ಮಧುಗಿರಿಯಲ್ಲಿ ನವರಾತ್ರಿ: ಗೊಂಬೆಗಳ ಜಾತ್ರೆ

KannadaprabhaNewsNetwork |  
Published : Oct 14, 2026, 01:45 AM IST
ಮಧುಗಿರಿಯ ಶ್ರ ಶಂಕರ ಮಠದಲ್ಲಿ  ಶ್ರೀಶಂಕರ ಸೇವಾ ಸಮಿತಿ ಪದಾಧಿಕಾರಿಗಳು ನವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ದೇವರ ಉತ್ಸವಗಳು ಮತ್ತು ಗೊಂಬೆಗಳನ್ನು ಕೂರಿಸಿದ್ದು ಆಕರ್ಷಣಿಯವಾಗಿದೆ. | Kannada Prabha

ಸಾರಾಂಶ

ಪ್ರದರ್ಶನದಲ್ಲಿರುವ ಗೊಂಬಗಳು: ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ, ನರಸಿಂಹ, ರಾವಣ ದರ್ಬಾರ್, ಗಿರಿಜಾ ಕಲ್ಯಾಣ, ಸಮುದ್ರಮಂಥನ, ವಾಸ್ತು ಲಕ್ಷ್ಮಿ, ವಿವಾಹ ಅರತಕ್ಷತೆ, ಉಪನಯನ, ಸೀಮಂತ, ನವದುರ್ಗೆಯರು, ಅಷ್ಟಲಕ್ಷ್ಮಿ, ಮೈಸೂರು ದಸರಾ ದರ್ಬಾರ್, ದಶಾವತಾರ, ಗೀತೋಪದೇಶ, ಆಚಾರ್ಯತ್ರಯರು, ಪಟ್ಟದ ಬೊಂಬೆ, ಸತ್ಯನಾರಾಯಣ ಸ್ವಾಮಿ ವ್ರತಗಳನ್ನು ಸಾಲು ಬದ್ಧವಾಗಿ ಕುಳ್ಳರಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸೈನ್ ಬೋರ್ಡ್ ಮಾದರಿಯಲ್ಲಿ ಬರೆದಿದ್ದಾರೆ.

ಶ್ರೀ ರಾಘವೇಂದ್ರ ಕಾಲೋನಿಯಲ್ಲಿರುವ ಶ್ರೀ ಶಂಕರ ಸಮುದಾಯ ಭವನದಲ್ಲಿ ಸಂಭ್ರಮ

ಕನ್ನಡಪ್ರಭವಾರ್ತೆ, ಮಧುಗಿರಿ

ಮಹಾಲಯ ಅಮಾವಾಸ್ಯೆ ಮುಗಿದು ನಾಡಿನಾದ್ಯಂತ ನವರಾತ್ರಿ ಪ್ರಾರಂಭವಾಗಿದ್ದು, ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಸಂಭ್ರಮ- ಸಡಗರ ಪ್ರಾರಂಭವಾಗಿದೆ.

ಮಧುಗಿರಿ ಪಟ್ಟಣದ ಶ್ರೀ ರಾಘವೇಂದ್ರ ಕಾಲೋನಿಯಲ್ಲಿರುವ ಶಂಕರ ಮಠದ ಶ್ರೀ ಶಂಕರ ಸಮುದಾಯ ಭವನದಲ್ಲಿ ಶ್ರೀ ಶಂಕರ ಸೇವಾ ಸಮಿತಿ ಪದಾಧಿಕಾರಿಗಳು ಆಯೋಜಿಸಿದ್ದಾರೆ. ಗೊಂಬೆಗಳನ್ನು ಅಂದವಾಗಿ ಜೋಡಿಸಿ ಪೂಜಿಸುವ ಗೊಂಬೆ ಹಬ್ಬ ಪ್ರಾರಂಭವಾಗಿದೆ.

ದೇವರುಗಳ ಮೂರ್ತಿಗಳು, ಪೌರಾಣಿಕ ಪಾತ್ರಗಳು, ಸಂತರ ವಿಗ್ರಹಗಳು, ಗ್ರಾಮೀಣ ಬದುಕನ್ನು ಬಿಂಬಿಸುವ ಗೊಂಬೆಗಳು, ಅಡುಗೆ ಮನೆಯ ಪರಿಕರಗಳು ಹಾಗೂ ವಿವಿಧ ಆಕರ್ಷಕ ಕಲಾಕೃತಿಗಳನ್ನು ಹಂತ ಹಂತವಾಗಿ ಜೋಡಿಸಿ ಪ್ರದರ್ಶಿಸಲಾಗಿದೆ. ಗೊಂಬೆಗಳು ಮತ್ತು ವಿದ್ಯುತ್ ದೀಪಗಳ ಅಲಂಕಾರ ಪುಟ್ಟ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದೆ.

ಗೊಂಬೆ ಪ್ರದರ್ಶನದಲ್ಲಿ ಚಂದನದಿಂದ ಕೆತ್ತಿದ ಸಾಂಪ್ರದಾಯಿಕ ಶೈಲಿಯ ''''''''ಪಟ್ಟದ ಗೊಂಬೆ ''''''''ಗೆ (ಗಂಡು-ಹೆಣ್ಣಿನ ಜೋಡಿ) ಪ್ರಥಮ ಪ್ರಾಶಸ್ತ್ಯ. ಶ್ರೀನಿವಾಸ-ಪದ್ಮಾವತಿಯ ಪ್ರತೀಕವೆಂದು ಭಾವಿಸಲಾಗುವ ಈ ಗೊಂಬೆಗೆ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಂದ ಸಿಗರಿಸಿರುವುದು ಅತ್ಯಂತ ಕಲಾತ್ಮ ಕವಾದ ಕೆಲಸ. ಮದುವೆ ಸಮಯದಲ್ಲಿ ಮನೆಯಿಂದ ನೀಡಲಾಗುವ ಈ ಗೊಂಬೆ ಸುಖ ದಾಂಪತ್ಯದ ಸಂಕೇತ ಎನ್ನುತ್ತಾರೆ.

ಪ್ರದರ್ಶನದಲ್ಲಿರುವ ಗೊಂಬಗಳು: ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ, ನರಸಿಂಹ, ರಾವಣ ದರ್ಬಾರ್, ಗಿರಿಜಾ ಕಲ್ಯಾಣ, ಸಮುದ್ರಮಂಥನ, ವಾಸ್ತು ಲಕ್ಷ್ಮಿ, ವಿವಾಹ ಅರತಕ್ಷತೆ, ಉಪನಯನ, ಸೀಮಂತ, ನವದುರ್ಗೆಯರು, ಅಷ್ಟಲಕ್ಷ್ಮಿ, ಮೈಸೂರು ದಸರಾ ದರ್ಬಾರ್, ದಶಾವತಾರ, ಗೀತೋಪದೇಶ, ಆಚಾರ್ಯತ್ರಯರು, ಪಟ್ಟದ ಬೊಂಬೆ, ಸತ್ಯನಾರಾಯಣ ಸ್ವಾಮಿ ವ್ರತಗಳನ್ನು ಸಾಲು ಬದ್ಧವಾಗಿ ಕುಳ್ಳರಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸೈನ್ ಬೋರ್ಡ್ ಮಾದರಿಯಲ್ಲಿ ಬರೆದಿದ್ದಾರೆ.

ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ಮಾತನಾಡಿ, ಈ ಗೊಂಬೆಗಳನ್ನು ಕುಳ್ಳರಿಸುವ ಪದ್ಧತಿಯನ್ನು ಕಳೆದ ಎರಡು ವರ್ಷದಿಂದ ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿ ಶಂಕರ ಭವನದ ಹಾಲ್ ನಲ್ಲಿ ಕುಳ್ಳರಿಸಲಾಗಿದೆ. ಪ್ರತಿನಿತ್ಯ ಶಾರದಾ ಮಾತೆಗೆ ವಿಶೇಷ ಅಲಂಕಾರಗಳು ನಡೆದು ತೀರ್ಥ ಪ್ರಸಾದ ವಿನಿಯೋಗಿಸಲಾಗುತ್ತಿದೆ. ಮಧುಗಿರಿ ಜನರು ಬಂದು ವೀಕ್ಷಿಸಬೇಕೆಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಮಾಧಾನ ಬದಿಗಿಟ್ಟು ಲಿಂಬಿಕಾಯಿ ಪರ ಪ್ರಚಾರ: ಕುಬೇರಪ್ಪ
ಗೊಂಬೆಗಳ ಪ್ರದರ್ಶನ ಸಂಸ್ಕೃತಿ, ಸಂಸ್ಕಾರಗಳ ಭಾವನಾತ್ಮಕ ಬೆಸುಗೆ: ಶಕುಂತಲಾ ಆನಂದ್