ಮಾಜಿ ಸೈನಿಕರಿಗೆ ಅಗತ್ಯ ಸೌಲಭ್ಯ: ಕೊಂಡಿರ ನಾಣಯ್ಯ

KannadaprabhaNewsNetwork |  
Published : Nov 28, 2025, 03:00 AM IST
ರಿಪೀಟ್ | Kannada Prabha

ಸಾರಾಂಶ

ಸಂಘದ ವತಿಯಿಂದ ಮಾಜಿ ಸೈನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಸಂಘದ ಅಧ್ಯಕ್ಷರು ತಿಳಿಸಿರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಂಘದ ವತಿಯಿಂದ ಮಾಜಿ ಸೈನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಸಂಘದ ಅಧ್ಯಕ್ಷ ಕೊಂಡಿರ ನಾಣಯ್ಯ ಹೇಳಿದರು.

ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಜಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಘವು ಸತತವಾಗಿ ಪ್ರಯತ್ನಿಸುತ್ತಿದೆ. ನಾಪೋಕ್ಲು ವ್ಯಾಪ್ತಿಯ ಮಾಜಿ ಸೈನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲು ಜಿಲ್ಲಾ ಸಂಘದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದರು. ಮಾಜಿ ಸೈನಿಕರು ತಮ್ಮ ದಾಖಲೆಗಳಿಗಾಗಿ , ಅವುಗಳನ್ನು ಸರಿಪಡಿಸಲು ಸಂಘದ ಸಂಪರ್ಕದಲ್ಲಿ ಇರುತ್ತಾರೆ. ವಾರ್ಷಿಕವಾಗಿ ಜರಗುವ ಸಭೆಗೆ ಹಾಜರಾಗದೆ ದೂರವೇ ಉಳಿಯುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭ ಸಂಘದ ಬೆಳವಣಿಗೆಗೆ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಯಿತು.ಸಭೆಯಲ್ಲಿ ಸಂಘದ ಕಾರ್ಯದರ್ಶಿ ಕೇಟೋಳಿರ ಅಪ್ಪಚ್ಚ ವಾರ್ಷಿಕ ವರದಿ ಮಂಡಿಸಿದರು.ಸಭೆಯಲ್ಲಿ ಹಿರಿಯರಾದ ನಾಯಕಂಡ ಬೊಪಣ್ಣ , ಸಂಘದ ಉಪಾಧ್ಯಕ್ಷ ಅಪ್ಪುಮಣಿಯಂಡ ನಾಣಯ್ಯ, ಖಜಾಂಜಿ ಅಬ್ದುಲ್ ಕರೀಂ ಎಂ ಎಲ್, ನಿರ್ದೇಶಕರಾದ ಬಾಲೆಯಡ ಸೋಮಯ್ಯ, ಪುಲ್ಲೆರ ಪಳಗಪ್ಪ, ಕಂಬೆಯಂಡ ಅಪ್ಪಣ್ಣ, ಅಮ್ಮಂಡ ಅಶೋಕ್, ಪಾಡಿಯಮ್ಮಡ ಅಪ್ಪನಮಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ