ಕೊಪ್ಪಹರಿಹರಪುರದ ಪ್ರಸಿದ್ಧ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಐದನೇ ದಿನ ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ (ಆಶ್ವಯುಜ ಶುಕ್ಲ ಪಂಚಮಿ) ಶ್ರೀ ಶಾರದಾ ಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡವು.
- ವಿಜೃಂಭಣೆಯ ಲಲಿತಾ ಹೋಮ
ಕನ್ನಡಪ್ರಭ ವಾರ್ತೆ ಕೊಪ್ಪ
ಹರಿಹರಪುರದ ಪ್ರಸಿದ್ಧ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಐದನೇ ದಿನ ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ (ಆಶ್ವಯುಜ ಶುಕ್ಲ ಪಂಚಮಿ) ಶ್ರೀ ಶಾರದಾ ಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡವು.
''''ವಾರುಣೀ'''' ರೂಪದಲ್ಲಿ ಜಗನ್ಮಾತೆ ದರ್ಶನ:
ನವರಾತ್ರಿ ಪ್ರಯುಕ್ತ ಜಗನ್ಮಾತೆ ಶ್ರೀ ಶಾರದಾ ಪರಮೇಶ್ವರಿಯನ್ನು ವಿಶೇಷ ‘ವಾರುಣೀ’ ಅಲಂಕಾರದಿಂದ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಮಹಾರಥಾರೋಹಣ, ಲಲಿತಾ ಪಂಚಮಿ ಹಾಗೂ ಸಕಲ ಸನ್ಮಂಗಳ ಮತ್ತು ಲೋಕಕಲ್ಯಾಣಾರ್ಥ ವಿಧಿವತ್ತಾಗಿ ಲಲಿತಾ ಹೋಮ ನೆರವೇರಿಸಲಾಯಿತು.
ಜಗದ್ಗುರುಗಳಿಂದ ವಿಶೇಷ ಪೂಜೆ, ದರ್ಬಾರ್ ಸೇವೆ: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ ದಿವ್ಯ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ಶಾರದಾ ಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ರಾತ್ರಿ ಶ್ರೀಚಕ್ರ ಪೂಜೆ ನಂತರ ಶ್ರೀಗಳ ದರ್ಬಾರ್ ಹಾಗೂ ಅಷ್ಟಾವಧಾನ ಸೇವೆಗಳು ಶಾಸ್ತ್ರೋಕ್ತವಾಗಿ ಜರುಗಿದವು.
ಸಂಜೆ 5.30ರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ವಿದ್ವಾನ್ ಈಶ್ವರ ಅಯ್ಯರ್ ಮತ್ತು ವೃಂದದವರಿಂದ ಭಕ್ತಿಪೂರ್ವಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ಗಾಯಕರ ಸುಮಧುರ ಕೃತಿಗಳ ಗಾಯನ ನೆರೆದಿದ್ದ ಭಕ್ತಸಮೂಹವನ್ನು ಭಕ್ತಿಭಾವದಲ್ಲಿ ತೇಲಿಸಿತು.
ಈ ಪಾವನ ಮಹೋತ್ಸವದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆ ಭಕ್ತಾದಿಗಳು ಪಾಲ್ಗೊಂಡು ವಿಶೇಷ ಪೂಜೆ, ಸೇವೆಗಳನ್ನು ಸಮರ್ಪಿಸಿ ಜಗನ್ಮಾತೆ ಹಾಗೂ ಶ್ರೀಗಳವರ ಅನುಗ್ರಹಕ್ಕೆ ಪಾತ್ರರಾದರು. ಭಕ್ತರಿಗೆ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀಮಠದ ಆಡಳಿತಾಧಿಕಾರಿಗಳಾದ ಬಿ.ಎಸ್. ಚಂದ್ರನ್ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶ್ರಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.