., ಡಾ.ಕೆ.ಆರ್. ರಾಮಚಂದ್ರ, ಡಾ.ಶ್ರೀಕಾಂತ್, ಡಾ.ರವಿಪ್ರಸಾದ್ ಹೆಗ್ದೆ, ಡಾ.ಚೈತ್ರಾ ಮೊದಲಾದ ಗಣ್ಯರು ಹಾಜರಿದ್ದರು.

ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ವರದಿಯನ್ನು ಡಾ. ಧನೇಶ್ವರಿ ಎಚ್.ಎ. ಮಂಡಿಸಿ, ಡಾ. ಪುನೀತ್ ಪಿ. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ