ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಗ್ರಾ.ಪಂ.ಆವರಣದಲ್ಲಿ ಕುಸ್ತಿಕಣವನ್ನು ಕೆಂಪು ಮಣ್ಣಿನಿಂದ ಕೂಡಿದ ಮೈದಾನವನ್ನು ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು. ಪೈಲ್ವಾನರನ್ನು ಪ್ರೇಕ್ಷಕರು ಹುರುದುಂಬಿಸಿದರು. ಕುಸ್ತಿಪಟುಗಳು ವಿಜೇತರಾಗುತ್ತಿದ್ದಂತೆ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದರು. ವಿಜಯಪುರ ಭೂತನಾಳ ತಾಂಡಾದ ಅಶೋಕ ವಾಲಿಕರ ತಂಡದ ಹಲಿಗೆ ವಾದನ ಕುಸ್ತಿ ಪಟುಗಳಿಗೆ, ಪ್ರೇಕ್ಷಕರಿಗೆ ಹುಮಸ್ಸು ನೀಡಿತ್ತು. ಒಟ್ಟು 30ಕ್ಕೂ ಹೆಚ್ಚು ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು.
ಪುರುಷ ವಿಭಾಗ: ಮಹಾರಾಷ್ಟ್ರ ಮಹಾನ್ ಭಾರತ ಕೇಸರಿ ಪೈ.ಜ್ಞಾನೇಶ್ವರ (ಮೌಳಿ) ಜಮದಾಳೆ ಜೊತೆ ಸೆಣಸಿದ ಹರಿಯಾಣದ ರಾಷ್ಟ್ರೀಯ ಮಟ್ಟದ ಪದಕ ವಿಜೇತ ಕುಸ್ತಿಪಟು ವಿಶಾಲ ಡೊಲು ಇವರು ಪ್ರಂಟ್ ಜೀಸಾ ಡಾವ್ ಪೇಚ್ ಮೂಲಕ ವಿಜಯದ ನಗೆ ಬೀರಿದರು. ದೆಹಲಿ ಪೈ.ಸಚಿನ ಕುಮಾರ ಜೊತೆ ರಾಣೆಬೆನ್ನೂರಿನ ಕರ್ನಾಟಕ ಕೇಸರಿ ಪೈ.ಕಾರ್ತಿಕ ಕಾಟೆ ಸೆಣಸಾಟದ ಕುಸ್ತಿಯಲ್ಲಿ ಕಾಟೆ ಇವರು ಏಕ ಲಂಗೀ ಡಾಂಗ್ ಮೂಲಕ ವಿಜಯ ಪತಾಕೆ ಹಾರಿಸಿದರು. ಧಾರವಾಡದ ಕರ್ನಾಟಕ ಕೇಸರಿ ಪೈ.ನಾಗರಾಜ ಬಸಿಡೋಣಿ ಇವರು ಏಕ ಚಕ್ಕ್ ಡಾವ್ ಪೇಚ್ ಮೂಲಕ ಹರಿಯಾಣದ ಪೈ.ಉದಯ ಸೋಲುಣಿಸಿದರು. ಕಲಬುರಗಿಯ ಪೈ.ಪ್ರವೀಣ ಹಿಪ್ಪರಗಿ ಜೊತೆ ಸೆಣಸಿದ ಮಹಾರಾಷ್ಟ್ರದ ಪೈ.ಪ್ರಣಿತ್ ಭೋಸಲೆ ಸೋಲುಂಡರು.ದಾವಣೆಗೆರೆಯ ಪೈ.ಬಸವರಾಜ ಹುದಲಿ ಜೊತೆ ಸೆಣಸಿದ ಸೊಲ್ಲಾಪೂರದ ಪೈ.ಸಾಗರ ಚೌಗಲೆ ವಿಜಯ ಪತಾಕೆ ಹಾರಿಸಿದರು. ಅಥಣಿಯ ಪೈ.ಮಹೇಶಕುಮಾರ ಲಂಗೋಟಿ ಜೊತೆ ಮಹಾರಾಷ್ಟ್ರದ ಪೈ.ಚೇತನ ಕತಗಾರ ಸೋಲುಂಡರು.
ಬಾಗಲಕೋಟೆಯ ಪೈ.ಕಾವೇರಿ ಯಾಡಹಳ್ಳಿ ಜೊತೆ ಗದಗದ ಪೈ.ಭುವನೇಶ್ವರಿ ನಗೆ ವಿಜಯದ ಪತಾಕೆ ಹಾರಿಸಿದರು. ಬೆಳಗಾವಿಯ ಪೈ.ಭಾಗ್ಯಶ್ರೀ ಜೊತೆ ಗದಗದ ಪೈ.ವೈಷ್ಣವಿ ನಡುವೆ ನಡೆದ ಕುಸ್ತಿ ಸಮಬಲಗೊಂಡವು. ಬೆಳಗಾವಿಯ ಪೈ.ನಿಹಾರಿಕಾ ಯಾದವ ಜೊತೆ ಮಹಾರಾಷ್ಟ್ರದ ಅಮೃತಾ ಮಿರಗೆ ಗೆಲುವಿನ ನಗೆ ಬೀರಿದರು.
ಮಾಜಿ ಪೈ.ರತ್ನಕುಮಾರ ಮಠಪತಿ, ತರಬೇತುದಾರ ನಾಗರಾಜ ಎ.ಆರ್.ಕೆ. ಆಕರ್ಷಕ ನಿರೂಪಣೆ ಮಾಡಿದರು. ಮಾಜಿ ಪೈ.ವಿಠ್ಠಲ ಅಂದಾನಿ, ಅಶೋಕ ಮತ್ತಿಕೊಪ್ಪ, ರಾಜೇಸಾಬ ಉಗರಗೋಳ, ನಾಗರಾಜ ಭಟ್ಟಿ, ಮೀರಾ, ಮಹಾಂತೇಶ ತುರಮರಿ, ಮಲ್ಲಿಕಾರ್ಜುನ ಹೊಂಗಲಮಠ, ಅಶೋಕ ನಾಗನೂರ ಪಂಚರಾಗಿ ಕಾರ್ಯನಿರ್ವಹಿಸಿದರು.