ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾನಿಧ್ಯವನ್ನು ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಹಿಸಲಿದ್ದು, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಸಂಸದ ರಮೇಶ ಜಿಗಜಣಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಾಗಾರದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ನುರಿತ ವಿಜ್ಞಾನಿಗಳಾದ ಡಾ.ಸಿದ್ದಣ್ಣ ರೋಕೆ, ಡಾ.ಆರ್.ಬಿ.ಸೋಮಕುವರ, ಡಾ.ಎಸ್.ಡಿ.ಸಾವಂತ, ಡಾ.ರಾಘವೇಂದ್ರ ಆಚಾರಿ, ಡಾ.ಎ.ಎಮ್.ನದಾಫ್ ಸೇರಿ ಹಲವು ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವರಣೆ ಕೊಡಲಿದ್ದಾರೆ. ಈ ಭಾಗದ ದ್ರಾಕ್ಷಿ ಬೆಳೆಗಾರರು ಇದರ ಸದುಪಯೋಗಪಡಿಸಿಕೊಳ್ಳಬೇಕು. ವಿಜ್ಞಾನಿಗಳು ನೀಡುವ ಮಾರ್ಗದರ್ಶನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಮತ್ತು ಲಾಭ ಪಡೆದುಕೊಳ್ಳಬೇಕು ಎಂದರು.ಪ್ರಾದೇಶಿಕ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾತನಾಡಿ, ರಾಜ್ಯದ ಒಟ್ಟು ದ್ರಾಕ್ಷಿ ಬೆಳೆಯಲ್ಲಿ ಶೇ.70ರಷ್ಟನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 27 ಸಾವಿರ ಹೆಕ್ಟೇರ್ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅದನ್ನು ವೈಜ್ಞಾನಿಕವಾಗಿ ಹೇಗೆ ಬೆಳೆಯುವುದು ಎಂದು ಚರ್ಚಿಸಲಾಗುವುದು. ದ್ರಾಕ್ಷಿ ಬೆಳೆಯಲ್ಲಿ ರಾಜ್ಯ, ಕೇಂದ್ರ, ವಿಜ್ಞಾನಿಗಳ ಪಾತ್ರಗಳೇನು ಎಂಬುದನ್ನು ತಿಳಿಸಿಕೊಡಲಾಗುವುದು. ವಾತಾವರಣದಲ್ಲಿ ಏರುಪೇರಾದಾಗ ಹೇಗೆ ನಿರ್ವಹಣೆ ಮಾಡಬೇಕು, ಹೊಸ ತಳಿಗಳ ಪರಿಚಯ ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಿದಗೊಂಡ ರುದ್ರಗೌಡರ, ನಿರ್ದೇಶಕರಾದ ಯಾಕೂಬ ಜತ್ತಿ, ಗುರುನಿಂಗ ಮಾಳಿ, ಪ್ರಕಾಶ ಆಯತವಾಡ, ಭರತೇಶ ಜಮಖಂಡಿ, ಬಿ.ಸಿ.ಮಸಳಿ, ಪರಮಾನಂದ ಪಾಟೀಲ ಉಪಸ್ಥಿತರಿದ್ದರು.