ಹೊಸಕೋಟೆ: ದೇಶದ ಅಭಿವೃದ್ಧಿ ಮತ್ತು ಇಂಜಿನಿಯರ್‌ಗಳ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅಗ್ರಗಣ್ಯರು ಎಂದು ಹೊಸಕೋಟೆ ತಾಲೂಕು ಕಸಾಪ ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜು ತಿಳಿಸಿದರು.
ಟೌನ್ ಬ್ಯಾಂಕ್ ಮಾಜಿ ನಿರ್ದೇಶಕ ಜಿಟಿ ಕೇಬಲ್ ಮೋಹನ್ ಮಾತನಾಡಿ, ಕಡು ಬಡತನದಲ್ಲಿ ಹುಟ್ಟಿದ ವಿಶ್ವೇಶ್ವರಯ್ಯ ನವರು ನಿರ್ದಿಷ್ಟ ಗುರಿಯೊಂದಿಗೆ ಬೀದಿ ದೀಪದ ಕೆಳಗೆ ಅಧ್ಯಯನ ಮಾಡಿಕೊಂಡು ಇಂಜಿನಿಯರ್ ಆಗಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡವರು. ವಿದ್ಯಾರ್ಥಿಗಳು ಇಂತಹ ಸಾಧಕರ ಆದರ್ಶಗಳನ್ನ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರು.
ಕಸಾಪ ಗೌರವ ಕಾರ್ಯದರ್ಶಿ ಬಚ್ಚೇಗೌಡ, ನಂದಗುಡಿ ಹೋಬಳಿ ಅಧ್ಯಕ್ಷ ತರಬಹಳ್ಳಿ ಹರೀಶ್, ಟೌನ್ ಅಧ್ಯಕ್ಷ ನಜೀಬುಲ್ಲಾ ಖಾನ್, ಸಂಘಟನಾ ಕಾರ್ಯದರ್ಶಿ ಬಿಎಂಟಿಸಿ ಮುನಿಸ್ವಾಮಿ, ಮಾಕನಹಳ್ಳಿ ಮಂಜುನಾಥ್, ಬಿಳಿ ಶಿವಾಲೆ ಮಂಜುನಾಥ್ ಹಾಜರಿದ್ದರು.ಫೋಟೋ : 15 ಹೆಚ್‌ಎಸ್‌ಕೆ 2
ಹೊಸಕೋಟೆಯ ಖಾಸಗಿ ಐಟಿಐ ಕಾಲೇಜಿನಲ್ಲಿ ಸರ್‌ಎಂ.ವಿಶ್ವೇಶ್ವರಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜು ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.