ತಂತ್ರಜ್ಞಾನದ ಸದ್ಭಳಕೆಯಿಂದ ದೇಶ ಪ್ರಗತಿ: ಕರಿಗೂಳಿ

KannadaprabhaNewsNetwork |  
Published : May 13, 2026, 01:30 AM IST
12ುಲು2 | Kannada Prabha

ಸಾರಾಂಶ

ವೈಜ್ಞಾನಿಕ ಚಿಂತನೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಮೂಲ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ತೋರುತ್ತಾ ತಂತ್ರಜ್ಞಾನ ಬಳಸಿಕೊಳ್ಳಬೇಕು

ಗಂಗಾವತಿ: ತಂತ್ರಜ್ಞಾನದ ಸದ್ಭಳಕೆಯಿಂದ ದೇಶ ಪ್ರಗತಿ ಸಾಧ್ಯ ಎಂದು ಪ್ರಾಚಾರ್ಯ ಪ್ರೊ.ಕರಿಗೂಳಿ ಹೇಳಿದರು.

ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈಜ್ಞಾನಿಕ ಚಿಂತನೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಮೂಲ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ತೋರುತ್ತಾ ತಂತ್ರಜ್ಞಾನ ಬಳಸಿಕೊಳ್ಳಬೇಕು ಹಾಗೂ ನಮ್ಮ ಆಲೋಚನೆ ಅನ್ವೇಷಣೆಗಳಾಗಿ ಪರಿವರ್ತಿಸಲು ತಂತ್ರಜ್ಞಾನ ಸಾಧನವಾಗಿ ಬಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಹಸಂಚಾಲಕ ಡಾ.ವಿರುಪಾಕ್ಷ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾನಗರಗಳಲ್ಲಿ ಮಾತ್ರ ಲಭ್ಯವಿರುವ ತಾರಾಲಯ ವೀಕ್ಷಣೆ ಸಾಧ್ಯವಾಗಿಸಿದೆ ಎಂದರು.

ಸಂಚಾರಿ ತಾರಾಲಯದ ಸಿಬ್ಬಂದಿ ಚರಂತಯ್ಯ ಬೂಸನೂರುಮಠ, ಯೋಜನೆ ವಿಶೇಷವಾಗಿ ಹಳ್ಳಿಗಳಲ್ಲಿರುವ ಶಾಲಾ ವಿದ್ಯಾರ್ಥಿಗಳಿಗಾಗಿಯೇ ರೂಪಿಸಿದ ಕಾರ್ಯಕ್ರಮವಾಗಿದ್ದು ಇದರ ಉಪಯೋಗ ಪಡೆದುಕೊಂಡು ಮೂಲ ವಿಜ್ಞಾನ ಅಧ್ಯಯನಕ್ಕೆ ಆಸಕ್ತಿ ತೋರಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕಾಲೇಜಿನವರೆಗೂ ತಮ್ಮ ತಾರಾಲಯ ಉಪಕರಣದೊಂದಿಗೆ ಬಂದು ಇಂತಹ ಅಪರೂಪದ ಕಾರ್ಯಕ್ರಮ ಸಾಧ್ಯ ಮಾಡಿದ್ದಕ್ಕೆ ಸಂಚಾರಿ ತಾರಾಲಯದ ಸಿಬ್ಬಂದಿ ಚರಂತಯ್ಯ ಬೂಸನೂರು ಮಠ ಮತ್ತು ಮಂಜುನಾಥ ಅವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಕರಿಗೂಳಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕ ಶಂಕ್ರಪ್ಪ,ರವಿಕುಮಾರ್, ಶಶಿಕುಮಾರ್ ಹಾಗೂ ಉಪನ್ಯಾಸಕ ಮಲ್ಲಯ್ಯ, ವೆಂಕಟರಾಜು, ಬಾಲಚಂದ್ರ, ದೇವರಾಜ ಸಾಯಿಕುಮಾರ್, ಪೆನಜಾ ಹಾಗೂ ಆಡಳಿತ ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಡಿಗೆ ಕಟ್ಟಡದಲ್ಲಿ 203 ಅಂಗನವಾಡಿಗಳು
ವಾಟ್ಸಾಪ್ ಮೂಲಕ ಮಾವಿನ ಹಣ್ಣು ವ್ಯಾಪಾರ