ರಾಮನಗರ: ಜಿಲ್ಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಲೋಕ ಅದಾಲತ್ ನಲ್ಲಿ ಜಿಲ್ಲೆಯ ಒಟ್ಟು 1,80,045 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಜಿಲ್ಲಾದ್ಯಂತ 58,502 ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ 12,071 ಪ್ರಕರಣಗಳನ್ನು, ಅದೇ ರೀತಿ ಒಟ್ಟು 1,76,602 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಂಡಿದ್ದು, ಅದರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ 3,620 ಪ್ರಕರಣಗಳನ್ನು ಹಾಗೂ 1,76,425 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಒಟ್ಟಾರೆಯಾಗಿ 1,80,045 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ಇತ್ಯರ್ಥಗೊಂಡ ಪ್ರಕರಣಗಳ ವಿವರ :ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು ಒಟ್ಟು 17, ನೆಗೋಷಿಯಲ್ ಇನ್ಸ್ಟ್ರುಮೆಂಟ್ ಕಾಯಿದೆ ಯ 137 ಪ್ರಕರಣಗಳು, ಸಾಲ ವಸೂಲಾತಿಯ 8 ಪ್ರಕರಣಗಳು, ಮೋಟಾರು ವಾಹನ ಅಪಘಾತದ 86 ಪ್ರಕರಣಗಳು, ಕಾರ್ಮಿಕ ವಿವಾದದ 34 ಪ್ರಕರಣಗಳು, ಗಣಿ ಮತ್ತು ಭೂವಿಜ್ಞಾನದ 5 ಪ್ರಕರಣಗಳು, ಎಲೆಕ್ಟ್ರಿಕ್ಸಿಟಿ ಕಾಯಿದೆಯ 26 ಪ್ರಕರಣಗಳು, 2ವೈವಾಹಿಕ ಪ್ರಕರಣಗಳು, ಒಂದು ಭೂಸ್ವಾಧೀನ ಪ್ರಕರಣ.
ಆಸ್ತಿ ವಿಭಾಗದ 61 ಪ್ರಕರಣಗಳು, ನಿರ್ದಿಷ್ಟ (ಸ್ಪೆಸಿಫಿಕ್ ಪರ್ಫಾರ್ಮೆನ್ಸ್) 36 ಪ್ರಕರಣಗಳು, ಇತರೆ ಜಾರಿ ಪ್ರಕರಣಗಳು 40, ಅಂತಿಮ ಡಿಕ್ರಿ ಕಾರ್ಯಾಚರಣೆಯ ಮೂರು ಪ್ರಕರಣಗಳು, ಎಲ್ಎಸಿ ಜಾರಿಯ ಐದು ಪ್ರಕರಣಗಳು,ಎಂವಿಸಿ ಎಕ್ಸಿಕ್ಯೂಷನ್ ನ 11 ಪ್ರಕರಣಗಳು, ಹಕ್ಕು ಘೋಷಣೆ ಶಾಶ್ವತ ನಿರ್ಭಂಧಕಾಜ್ಞೆ ಹಾಗೂ ಇತರೆ 49 ಪ್ರಕರಣಗಳು, ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ 43 ಪ್ರಕರಣಗಳು, ಲಘು ವ್ಯಾಜ್ಯದ 2,939 ಪ್ರಕರಣಗಳು, 99 ಇತರೆ ಕ್ರಿಮಿನಲ್ ಪ್ರಕರಣಗಳು,9 ಬ್ಯಾಂಕ್ ಸ್ಯೂಟ್ಸ್, 125 ಸಿಆರ್ ಪಿಸಿಯ 9 ಪ್ರಕರಣಗಳು, 1 ಡಿವಿ ಆಕ್ಟ್, ಪ್ರಿಲಿಟಿಕೇಶನ್ ನ 1,76,425 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಬಿ.ವಿ. ರೇಣುಕಾ ಅವರ ಮೇಲುಸ್ತುವಾರಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ತನ್ನು ನಿರ್ವಹಣೆ ಮಾಡಲಾಯಿತು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾದ್ಯಂತ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ನ್ಯಾಯಾಲಯಗಳು ಸೇರಿದಂತೆ ಒಟ್ಟು 19 ಪೀಠಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.ಮರು ಮದುವೆಯಾದ ದಂಪತಿ:
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದ, ಕೋರ್ಟ್ ಮೆಟ್ಟಿಲೇರಿದ್ದ ಜೋಡಿಯೊಂದು ಸೆ.13ರಂದು ಒಂದಾದ ಘಟನೆಗೆ ಲೋಕ ಅದಾಲತ್ ಸಾಕ್ಷಿಯಾಯಿತು.ಕಳೆದ 5 ವರ್ಷದ ಹಿಂದೆ ಮದುವೆ ನಾಗವೇಣಿ -ಸುನೀಲ್ ಕುಮಾರ್ ದಂಪತಿ ಭಿನ್ನಾಭಿಪ್ರಾಯದಿಂದ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಈ ಜೋಡಿಗೆ ಪರಸ್ಪರ ಮನಸ್ತಾಪ ಮರೆತು ಜೀವನ ನಡೆಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕ ತಿಳಿ ಹೇಳಿದರು. ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬಾಳುವೆ ಮಾಡುವುದಾಗಿ ಒಪ್ಪಿಕೊಂಡ ಜೋಡಿ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಒಂದಾದರು. ನ್ಯಾಯಾಧೀಶರು ಹಾಗೂ ವಕೀಲರ ಸಮ್ಮುಖದಲ್ಲಿ ದಂಪತಿಗಳು ಹೂವಿನ ಮಾಲೆ ಬದಲಿಸಿಕೊಂಡು ಮರು ಮದುವೆಯಾದರು.
14ಕೆಆರ್ ಎಂಎನ್ 4.ಜೆಪಿಜಿರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಮರು ಮದುವೆಯಾದ ದಂಪತಿ.