ಕನ್ನಡಪ್ರಭ ವಾರ್ತೆ ರಾಯಚೂರು
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವರಾತ್ರಿ ದಸಾರ ಉತ್ಸವದಲ್ಲಿ ಜಿಲ್ಲಾ ಮಟ್ಟದ ಪ್ರೌಢ ಹಾಗೂ ಕಾಲೇಜುಗಳ ಸ್ಫರ್ಧೆಯಲ್ಲಿ ಜಾನಪದ ನವದುರ್ಗೆ ನೃತ್ಯ, ಭರತ ನಾಟ್ಯ, ಸಮೋಹ ಗೀತೆ ಸ್ಪರ್ಧೆ ಆಯೋಜಿಸಲಾಗಿದ್ದು, ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹30 ಸಾವಿರ ನಗದು, ದ್ವಿತೀಯ ₹20 ಸಾವಿರ, ತೃತೀಯ ₹15 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ ₹25 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹10 ಸಾವಿರ ನಗದು ಬಹುಮಾನ ನೀಡಲಾಗುವುದು ಅದೇ ರೀತಿ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸಮೂಹ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹20 ಸಾವಿರ ನಗದು, ದ್ವಿತೀಯ ₹15 ಸಾವಿರ ಹಾಗೂ ತೃತೀಯ ₹10 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ ಎಂದು ವಿವರಿಸಿದರು.
ನೃತ್ಯ ತಂಡದ ಸ್ಪರ್ಧೆಯಲ್ಲಿ 12 ರಿಂದ 15 ವಿದ್ಯಾರ್ಥಿಗಳು, ಸಮೂಹ ಗೀತೆಗಳಲ್ಲಿ ವಾದ್ಯ ಮೇಳ ಸಮೇತ 8 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಪ್ರೌಢ ಶಾಲಾ ಮುಖ್ಯಾಧ್ಯಾಪಕ ಹಾಗೂ ಕಾಲೇಜು ಪ್ರಚಾರ್ಯರ ದೃಢೀಕರಣ ಪತ್ರವನ್ನು ಯಾದಿಗೆ ಲಗತ್ತಿಸಬೇಕು. ಆಸ್ತಕ ಕಲಾತಂಡಗಳು ಪಟ್ಟಿಯನ್ನು ಮುನ್ನೂರುಕಾಪು ಶಿಕ್ಷಣ ಸಂಸ್ಥೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ.ಶರಣಪ್ಪ ಗೋನಾಳ ಮೊಬೈಲ್ ನಂಬರ್ 94489-10253 ಮೂಲಕ ಸಂಪರ್ಕಿಸಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಮಾಜ ಅಧ್ಯಕ್ಷ ಪುಂಡ್ಲ ನರಸರೆಡ್ಡಿ, ಮುಖಂಡರಾದ ಗೋಪಾಲರೆಡ್ಡಿ, ಜಿ.ಬಸವರಾಜರೆಡ್ಡಿ, ನಗರಸಭೆ ಸದಸ್ಯ ಶ್ರೀನಿವಾಸರೆಡ್ಡಿ, ಭಂಗಿ ನರಸರೆಡ್ಡಿ, ಶಂಕರರೆಡ್ಡಿ, ರಾಜೇಂದ್ರರೆಡ್ಡಿ, ಚಂದ್ರಶೇಖರರೆಡ್ಡಿ ಇದ್ದರು.