ಎನ್‌ಸಿಡಿಎಫ್‌ಐ ಸಹಕಾರಿ ಸಂಘಗಳ ಮುಕುಟವಿದ್ದಂತೆ

KannadaprabhaNewsNetwork |  
Published : Jul 07, 2025, 11:48 PM IST
ಗೋಕಾಕ | Kannada Prabha

ಸಾರಾಂಶ

ಸಹಕಾರಿ ತತ್ವಗಳನ್ನು ಬೆಳೆಸುವಲ್ಲಿಯೂ ಎನ್‌ಸಿಡಿಎಫ್‌ಐ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಶಾ ಅವರು ಸಂಸ್ಥೆ ಗುಣಗಾನ ಮಾಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ದೇಶದಲ್ಲಿರುವ ಎಲ್ಲ ಸಹಕಾರಿ ಸಂಘಗಳಿಗೆ ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳ ನಿಯಮಿತ (ಎನ್‌ಸಿಡಿಎಫ್‌ಐ) ಮುಕುಟದಂತಾಗಿದೆ. ಸಹಕಾರಿ ವಲಯದಲ್ಲಿ ಮಿಂಚಿನಂತೆ ಕೆಲಸ ಮಾಡುತ್ತಿರುವ ಎನ್‌ಸಿಡಿಎಫ್‌ಐ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ತಿಳಿಸಿದರು.

ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ಭಾನುವಾರ ಸುಮಾರು ₹30 ಕೋಟಿ ವೆಚ್ಚದ ಎನ್‌ಸಿಡಿಎಫ್ಐ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ವಾರ್ಷಿಕವಾಗಿ ಸುಮಾರು 7 ಸಾವಿರ ಕೋಟಿ ರುಪಾಯಿಗಳ ವಹಿವಾಟು ನಡೆಸುತ್ತಿರುವ ಈ ಸಂಸ್ಥೆಯು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ. ಇದೊಂದು ಸಹಕಾರಿ ವಲಯದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಉತ್ತರೋತ್ತರ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿದರು.

ದೇಶದಲ್ಲಿರುವ ಹಾಲು ಉತ್ಪಾದಕರ ಒಡೆತನದ ಮತ್ತು ನಿಯಂತ್ರಣದ ಸಂಸ್ಥೆಗಳಿಗೆ ಮಾರುಕಟ್ಟೆ ಒದಗಿಸುವ ಈ ಸಂಸ್ಥೆಯು ರೈತ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಸಹಕಾರಿ ತತ್ವಗಳನ್ನು ಬೆಳೆಸುವಲ್ಲಿಯೂ ಎನ್‌ಸಿಡಿಎಫ್‌ಐ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಶಾ ಅವರು ಸಂಸ್ಥೆ ಗುಣಗಾನ ಮಾಡಿದರು.

ಇದೇ ಸಂದರ್ಭದಲ್ಲಿ ಅವರು ನೂತನ ಕಟ್ಟಡದ ಸವಿ ನೆನಪಿಗಾಗಿ ಸಸಿಗೆ ನೀರುಣಿಸುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಚೇರಮನ್ ಡಾ.ಮೀನೇಶ್ ಷಾ, ಆಡಳಿತ ಮಂಡಳಿಯ ನಿರ್ದೇಶಕರಾದ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಂಗಲ್ ಜೀತ್ ರಾಯ್, ಶಾಮಲ್ ಭಾಯಿ ಪಟೇಲ್, ವೆಂಕಟರಾವ್ ನಾಡಗೌಡ, ಕೆ.ಎಸ್.ಮಣಿ, ನರೀಂದಿರಸಿಂಗ್ ಶೇರ್ಗಿಲ್, ಎಸ್.ರಘುರಾಮ್, ಸಮೀರಕುಮಾರ ಫರೀದಾ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಸಜ್ಜಾ ಸೇರಿದಂತೆ ಸಹಕಾರಿ ವಲಯದ ಅನೇಕ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ