ಇಂದ್ರಾಣಿಯಲಂಕಾರದಲ್ಲಿ ಶ್ರೀ ಶಾರದಾಂಬೆ । ಹರಿದು ಬಂದ ಜನಸಾಗರ
ಶನಿವಾರ ಪೀಠದ ಅಧಿದೇವತೆ ಶಾರದೆಗೆ ಇಂದ್ರಾಣಿ ಅಲಂಕಾರದಲ್ಲಿ ವಜ್ರಾಯುಧ ಧರಿಸಿ ದೇವೆಂದ್ರನ ಪಟ್ಟ ಮಹಿಷಿಯಾಗಿ ವೃತ್ರಾಸುರ ಮೊದಲಾದ ದುಷ್ಟದೈತ್ಯರ ಸಂಹರಿಸುವ ಈ ಅಲಂಕಾರದಲ್ಲಿ ಶಾರದೆ ನಯನ ಮನೋಹರ ವಾಗಿ ಕಂಗೊಳಿಸಿದಳು.
ಬೆಳಿಗ್ಗೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು.ನಂತರ ಶ್ರೀ ಮಠದ ಆವರಣದ ಶ್ರೀ ವಿದ್ಯಾಶಂಕರ,ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ,ಶ್ರೀ ಸುಬ್ರಮಣ್ಯ,ಕೋದಂಡರಾಮಸ್ವಾಮಿ,ಶ್ರೀ ಜನಾರ್ದನ ಸ್ವಾಮಿ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಿದರು.ಸಾಲು ಸಾಲು ಅಂಗಡಿಗಳು: ಶ್ರೀ ಮಠದ ಮುಂಬಾಗದಿಂದ ಭಾರತೀ ಬೀದಿವರೆಗೂ ರಸ್ತೆ ಇಕ್ಕೆಲಗಳಲ್ಲಿ ಸಾಲು ಸಾಲಾಗಿರುವ ಅಂಗಡಿ ಮುಂಗಟ್ಟುಗಳು ನವರಾತ್ರಿಗೆ ಇನ್ನಷ್ಟು ಮೆರಗು ನೀಡುತ್ತಿವೆ. ಜನರನ್ನು ಆಕರ್ಷಿಸುತ್ತಿದ್ದು ಬೆಳಗಿನಿಂದ ಅಂಗಡಿ ಮುಂಗಟ್ಟುಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುವುದು ಕಂಡುಬರುತ್ತಿದೆ.ರಾಜಬೀದಿ ಉತ್ಸವದಲ್ಲಿ ಬೇಗಾರು ಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರೊಂದಿಗೆ ವಿವಿಧ ಸಂಘಸಂಸ್ಥೆಗಳು,ಜಾನಪದ ಕಲಾ ತಂಡಗಳು,ಮಲೆನಾಡಿ ಜನಜೀವನ, ಸಂಸ್ಕೃತಿ ಪರಂಪರೆಯ ಸ್ಥಬ್ಧ ಚಿತ್ರಗಳು,ನೂರಾರು ವಿಪ್ರೋತ್ತಮರ ವೇದಘೋಷಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿತು. ವಿದ್ವಾನ್ ಶ್ರೀಕಾಂತ್ ಕೌಂಡಿನ್ಯನ್ ತಂಡದವರಿಂದ ಹಾಡುಗಾರಿಕೆ ನಡೆಯಿತು.
17 ಶ್ರೀ ಚಿತ್ರ 1-ಶೃಂಗೇರಿ ಶಾರದೆ ಮೋಹಿನಿಯಲಂಕಾರದಲ್ಲಿ ಕಂಗೊಳಿಸಿದಳು.