ಜಗತ್ತಿನಲ್ಲಿಯೇ ಪ್ಯೂರ್ ಶಾಂಪೂ ಎಂದರೆ ಇದೆ ಹೂವಿನಿಂದ ಬರೋ ಜೆಲ್.
ನಮ್ಮ ಪ್ರಕೃತಿಯಲ್ಲಿ ಎಲ್ಲವೂ ಇದೆ, ತಾರುಣ್ಯದ ಜೊತೆ ಗಿಡಗಳಿಗೂ ಭಾವನೆಗಳಿವೆ. ಅದ್ಭುತವಾದ ಈ ಕಹಿ ಶುಂಠಿ ನರಿ ಕಬ್ಬು ಸಸ್ಯಗಳು ನೈಸರ್ಗಿಕ ಶಾಂಪೂ ಉತ್ಪಾದಿಸುತ್ತವೆ. ಇದು ಸಾಮಾನ್ಯ ಗಿಡವಲ್ಲ. ಈ ಗಿಡದ ಹೆಸರು ಬಿಟ್ಟರ್ ಜಿಂಜರ್. ಇದನ್ನು ಹಿಚುಕುವುದರಿಂದ ಈ ರೀತಿಯ ದ್ರವ ಬರುತ್ತದೆ.ಆ ದ್ರವವು ಒಂದು ರೀತಿಯ ಶಾಂಪೂ ರೀತಿಯ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಣವಾಗಿರುವುದಿಲ್ಲ ಮತ್ತು ಈ ದ್ರವವನ್ನು ನೇರವಾಗಿ ತಮ್ಮ ತಲೆಗೆ ಶ್ಯಾಂಪೂವಾಗಿ ಬಳಸಬಹುದು.ಆರೋಗ್ಯವಂತ ಈ ಶ್ಯಾಂಪೂ ವಿಭಿನ್ನವಾಗಿದೆ. ನಾವು ಪೇಟೆ ಪಟ್ಟಣದಲ್ಲಿ ಖರೀದಿಸುವ ಶ್ಯಾಂಪೂ ಪೌಚ್‌ಗಳು ರಾಸಾಯನಿಕಯುಕ್ತವಾಗಿದ್ದು, ಅಗ್ಗದ ದರದಲ್ಲಿ ಲಭಿಸುತ್ತವೆ. ಆದರೆ ಈ ಗಿಡವನ್ನು ನೋಡಿದರೆ, ಇದರಲ್ಲಿ ಬರುವ ಹೂವಿನ ಕೆಂಪಗಿನ ಗಾತ್ರದ ಹೂವಿನ ಮೂತಿಯನ್ನು ಹಿಂಡಿದಾಗ ಶ್ಯಾಂಪೂ ರೀತಿ ದ್ರವ ಬರುತ್ತದೆ. ಅತ್ಯಂತ ನೈಸರ್ಗಿಕ ಶ್ಯಾಂಪೂ ಎಂದೇ ಕರೆಯಬಹುದಾದ ಈ ದ್ರವ ನೋಡಲು ಆಕರ್ಷಕವಾಗಿರುತ್ತದೆ.ಕೂದಲ ಆರೈಕೆಗೆ ಇರುವ ಅತ್ಯುತ್ತಮ ಔಷಧೀಯ ಗುಣವೂ ಇದಕ್ಕಿದೆ ಎಂಬುದು ತಜ್ಞರ ಅಭಿಪ್ರಾಯ. ಈ ಸಸ್ಯ ಶುಂಠಿಯ ಒಂದು ಪ್ರಭೇದವಾಗಿದ್ದು, ಶುಂಠಿಯ ವಾಸನೆಯೂ ಬರುತ್ತದೆ. ಚರ್ಮರೋಗಗಳ ನಿವಾರಣೆಗೆ ಇಂತಹ ಅನೇಕ ಸಮಸ್ಯೆಗಳನ್ನು ನಿವಾರಿಸುವ ಸಾವಯವ ನಿಸರ್ಗದತ್ತ ಶ್ಯಾಂಪೂ ಇದು. ಹಿಂದೆ ಹಳ್ಳಿಗಳಲ್ಲಿ ಎರಪ್ಪೆ ಮರದ ಗೊಂಪು, ಬೆಳ್ಳಂಟೆ ಗೊಂಪು, ಸೀಗೆ, ಬಾಗೆ, ಕಡ್ಲೆ ಹುಡಿ, ತದನಂತರ ಸಾಬೂನು ಕೂದಲ ಸ್ನಾನಕ್ಕೆ ಬಳಕೆಯಲ್ಲಿತ್ತು. ಇತ್ತೀಚೆಗೆ ಅವೆಲ್ಲ ಮರೆಮಾಚಿ ಕೇವಲ ಶಾಂಪೂದ ಹಿಂದೆ ನಾವು ಬಿದ್ದಿದ್ದೇವೆ. ಆದರೆ ಈ ಸಾವಯವ ಶ್ಯಾಂಪೂಗಿರುವ ಮೌಲ್ಯ, ಶಕ್ತಿ ಮತ್ತು ಸಹಜತೆಯನ್ನು ಕೃತಕ ಶ್ಯಾಂಪೂಗಳಲ್ಲಿ ಕಾಣಲು ಸಾಧ್ಯವಿಲ್ಲ.
ಚಿತ್ರ: ಚಂದನ್ ಕುಮಾರ್ ಪೆರ್ನಾಜೆಬರಹ: ಕುಮಾರ್ ಪೆರ್ನಾಜೆ ಪುತ್ತೂರು.