ನವ್ ಕೀಸ್ ಶಾಲೆಯಲ್ಲಿ ಸಂಭ್ರಮದ ಪದಗ್ರಹಣ ಸಮಾರಂಭ

KannadaprabhaNewsNetwork |  
Published : Jun 30, 2024, 12:46 AM IST
47 | Kannada Prabha

ಸಾರಾಂಶ

ಎಲ್ಲಾ ನಾಯಕ ನಾಯಕಿಯರು ಪಥ ಸಂಚಲನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು

ಕನ್ನಡಪ್ರಭ ವಾರ್ತೆ ಮೈಸೂರು

ನವ್ ಕೀಸ್ ಶಾಲಾ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶದಿಂದ ನಾಯಕರ ಆಯ್ಕೆಯ ಪ್ರಕ್ರಿಯೆಯನ್ನು ವಿದ್ಯುನ್ಮಾನ ಮತದಾನದ ಮೂಲಕ ಮಾಡಲಾಗಿತ್ತು.

ಆಯ್ಕೆಯಾದ ಶಾಲಾ ನಾಯಕ ನಾಯಕಿ, ಶಾಲಾ ಉಪ ನಾಯಕ, ನಾಯಕಿ, ಕ್ರೀಡಾ ನಾಯಕ, ನಾಯಕಿ, ಶಾಲಾ ವಿದ್ಯಾರ್ಥಿಗಳ ಮುಖ್ಯ ಗುಂಪುಗಳಾದ ಕೋರಲ್, ಟೊಪಾಸ್, ಜೇಡ್ ಹಾಗೂ ಸಫಾಯರ್ ತಂಡಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ನಾಯಕ ನಾಯಕಿ, ಉಪನಾಯಕ ನಾಯಕಿಯರಿಗೆ ಬ್ಯಾಡ್ಜ್ ಹಾಗೂ ತಂಡದ ಧ್ವಜಗಳನ್ನು ನೀಡಿ ಪ್ರಮಾಣ ವಚನ ಬೋಧಿಸಲಾಯಿತು.

ಎಲ್ಲಾ ನಾಯಕ ನಾಯಕಿಯರು ಪಥ ಸಂಚಲನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ವಿಂಗ್ ಕಮಾಂಡರ್ ಜಿ.ಎಸ್. ಆಶಿಷ್ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು, ದೇಶ ಸೇವೆ, ನಾಯಕತ್ವ ಗುಣ, ಶಿಸ್ತಿನ ಜೀವನ ಕ್ರಮಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮವನ್ನು ಪ್ರಾಂಶುಪಾಲೆ ತಾರಕೇಶ್ವರಿ ಉದ್ಘಾಟಿಸಿದರು. ಡ್ರೋನ್ ಪ್ರದರ್ಶನವು ಎಲ್ಲಾ ವಿದ್ಯಾರ್ಥಿಗಳ ಮನಸ್ಸನ್ನು ಆಕರ್ಷಿಸಿತು. ಬಳಿಕ ಮುಖ್ಯ ಅತಿಥಿಗಳಾಗಿ ಮಾತನಾಡಿದ ಎನ್.ಸಿ.ಸಿಯ ಅನುಕೂಲತೆ ಮತ್ತು ಮಹತ್ವವನ್ನು ವಿವರವಾಗಿ ತಿಳಿಸಿಕೊಟ್ಟರು. ಶಾಲಾ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ