ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಒತ್ತು; ದಯಾನಂದ ಪೈ

KannadaprabhaNewsNetwork |  
Published : Jun 02, 2026, 03:00 AM IST
ಬನ್ನಡ್ಕದ ವಿಶ್ವವಿದ್ಯಾನಿಲಯ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಬನ್ನಡ್ಕದ ವಿಶ್ವವಿದ್ಯಾನಿಲಯ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಬನ್ನಡ್ಕದ ನಳಿನಾಕ್ಷಿ ಸಭಾಭವನದಲ್ಲಿ ಕಾಲೇಜಿನ ಸಂಯೋಜಕ ಪ್ರೊ ಕುಮಾರ್ ಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಮೂಡುಬಿದಿರೆ: ಬನ್ನಡ್ಕದ ವಿಶ್ವವಿದ್ಯಾನಿಲಯ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಬನ್ನಡ್ಕದ ನಳಿನಾಕ್ಷಿ ಸಭಾಭವನದಲ್ಲಿ ಕಾಲೇಜಿನ ಸಂಯೋಜಕ ಪ್ರೊ ಕುಮಾರ್ ಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದ ಅತಿಥಿ, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಪೈ ಮುಖ್ಯ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಬೇಕಾಗುವ ಆತ್ಮಸ್ಥೆರ್ಯ ಬೆಳೆಸಲು ಕರೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಮುಖಂಡ ಬೋಳ ವಿಶ್ವನಾಥ ಕಾಮತ್ ಬಣ್ಣಡ್ಕ ಅವರು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಶಿಕ್ಷಕ-ರಕ್ಷಕ ಸಂಘದ ಕಾರ್ಯಾಧ್ಯಕ್ಷ ಎ ಎಸ್ ಕಾವೇರಮ್ಮ ಹಾಗೂ ಪಡುಮಾರ್ನಾಡು ಗ್ರಾಮ ಪಂಚಾಯಿತಿ ನಿರ್ಗಮಿತ ಸದಸ್ಯರಾದ ನಿತಿನ್ ಕೋಟ್ಯಾನ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ವೇಳೆ ಶೈಕ್ಷಣಿಕ ಸಾಧಕರನ್ನು, ಕ್ರೀಡಾ ಸಾಧಕರನ್ನು, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಸಾಫ್ಟ್‌ಬಾಲ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ತಂಡದ ಕ್ರೀಡಾ ಪಟುಗಳನ್ನು ಅಭಿನಂದಿಸಲಾಯಿತು. ಉತ್ತಮ ಎನ್. ಎಸ್. ಎಸ್ ಸ್ವಯಂ ಸೇವಕರಾದ ದ್ವಿತೀಯ ಬಿ.ಕಾಂನ ದೀಪ್ತಿ ಸುರೇಶ್ ಪೂಜಾರಿ ಹಾಗೂ ರಾಜೇಶ್, ಉತ್ತಮ ಕ್ರೀಡಾ ಸಾಧಕರಾದ ತೃತೀಯ ಬಿ.ಸಿ.ಎಯ ಸಂಗೀತಾ ಹಾಗೂ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ ಪಡೆದ ತೃತೀಯ ಬಿ ಎ ತರಗತಿಯ ಕುಮಾರಿ ಸುಕನ್ಯ ಇವರನ್ನು ಅಭಿನಂದಿಸಲಾಯಿತು. ಉಪನ್ಯಾಸಕರಾದ ಆಶಾ ಶಾಲೆಟ್ ಡಿಸೋಜ ಇವರು ಸ್ವಾಗತಿಸಿದರು. ಮಮತಾ ಬಿ ಎಸ್ ಇವರು ವಾರ್ಷಿಕ ವರದಿ ವಾಚಿಸಿದರು, ಸುರೇಶ್ ಇವರು ವಂದಿಸಿದರು, ಕುಮಾರಿ ಪುಷ್ಪ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರನ್ನೇ ಆತ್ಮೀಯವಾಗಿ ಸ್ವಾಗತಿಸಿ ಹೊಸ ಶೈಕ್ಷಣಿಕ ವರ್ಷದ ಸಂಭ್ರಮ!
ಸಂಸ್ಕಾರದ ಬೆಳಕನ್ನು ಅಂತರಂಗದಲ್ಲಿ ತುಂಬಿಕೊಳ್ಳಬೇಕು: ಡಾ. ರಾಹುಲ್ ದೇವರಾಜ್