ವಿಶ್ವಕರ್ಮ ಸಮಾಜದ ಪ್ರಗತಿಗೆ ಅಗತ್ಯ ನೆರವು: ಶಾಸಕ

KannadaprabhaNewsNetwork |  
Published : Apr 13, 2025, 02:06 AM IST
ಬಳ್ಳಾರಿಯ ತಾಳೂರು ರಸ್ತೆಯ ಚಿದಾನಂದ ರೆಡ್ಡಿ ಲೇಔಟ್‌ನಲ್ಲಿ ಬುಧವಾರ ಜರುಗಿದ ಜಿಲ್ಲಾ ವಿಶ್ವಕರ್ಮ ಸಮಾಜದ ಸಭಾಭವನ ಉದ್ಘಾಟನಾ ಸಮಾರಂಭಕ್ಕೆ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಚಾಲನೆ ನೀಡಿದರು.  | Kannada Prabha

ಸಾರಾಂಶ

ಜಿಲ್ಲೆಯ ವಿಶ್ವಕರ್ಮ ಸಮಾಜದ ಪ್ರಗತಿಗೆ ಪೂರಕವಾದ ಎಲ್ಲ ಅಗತ್ಯ ನೆರವು ನೀಡಲಾಗುವುದು.

ವಿಶ್ವಕರ್ಮ ಸಭಾಭವನ ಉದ್ಘಾಟನೆ ಮಾಡಿದ ನಾರಾ ಭರತ್ ರೆಡ್ಡಿ ಭರವಸೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲೆಯ ವಿಶ್ವಕರ್ಮ ಸಮಾಜದ ಪ್ರಗತಿಗೆ ಪೂರಕವಾದ ಎಲ್ಲ ಅಗತ್ಯ ನೆರವು ನೀಡಲಾಗುವುದು. ವಿಶ್ವಕರ್ಮ ಎಜ್ಯುಕೇಶನ್ ಟ್ರಸ್ಟ್‌ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಂತ ಹಂತವಾಗಿ ಅನುದಾನ ನೀಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು.

ಇಲ್ಲಿನ ತಾಳೂರು ರಸ್ತೆಯ ಗಂಗಮ್ಮ ಕಾಲನಿ ಕ್ರಾಸ್‌ನ ಚಿದಾನಂದ ರೆಡ್ಡಿ ಲೇಔಟ್‌ನಲ್ಲಿ ಬುಧವಾರ ಬಳ್ಳಾರಿ ಜಿಲ್ಲಾ ಶ್ರೀವಿಶ್ವಕರ್ಮ ಎಜ್ಯುಕೇಶನ್ ಟ್ರಸ್ಟ್ ಹಮ್ಮಿಕೊಂಡಿದ್ದ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ವಿಶ್ವಕರ್ಮ ಸಮಾಜವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಸಮುದಾಯದ ಹಾಸ್ಟೆಲ್ ನಿರ್ಮಾಣಕ್ಕೆ ಎಜ್ಯುಕೇಶನ್ ಟ್ರಸ್ಟ್‌ ಮುಂದಾಗಿದ್ದು ಅಗತ್ಯ ನೆರವು ನೀಡುವೆ. ಶಾಸಕರ ಅನುದಾನದಡಿ ಬೇಕಾದ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸಹ ನಾನು ಸಿದ್ಧ ಎಂದ ಶಾಸಕರು, ವಿಶ್ವಕರ್ಮ ಸಮುದಾಯದ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಟ್ರಸ್ಟ್ ಹಾಕಿಕೊಳ್ಳುವ ಯೋಜನೆಗಳಿಗೆ ಪೂರಕ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ, ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿಪೀಠದ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿ ಹಾಗೂ ಡಿ.ಹಿರೇಹಾಳ್ ವಿಶ್ವಕರ್ಮ ಪೀಠದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಸಭಾಭವನಕ್ಕೆ ಕೊಡುಗೆ ನೀಡಿದ ಹರ್ದಿಗೇರಿ ನರೇಂದ್ರಕುಮಾರ್ ಕುಟುಂಬ ಸದಸ್ಯರಾದ ಹರ್ದಿಗೇರಿ ಶ್ರೀಶೈಲಪ್ಪ, ಪ್ರಭಾವತಿ ಹಾಗೂ ಮಕ್ಕಳ ಸೇವೆ ಸ್ಮರಿಸಿದರಲ್ಲದೆ, ಸಮಾಜದ ಪ್ರಗತಿಗೆ ಪ್ರತಿಯೊಬ್ಬರೂ ಸಹಕಾರ ಮಾಡಿ ವಿಶ್ವಕರ್ಮ ಸಮುದಾಯವನ್ನು ಮುನ್ನಡೆಸಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಶ್ರೀವಿಶ್ವಕರ್ಮ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ ಆಚಾರ್ ಕಪ್ಪಗಲ್ಲು, ಕಾರ್ಯದರ್ಶಿ ವೀರಭದ್ರ ಆಚಾರ್, ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ಆಚಾರ್, ಉಪಾಧ್ಯಕ್ಷ ಸೂರ್ಯನಾರಾಯಣ ಆಚಾರ್, ಖಜಾಂಚಿ ಎಂ.ಕೆ. ರವೀಂದ್ರ, ಟ್ರಸ್ಟಿಗಳಾದ ಎಚ್‌.ವೀರಾಚಾರಿ, ಶ್ರೀಧರಗಡ್ಡೆ ಚಂದ್ರಶೇಖರ, ಪ್ರಭು ಪಾಂಚಾಳ, ಚಂದ್ರಶೇಖರ ಸೋನಾರ, ವಿಠಲರಾವ್ ಸೋನಾರ, ಕೃಷ್ಣಾಚಾರಿ, ವೆಂಕಟೇಶ್ ಬಡಿಗೇರ ಸೇರಿದಂತೆ ಟ್ರಸ್ಟ್‌ನ ಸದಸ್ಯರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ