ಭಾರತೀಯ ಮೀಸಲು ಪಡೆಗೆ ಅಗತ್ಯ ಸೌಲಭ್ಯ

KannadaprabhaNewsNetwork |  
Published : Jul 02, 2025, 12:20 AM IST
1ಕೆಜಿಎಫ್‌1 | Kannada Prabha

ಸಾರಾಂಶ

ಕಾನೂನು ಮತ್ತು ಸುವ್ಯಸ್ಥೆಯ ನಿರ್ವಹಣೆಯಲ್ಲಿ ಜಿಲ್ಲಾ ಪೊಲೀಸ್‌ರಿಗೆ ಸಹಾಯ ಮಾಡಲು ರಾಜ್ಯ ಮತ್ತು ಇತರ ರಾಜ್ಯಗಳಲ್ಲಿ ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳನ್ನು ನಿರ್ವಹಿಸಲು ವಿಪತ್ತು ನಿರ್ವಹಣೆ-ನೈಸರ್ಗೀಕ ವಿಪತ್ತುಗಳು ಮುಂತಾದ ತುತ್ರು ಸಂದರ್ಭಗಳಲ್ಲಿ ಭಾರತೀಯ ಮೀಸಲು ಪಡೆಯನನ್ನು ಬಳಸಿಕೊಳ್ಳಲಾಗುವುದು

ಕನ್ನಡಪ್ರಭ ವಾರ್ತೆ ಕೆಜಿಎಫ್ ಕೆಜಿಎಫ್ ನಗರದ ಕೈಗಾರಿಕಾ ವಲಯದಲ್ಲಿರುವ ೧೦೦ ಎಕರೆ ಪ್ರದೇಶದಲ್ಲಿ ಭಾರತೀಯ ಮೀಸಲು ಬೆಟಾಲಿಯನ್ ಪಡೆ ಕಾರ್ಯ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಎಡಿಜಿಪಿ ಉಮೇಶ್‌ಕುಮಾರ್ ಪರಿಶೀಲನೆ ನಡೆಸಿದರು.ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀಲಿ ನಕ್ಷೆ ಹಾಗೂ ಇತರೆ ಸಂಬಂಧಪಟ್ಟ ಕಚೇರಿಗಳ ಕಟ್ಟಡಗಳ ನಿರ್ಮಾಣ, ಪರೇಡ್ ಮೈದಾನ, ವಸತಿನೀಲಯಗಳು ಸೇರಿದಂತೆ ಎಲ್ಲ ಸೌಲಭ್ಯಗಳ ಒಳಗೊಂಡಂತೆ ಕಚೇರಿಯ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ತಿಳಿಸಿದರು. ಡಿಎಆರ್ ಕಚೇರಿಯಲ್ಲಿ ಕಾರ್ಯಾರಂಭ ಸ್ಥಳ ಪರಿಶೀಲನೆ ನಡೆಸಿದ ಎಡಿಜಿಪಿ ಉಮೇಶ್‌ಕುಮಾರ್ ಹಾಗೂ ಕೆಎಸ್‌ಆರ್‌ಪಿ ಐಜಿಪಿ ಸಂದೀಪ್‌ ಪಾಟೀಲ್, ಡಿಐಜಿಪಿ ದೀಪನ್, ಡಿಐಜಿಪಿ ಬಸವರಾಜ ಕೆಎಸ್‌ಆರ್‌ಪಿ, ಕಮಾಂಡೆಂಟ್ ರಾಮಕೃಷ್ಣಮುದ್ದೆಪಾಲ್, ಕೆಜಿಎಫ್ ಎಸ್ಪಿ ಶಾಂತರಾಜು ಅಧಿಕಾರಿಗಳು ತಂಡ ಕೆಜಿಎಫ್‌ನ ಡಿಎಆರ್ ಹಳೇಯ ಕಚೇರಿಯನ್ನು ಅಯ್ಕೆ ಮಾಡಿದ್ದು, ತ್ಕಾಲಿಕವಾಗಿ ಕಚೇರಿ ಸ್ಥಾಪಿಸಲಾಗುವುದು.

ನೇಮಕಾತಿ ವಿಳಂಬವಾಗುವುದರಿಂದ ತಾತ್ಕಾಲಿಕವಾಗಿ ಕೆ.ಎಸ್.ಆರ್‌ಪಿ ಘಟಕದ ಇತರೆ ಪಡೆಗಳಿಂದ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜನೆ ಮೇಲೆ ಭರ್ತಿ ಮಾಡಲು ಹಾಗೂ ಕೆ.ಎಸ್.ಆರ್.ಪಿ ಘಟಕದ ಇತರ ಪಡೆಗಳಿಂದ ಪಡೆದುಕೊಂಡು ಕಾರ್ಯನಿರ್ವಹಿಸಲಾಗುವುದೆಂದು ಐಜಿಪಿ ಸಂದಿಫ್ ಪಾಟೀಲ್ ತಿಳಿಸಿದರು.೧೦೦೭ ಹುದೆಗಳ ಸೃಷ್ಟಿ

ಭಾರತೀಯ ಮೀಸಲು ಪೊಲೀಸ್ ಪಡೆಗೆ ೧೦೦೭ ಹುದೆಗಳನ್ನು ಸೈಜಿಸಿ ತಾತ್ವಿಕ ಅನುಮೋದನೆಯನ್ನು ನೀಡಿ ಅದೇಶ ಹೊರಡಿಸಲಾಗಿದೆ. ಶೇ ೫೦:೫೦ ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಭಾರತೀಯ ಮೀಸಲು ಪಡೆ (ಬೆಟಾಲಿಯನ್) ಸ್ಥಾಪಿಸಲು ಕೆಜಿಎಫ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅವತಿ ಗ್ರಾಮ ಆಯ್ಕೆ ಮಾಡಲಾಗಿದೆ. ಇದರಿಂದಾಗ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಶಕ್ತಿ ದೊರೆದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಬಳಕೆ

ಕಾನೂನು ಮತ್ತು ಸುವ್ಯಸ್ಥೆಯ ನಿರ್ವಹಣೆಯಲ್ಲಿ ಜಿಲ್ಲಾ ಪೊಲೀಸ್‌ರಿಗೆ ಸಹಾಯ ಮಾಡಲು ರಾಜ್ಯ ಮತ್ತು ಇತರ ರಾಜ್ಯಗಳಲ್ಲಿ ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳನ್ನು ನಿರ್ವಹಿಸಲು ವಿಪತ್ತು ನಿರ್ವಹಣೆ-ನೈಸರ್ಗೀಕ ವಿಪತ್ತುಗಳು ಮತ್ತು ಮಾನವ ನಿರ್ಮಿತ ವ್ಯಾಪಾರ ಮೇಳಗಳ ಆಚರಣೆಗಳಂತಹ ಕರ್ತವ್ಯಗಳಿಗೆ ಬಲವನ್ನು ಒದಗಿಸಲು ಕಾಲಕಾಲಕ್ಕೆ ಸರಕಾರದಿಂದ ನಿಯೋಜಸಲಾದ ಇತರ ಕರ್ತವ್ಯಗಳನ್ನು ನಿರ್ವಹಿಸಲು ಭಾರತೀಯ ಮೀಸಲು ಪಡೆಯನ್ನು ಬಳಸಿಕೊಳ್ಳಲಾಗುತ್ತದೆ.

.

PREV

Recommended Stories

ಓಲಾ, ಊಬರ್‌ ರೀತಿ ರಾಜ್ಯದಲ್ಲಿ ಆ್ಯಂಬುಲೆನ್ಸ್ ಸೇವೆ ಶೀಘ್ರ ಆರಂಭ
ಬಡ ರೋಗಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯ