ಅಮರಪ್ಪ ಕುರಿ
ನವಲಿ:ನವಲಿ ಬಸ್ ನಿಲ್ದಾಣಕ್ಕೆ ಅನುದಾನದ ಕೊರತೆಯಿಂದ ಅರೆಬರೆ ಕಾಮಗಾರಿಯಾಗಿದ್ದು ಐದು ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ. ಹೀಗಾಗಿ ಬಸ್ ನಿಲ್ದಾಣ ಖಾಸಗಿ ವಾಹನಗಳ ನಿಲುಗಡೆಯ ಅಡ್ಡೆಯಾಗಿ ಮಾರ್ಪಟ್ಟಿದೆ.
5 ವರ್ಷದ ಹಿಂದೆ ಬಸವರಾಜ ದಢೇಸೂಗೂರು ಅವಧಿಯಲ್ಲಿ ಬಸ್ ನಿಲ್ದಾಣದ ಕಾಮಗಾರಿಗೆ ₹ 60 ಲಕ್ಷ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ, ಅನುದಾನದ ಕೊರತೆಯಿಂದಾಗಿ ನಿಲ್ದಾಣದ ಕಾಮಗಾರಿ ಅರೆಬರೆಯಾಗಿತ್ತು. ಸದ್ಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಎರಡು ಚಿಕ್ಕ ಮಳಿಗೆ, ಸಾರಿಗೆ ನಿಯಂತ್ರಕರ ಕೊಠಡಿ ನಿರ್ಮಾಣವಾಗಿದೆ. ಆದರೆ ಮೂಲಸೌಲಭ್ಯಗಳು ಸೇರಿದಂತೆ ಇತರೆ ಕೆಲಸಗಳು ಸಾಕಷ್ಟು ಉಳಿದುಕೊಂಡಿವೆ. ಜತೆಗೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದೆ. ಅನುದಾನಕ್ಕೆ ತಕ್ಕಂತೆ ಕಾಮಗಾರಿ ಮಾಡಲಾಗಿದೆ. ಇನ್ನಷ್ಟು ಸೌಲಭ್ಯ ಒದಗಿಸಬೇಕಾಗಿದೆ ಎಂಬ ಕಾರಣಕ್ಕೆ ಜನಪ್ರತಿನಿಧಿಗಳು ಬಸ್ ನಿಲ್ದಾಣ ಉದ್ಘಾಟಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಗ್ಲಾಸ್ ಪುಡಿಪುಡಿ:
ನಿಲ್ದಾಣದಲ್ಲಿ ಕಿಟಕಿ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಗ್ಲಾಸ್‌ಗಳನ್ನು ಕಿಡಿಗೇಡು ಪುಡಿ ಪುಡಿ ಮಾಡಿದ್ದಾರೆ. ನಿಲ್ದಾಣದ ಅನಾಥವಾಗಿದ್ದರಿಂದ ಕತ್ತಲಾಗುತ್ತಿದ್ದಂತೆ ತಂಡೋಪ ತಂಡವಾಗಿ ಆಗಮಿಸುವ ಕಿಡಿಗೇಟು ಅಲ್ಲಿಯೇ ಮದ್ಯ ಸೇವೆನೆ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಈ ವೇಳೆ ಕಲ್ಲಿನಿಂದ ಗ್ಲಾಸ್‌ಗಳನ್ನು ಒಡೆದಿದ್ದಾರೆ. ಇದನ್ನು ಪ್ರಶ್ನಿಸಿದರೆ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿದ ಘಟನೆಯೂ ನಡೆದಿದೆ.ಕಾರಟಗಿ, ಗಂಗಾವತಿ, ಕುಷ್ಟಗಿ, ಕೊಪ್ಪಳ, ತಾವರಗೇರಾ ಪಟ್ಟಣಗಳಿಗೆ ಪ್ರತಿ ನಿತ್ಯ ನೂರಾರು ಬಸ್‌ಗಳು ಸಂಚರಿಸಲಿದ್ದು ಸಾವಿರಾರು ಜನರು ಪ್ರಯಾಣಿಸುತ್ತಾರೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಕನಕಗಿರಿ, ಗಂಗಾವತಿ ರಸ್ತೆಯಲ್ಲಿ ನಿಲ್ಲುವುದರಿಂದ ಪ್ರಯಾಣಿಕರು ಮಳೆ, ಬಿಸಿಲು, ಗಾಳಿ ಎನ್ನದೆ ರಸ್ತೆಯಲ್ಲಿಯೇ ನಿಲ್ಲುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರಿಗೆ ವಾಹನಗಳ ತಂಗುದಾಣ:ಖಾಸಗಿ ವಾಹನಗಳ ಮಾಲೀಕರು ನಿಲ್ದಾಣದಲ್ಲಿ ತಮ್ಮ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಾರೆ. ಆರಂಭದಲ್ಲಿ ಸಾರಿಗೆ ನಿಯಂತ್ರಕರೊಬ್ಬರನ್ನು ನೇಮಕ ಮಾಡಲಾಗಿತ್ತು. ಬಳಿಕ ಅವರನ್ನು ಹಿಂದೆಕ್ಕೆ ಕರೆಸಿಕೊಂಡಿದ್ದರಿಂದ ಬಸ್ ನಿಲ್ದಾಣ ಖಾಸಗಿ ವಾಹನಗಳ ತಂಗುದಾಣವಾಗಿದೆ ಮಾರಟ್ಟ್ಟಿದೆ.
ನಿಲ್ದಾಣದಲ್ಲಿ ಗುಟ್ಕಾ ತಿಂದು ಉಗುಳುವುದು, ಮದ್ಯ ಸೇವಿಸಿ ಖಾಲಿ ಬಾಟಲಿ ಬಿಸಾಕಿರುವುದು, ಬೀಡಿ, ಸೀಗರೇಟ್ ಪ್ಯಾಕೇಟ್, ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿವೆ.ದುರ್ನಾತ:
ಅನುದಾನದ ಕೊರತೆಯಿಂದ ಬಸ್ ನಿಲ್ದಾಣದ ರಸ್ತೆಯನ್ನು ಡಾಂಬರೀಕರಣ ಮಾಡಿಲ್ಲ. ಮಳೆ ಬಂದರೆ ಬಸ್ ನಿಲ್ದಾಣದ ತುಂಬೆಲ್ಲ ನೀರು ಸಂಗ್ರಹಗೊಂಡು ದುರ್ನಾತ ಬಿರುತ್ತಿದೆ. ಇದರಿಂದ ನಿಲ್ದಾಣದ ಅಕ್ಕಪಕ್ಕ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.ಬಸ್ ನಿಲ್ದಾಣಕ್ಕೆ ಶಾಶ್ವತ ಹಾಗೂ ಉತ್ತಮ ಶೌಚಾಲಯ, ಚಾವಣಿ ಸೇರಿದಂತ ರಸ್ತೆ ನಿರ್ಮಾಣಕ್ಕೆ ₹ 2.20 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಹಣ ಬಿಡುಗಡೆಗೊಂಡ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು.
ವೆಂಕಟೇಶ ಎಇಇ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಕೊಪ್ಪಳ