ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಲ್ಲಿ ನಡೆದ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದು ಬಾಂಧವರ ಗುರಿಯಾಗಿಸಿ ನಡೆಸಿದ ನರಮೇಧ ಹಾಗೂ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆಯನ್ನು ಖಂಡಿಸಿ ನಡೆದ ಮೌನ ಮೆರವಣಿಗೆ ಮತ್ತು ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಶ್ಮೀರದಲ್ಲಿ ನಡೆದ ಉಗ್ರರ ಕೃತ್ಯವನ್ನು ಖಂಡಿಸಿದ ಬೋಪಯ್ಯ ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಬಲ ದುರುಪಯೋಗಪಡಿಸಿಕೊಂಡು ಅನಾವಶ್ಯಕ ಕಿರುಕುಳ ನೀಡಿ ಅಮಾಯಕ ಯುವಕ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಕಾರಣಕರ್ತರಾದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಒಂದು ತಿಂಗಳು ಕಳೆದರೂ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದ ಅವರು, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿದರು.ಸರ್ಕಾರದ ವಿರುದ್ಧ ಆಕ್ರೋಶ:
ತಕ್ಷಣ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಪ್ರಮುಖ ಕಾರಣಕರ್ತನಾದ ಆರೋಪಿ ತೆನ್ನಿರಾ ಮೈನಾ ಬಂಧನ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಅಪ್ಪಚ್ಚು ರಂಜನ್, ಇತ್ತೀಚಿನ ದಿನಗಳಲ್ಲಿ ಹಿಂದುಗಳ ಹತ್ಯೆಗಳು ಅಧಿಕವಾಗುತ್ತಿವೆ. ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ವರ್ತಿಸುತ್ತಿವೆ ವಿನಯ್ ಆತ್ಮಹತ್ಯೆ ಆರೋಪಿಗಳ ಬಂಧನ ಆಗದಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಪ್ರಮುಖ ಕೋಡಿ ಚಂದ್ರಶೇಖರ್ ಆತ್ಮಹತ್ಯೆಯಲ್ಲಿ ಕೂಡ ತೆನ್ನಿರಾ ಮೈನಾ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಮಂಗಳೂರಿನಲ್ಲಿ ಯುವಕನ ಹತ್ಯೆಯಾಗಿದೆ ಎಂದು ಅವರು ಹೇಳಿದರು.
ಮೇಜರ್ ಜನರಲ್ ನಂದಾ ಅವರು ಮಾತನಾಡಿ, ಸನಾತನ ಹಿಂದೂ ಧರ್ಮದ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಸಕ್ತ ದಿನಗಳಲ್ಲಿ ಒಗ್ಗಟ್ಟಿನ ಅಗತ್ಯ ಇದೆ. ಪ್ರತಿ ಮನೆ ಮನೆಗಳಲ್ಲಿ ಈ ಬಗ್ಗೆ ಚರ್ಚೆ ಆಗಬೇಕಾಗಿದೆ. ಶಸ್ತ್ರಾಸ್ತ್ರಗಳ ಬಳಕೆಯ ಅರಿವು ಮೂಲಕ ರಕ್ಷಣೆ ಪಡೆಯುವ ಕೆಲಸ ಆಗಬೇಕಾಗಿದೆ ಎಂದರು.
ಹೋರಾಟ ನಿರಂತರ:
ಕಾರ್ಯಕ್ರಮಕ್ಕೆ ಮುನ್ನ ವಿನಯ್ ಸೋಮಯ್ಯ, ಕಾಶ್ಮೀರದಲ್ಲಿ ಹತ್ಯೆಗೊಳಗಾದ ಪ್ರವಾಸಿಗರು ಮತ್ತು ಸುಹಾಸ್ ಶೆಟ್ಟಿ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ತದನಂತರ ಮೆರವಣಿಗೆ ಮೂಲಕ ತಾಲೂಕು ತಹಸೀಲ್ದಾರ್ ಕಚೇರಿಗೆ ಸಾಗಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಟ್ರಸ್ಟ್ ಜಿಲ್ಲಾಧ್ಯಕ್ಷರಾದ ಮೈ ನಾ ಲೋಕೇಶ್, ಉಪಾಧ್ಯಕ್ಷರಾದ ಪಿ ಗಿರೀಶ್ , ಸಂಘಟನಾ ಕಾರ್ಯದರ್ಶಿ ರವಿಶಂಕರ್,ಬಿಜೆಪಿ ತಾಲೂಕು ಅಧ್ಯಕ್ಷ ಗೌತಮ್, ಪುರಸಭೆ ಸದಸ್ಯರಾದ ಜಯವರ್ಧನ್ ಅಮೃತರಾಜ್ , ಪ್ರಮುಖರಾದ ಭಾರತೀಶ್, ನಗರಾಧ್ಯಕ್ಷ ಎಂಎಂ ಚರಣ್, ಜಿ ಎಲ್ ನಾಗರಾಜ್, ಸೋಮೇಶ್, ಕಾಂತಿ ಸತೀಶ್, ನಾಗೇಶ್ ಕುಂದಲಪಾಡಿ, ಆರ್ ಕೆ ಚಂದ್ರ, ಶರತ್, ಯಮುನಾ ಚಂಗಪ್ಪ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಗಣಿ ಪ್ರಸಾದ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ವಿನಯ್ ಸೋಮಯ್ಯ ಸಹೋದರ ವಿವೇಕ್ ಸೋಮಯ್ಯ, ಪವಿತ್ರ ರತ್ನ ಯತೀಶ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಇದ್ದರು.