ಗದಗ: ಹಿಂದೂ ಸನಾತನ ಧರ್ಮದಲ್ಲಿ ಪ್ರಕೃತಿ ಪೂಜೆ ಮಾಡುವ ವಾಡಿಕೆ ಇದೆ. ಶಮೀ ವೃಕ್ಷ ನವರಾತ್ರಿಯಲ್ಲಿ ಪೂಜಿಸುತ್ತೇವೆ ಬನ್ನಿ ಗಿಡದಲ್ಲಿ ಶ್ರೀದುರ್ಗಾದೇವಿ ವಾಸವಾಗಿದ್ದಾಳೆ ಎನ್ನುವ ನಂಬಿಕೆ ನಮ್ಮದು. ದುಷ್ಟ ಶಕ್ತಿ ಸಂಹಾರ ಮಾಡುವುದೇ ನವರಾತ್ರಿ ಪೂಜೆಯ ಸಂಕೇತವಾಗಿದೆ ಎಂದು ಆಧ್ಯಾತ್ಮ ಚಿಂತಕರು ಹಾಗೂ ದೇವಿಭಕ್ತ ರುಕ್ಷ್ಮೀಣಿಬಾಯಿ ದ್ವಾರಪಾಲಕ ಹೇಳಿದರು.
ಅವರು ಗದಗ ನಗರದ ಅಕ್ಕನ ಬಳಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಕ್ಷಸರ ಸಂಹಾರ ಮಾಡಿ ಸಾಧಿಸುವ ವಿಜಯವೇ ವಿಜಯದಶಮಿ ಹಬ್ಬಗಳು ತಮ್ಮದೇ ಆದ ಮಹತ್ವ ಪಡೆದುಕೊಂಡಿರುತ್ತವೆ. ಅವುಗಳನ್ನು ಕೇವಲ ಪೌರಾಣಿಕ ಅಥವಾ ಸಂಪ್ರದಾಯಿಕ ಹಿನ್ನೆಲೆಯಿಂದ ನೋಡದೆ ವಾಸ್ತವಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಅವುಗಳ ಮಹತ್ವದ ಅರಿವು ನಮಗಾಗುತ್ತದೆ ಎಂದರು.ಅಧ್ಯಕ್ಷೆ ಲಲಿತಾ ಬಾಳಿಹಳ್ಳಿಮಠ ಸ್ವಾಗತಿಸಿದರು. ಪ್ರಸಾದದ ಭಕ್ತಿ ಸೇವೆ ಶಾಂತಾ ಸಂಕನೂರ ವಹಿಸಿದ್ದರು. ದೀಪಾ ಪಟ್ಟಣಶೆಟ್ಟಿ ನಿರೂಪಿಸಿದರು. ಲಲಿತಾ ಇಂಗಳಳ್ಳಿ ಪ್ರಾರ್ಥಿಸಿದರು. ರೇಣುಕಾ ಅಮಾತ್ಯ ವಂದಿಸಿದರು. ಲತಾ ಮುತ್ತಿನಪೆಂಡಿಮಠ ಹಾಗೂ ಮಂಗಲಾ ನಾಲವಾತ್ವಡಮಠ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಜಯಶ್ರೀ ಬಾಳಿಹಳ್ಳಿಮಠ, ಬೀನಾ ಮಾನ್ವಿ, ಆರತಿ ಜೀರಂಕಳ ವಿಜೇತರಾದರು. ಹಿರಿಯ ಟ್ರಸ್ಟಿಗಳಾದ ಶಿವಲೀಲಾ ಕುರಡಗಿ, ಖಜಾಂಚಿ ಜಯಲಕ್ಷ್ಮೀ ಬಳ್ಳಾರಿ, ಉಮಾ ರಾಮನಕೊಪ್ಪ ಪರಿಚಯಿಸಿದರು.ನಾಗರತ್ನ ಹುಬಳಿಮಠ, ಮಂಜುಳಾ ಹುಬಳ್ಳಿಮಠ, ಗಿರಿಜಾ ನಾಲತ್ವಾಡಮಠ, ಮಂಗಲಾ ಗೊಡಚಿ, ಸುಜಾತಾ ಮಾನ್ವಿ, ರೇಖಾ ಉಮೇಶ ಶಗ್ಲಿಮಠ, ಶೈಲಾ ಭೂಸನೂರಮಠ, ನಿರ್ಮಲಾ ಹುಬಳಿಮಠ, ಕಲಾವತಿ ಪಟ್ಟಣಶೆಟ್ಟಿ, ಪುಷ್ಪಾ ಬಳ್ಳಾರಿ, ನೀತಾ ದುಂದೂರ, ಪುಷ್ಪಾ ಹಿರೇಮಠ, ಉಮಾ ಲಕ್ಷ್ಮೇಶ್ವರಮಠ, ಬೀನಾ ಮಾನ್ವಿ, ಪಾರ್ವತಿ ಮಾಳೆಕೊಪ್ಪಮಠ, ದಾನೇಶ್ವರಿ, ಸುಗಲಾ, ಸುವರ್ಣ ಹೊಸಂಗಡಿ ಮುಂತಾದವರು ಹಾಜರಿದ್ದರು.