ರಾಷ್ಟ್ರೀಯ ಸರ್ಫಿಂಗ್‌ ಚಾಂಪಿಯನ್‌ಶಿಪ್‌: ಕಮಲಿ ಮೂರ್ತಿಗೆ ಡಬಲ್‌ ಪ್ರಶಸ್ತಿ

KannadaprabhaNewsNetwork |  
Published : Jun 02, 2026, 03:15 AM IST
ಸರ್ಫಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು | Kannada Prabha

ಸಾರಾಂಶ

ಮುಂಬರುವ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ಸರ್ಫಿಂಗ್‌ಗೆ ಅವಕಾಶವನ್ನು ಪಡೆದುಕೊಂಡ ತಮಿಳುನಾಡಿನ ಸರ್ಫರ್ ಕಮಲಿ ಮೂರ್ತಿ 7ನೇ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026ರ ಫೈನಲ್‌ನಲ್ಲಿ ಮಹಿಳಾ ಓಪನ್ ಮತ್ತು ಸರ್ಫಿಂಗ್ ಜೂನಿಯರ್ಸ್ ಅಂಡರ್‌ 18 ಬಾಲಕಿಯ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ.

ಮಂಗಳೂರು: ಮುಂಬರುವ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ಸರ್ಫಿಂಗ್‌ಗೆ ಅವಕಾಶವನ್ನು ಪಡೆದುಕೊಂಡ ತಮಿಳುನಾಡಿನ ಸರ್ಫರ್ ಕಮಲಿ ಮೂರ್ತಿ 7ನೇ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026ರ ಫೈನಲ್‌ನಲ್ಲಿ ಮಹಿಳಾ ಓಪನ್ ಮತ್ತು ಸರ್ಫಿಂಗ್ ಜೂನಿಯರ್ಸ್ ಅಂಡರ್‌ 18 ಬಾಲಕಿಯ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. ತಮಿಳುನಾಡಿನ ಮತ್ತೊಬ್ಬ ಸರ್ಫರ್ ಕಿಶೋರ್ ಕುಮಾರ್ ಪುರುಷರ ಓಪನ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಪ್ರದೀಪ್ ಪೂಜಾರ್ ಸರ್ಫಿಂಗ್ ಜೂನಿಯರ್ಸ್ ಅಂಡರ್‌ 18 ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಆಗುವ ಮೂಲಕ ಕರ್ನಾಟಕದ ಏಕೈಕ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದುಕೊಂಡರು. ಹೊಸದಾಗಿ ಪರಿಚಯಿಸಲಾದ ಅಂಡರ್‌ 14 ಬಾಲಕರ (ಗ್ರೋಮ್ಸ್) ಮತ್ತು ಅಂಡರ್‌ 14 ಬಾಲಕಿಯರ (ಗ್ರೋಮ್ಸ್) ವಿಭಾಗಗಳಲ್ಲಿ ಹರೀಶ್ ಪಿ. ಮತ್ತು ಧಮಯಂತಿ ಶ್ರೀರಾಮ್ ಕೂಡ ಕ್ರಮವಾಗಿ ವಿಜೇತರಾದರು. ಕರ್ನಾಟಕ ಸರ್ಕಾರ, ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್‌ ಸಹಯೋಗದೊಂದಿಗೆ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮಂಗಳೂರಿನ ತಣ್ಣೀರುಬಾವಿ ಬ್ಲೂ ಬೇ ಬೀಚ್‌ನಲ್ಲಿ ರಾಷ್ಟ್ರೀಯ ಸರ್ಫಿಂಗ್‌ ಚಾಂಪಿಯನ್‌ಶಿಪ್ ಆಯೋಜಿಸಿತ್ತು.

ಕಮಲಿ ಮೂರ್ತಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಮಹಿಳಾ ಓಪನ್ ವಿಭಾಗದಲ್ಲಿ 13.17 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದರು. ಶುಗರ್ ಶಾಂತಿ ಬನಾರ್ಸೆ (11.73) 2ನೇ, ಶ್ರಿಷ್ಟಿ ಸೆಲ್ವಂ (8.50) 3ನೇ ಸ್ಥಾನ ಪಡೆದರು. ತಮಿಳುನಾಡಿನ ಕಿಶೋರ್ ಕುಮಾರ್ 15.20 ಅಂಕಗಳೊಂದಿಗೆ ಪುರುಷರ ಓಪನ್ ವಿಭಾಗದಲ್ಲಿ ಚಾಂಪಿಯನ್‌ ಆದರು. ರಮೇಶ್ ಬುದಿಹಾಲ್ (12.87) 2ನೇ, ಶಿವರಾಜ್ ಬಾಬು (11.90) 3ನೇ, ಶ್ರೀಕಾಂತ್ ಡಿ.(9.93) 4ನೇ ಸ್ಥಾನ ಪಡೆದರು.

ಕರ್ನಾಟಕದ ಪ್ರದೀಪ್ ಪೂಜಾರ್ ಅದ್ಭುತ ಪ್ರದರ್ಶನ ನೀಡಿ ಸರ್ಫಿಂಗ್ ಜೂನಿಯರ್ಸ್ ಅಂಡರ್‌ 18 ಪುರುಷರ ವಿಭಾಗದಲ್ಲಿ ಆತಿಥೇಯ ರಾಜ್ಯದ ಏಕೈಕ ಚಾಂಪಿಯನ್‌ಶಿಪ್ (12.17 ಅಂಕ) ಪ್ರಶಸ್ತಿ ಪಡೆದವರು. ತಮಿಳುನಾಡಿನ ತಯಿನ್ ಅರುಣ್ (11.26) 2ನೇ ಸ್ಥಾನ, ಪ್ರಹ್ಲಾದ್ ಶ್ರೀರಾಮ್ (9.50) ಮೂರನೇ ಸ್ಥಾನ ಪಡೆದರು.

ಜೂನಿಯರ್ಸ್ ಅಂಡರ್‌18 ಬಾಲಕಿಯರ ವಿಭಾಗದಲ್ಲಿ ಕಮಲಿ ಮೂರ್ತಿ (14.83) ಅಂಕಗಳೊಂದಿಗೆ ಮೊದಲ ಸ್ಥಾನ, ಕರ್ನಾಟಕದ ಸಾನ್ವಿ ಹೆಗ್ಡೆ (5.67) 2ನೇ, ಆದ್ಯ ಸಿಂಗ್ (2.73) 3ನೇ ಸ್ಥಾನ ಪಡೆದರು.

ಹೊಸದಾಗಿ ಪರಿಚಯಿಸಲಾದ ಸರ್ಫಿಂಗ್ ಜೂನಿಯರ್ಸ್ ಅಂಡರ್‌ 14 ಬಾಲಕರ (ಗ್ರೋಮ್ಸ್) ವಿಭಾಗದಲ್ಲಿ, ಹರೀಶ್ ಪಿ. (17.23) ಅಂಕಗಳೊಂದಿಗೆ ಮೊದಲ ಸ್ಥಾನ, ಶೇಕ್ ದಾವೂದ್ ಎಸ್. (12.97) 2ನೇ, ಪ್ರಹ್ಲಾದ್ ಶ್ರೀರಾಮ್ (8.40) 3ನೇ ಸ್ಥಾನ ಪಡೆದರು. ಅಂಡರ್‌ 14 (ಗ್ರೋಮ್ಸ್‌) ಬಾಲಕಿಯರ ವಿಭಾಗದಲ್ಲಿ ಧಮಯಂತಿ ಶ್ರೀರಾಮ್ (10.50) 1ನೇ ಸ್ಥಾನ, ಅರಬೊಲು ನೇತ್ರಾ (8.13) 2ನೇ, ಸನ್ವಿತಾ ಕುಂದರ್ (5.54) 3ನೇ ಸ್ಥಾನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಧಕ್ಕೆ ನಿಂತ ಶಾಪಿಂಗ್‌ ಕಾಂಪ್ಲೆಕ್ಸ್ ಕಾಮಗಾರಿ
ಹಿಂದುತ್ವ ಉಳಿಸಲು ಹೆಚ್ಚಿಗೆ ಮಕ್ಕಳ ಹೊಂದಿ