ಒಗ್ಗಟ್ಟಿನ ವೃತ್ತಿ ಜೀವನ ಅಗತ್ಯ: ನಾಗೇಂದ್ರ ಪ್ರಸಾದ್

KannadaprabhaNewsNetwork |  
Published : Aug 10, 2026, 03:00 AM IST
ಚಿತ್ರ : 7ಎಂಡಿಕೆ3 : ಶಾಮಿಯಾನ ವೖತ್ತಿಯಲ್ಲಿ ಕಾಯ೯ನಿವ೯ಹಿಸುತ್ತಾ ಬಂದ ಐವರನ್ನು ಸನ್ಮಾನಿಸಲಾಯಿತು, | Kannada Prabha

ಸಾರಾಂಶ

ಜನತೆಯ ಕಾರ್ಯಕ್ರಮಗಳ ಎಲ್ಲ ಅಗತ್ಯಗಳನ್ನು ಪೂರೈಸುವ ಶಾಮಿಯಾನ ಸಂಘದ ಸದಸ್ಯರ ಶ್ರಮ ಮೌಲ್ಯಕ್ಕೆ ನಿಲುಕದ್ದು. ಈ ವೖತ್ತಿಯಲ್ಲಿರುವವರು ಸಂಘದ ಮೂಲಕ ಒಗ್ಗಟ್ಟಿನಿಂದ ವೖತ್ತಿ ಜೀವನ ನಿರ್ವಹಿಸಬೇಕು ಎಂದು ಬಿ.ಆರ್. ನಾಗೇಂದ್ರ ಪ್ರಸಾದ್ ಹೇಳಿದರು.

ಮಡಿಕೇರಿ: ಜನತೆಯ ಕಾರ್ಯಕ್ರಮಗಳ ಎಲ್ಲ ಅಗತ್ಯಗಳನ್ನು ಪೂರೈಸುವ ಶಾಮಿಯಾನ ಸಂಘದ ಸದಸ್ಯರ ಶ್ರಮ ಮೌಲ್ಯಕ್ಕೆ ನಿಲುಕದ್ದು. ಈ ವೖತ್ತಿಯಲ್ಲಿರುವವರು ಸಂಘದ ಮೂಲಕ ಒಗ್ಗಟ್ಟಿನಿಂದ ವೖತ್ತಿ ಜೀವನ ನಿರ್ವಹಿಸಬೇಕು ಎಂದು ಬಿ.ಆರ್. ನಾಗೇಂದ್ರ ಪ್ರಸಾದ್ ಹೇಳಿದರು.

ನಗರದ ಹೊರ ವಲಯದಲ್ಲಿನ ಸ್ವಾಗತ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಅನಿಲ್ ಎಚ್.ಟಿ. ಮಾತನಾಡಿ, ಸದಾ ಸವಾಲಿನ ನಡುವೇ ಮಲೆನಾಡು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಮಿಯಾನ ವೃತ್ತಿಯ ಶ್ರಮ ಜೀವಿಗಳಿಗೆ ತಮ್ಮದೇ ಸಂಘಟನೆ ಅತ್ಯಗತ್ಯವಾಗಿತ್ತು ಎಂದರು.

ಕರ್ನಾಟಕ ರಾಜ್ಯ ಶಾಮಿಯಾನ, ಧ್ವನಿ, ಬೆಳಕು ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಬ್ದುಲ್ ಕರೀಂ ಅತ್ತಾರ್ ಮಾತನಾಡಿ, ಮುಂಬರುವ ದಿನಗಳಲ್ಲಿ ಗಣೇಶೋತ್ಸವ ಸಂದರ್ಭ ಡಿಜೆ ಅಳವಡಿಕೆ ಸಂದರ್ಭ ಕಠಿಣ ನಿಯಮಗಳನ್ನು ಪಾಲಿಸದೆ ನಿಯಮಗಳಲ್ಲಿ ಸಡಿಲಿಕೆ ಮಾಡಿ ಸಂಘದ ಸದಸ್ಯರಿಗೆ ನೆರವಾಗುವಂತೆ ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯ ಸಂಘದ ಸ್ಥಾಪಕಾಧ್ಯಕ್ಷ ಮೆಹಬೂಬ್ ಸಿದ್ದಾಪುರ ಮಾತನಾಡಿ, ಸಚಿವ ಸಂತೋಷ್ ಲಾಡ್ ಪ್ರಯತ್ನದಿಂದ ಕಾರ್ಮಿಕ ಇಲಾಖೆಯಲ್ಲಿ ಶಾಮಿಯಾನ ವ್ಯವಸ್ಥೆಯ ಕಾರ್ಮಿಕರು ನೋಂದಣಿಯಾಗಲು ಸಾಧ್ಯವಾಯಿತು ಎಂದರು.

ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘದ ನೂತನ ಅಧ್ಯಕ್ಷ ಅಜ್ಜೇಟಿರ ಲೋಕೇಶ್ ಮಾತನಾಡಿದರು.

ಸಂಘದ ಪ್ರಧಾನ ಕಾರ್ರ್ಯದರ್ಶಿ ಅವಿನ್ ಕುಮಾರ್ ವಂದಿಸಿ, ನವಿನ್ ಕುಲಾಲ್ ನಿರೂಪಿಸಿದರು.

ಶಾಮಿಯಾನ ವೖತ್ತಿಯಲ್ಲಿ ಕಾಯ್ಯನಿರ್ವಹಿಸುತ್ತಾ ಬಂದ ಐವರನ್ನು ಸನ್ಮಾನಿಸಲಾಯಿತು. ಮಡಿಕೇರಿಯ ಅನ್ವರ್ಸ್ ಮೂರ್ನಾಡಿನ ಇಸ್ಮಾಯಿಲ್, ಸೋಮವಾರಪೇಟೆಯ ಅಶೋಕ್, ಪೊನ್ನಂಪೇಟೆಯ ವಿಜಯನ್, ಕುಶಾಲನಗರದ ಮಂಜುನಾಥ್ ಅವರೊಂದಿಗೆ, ಸಂಘದ ಮೊದಲ ಮಹಿಳಾ ಸದಸ್ಯೆ ತಿತಿಮತಿಯ ಪಂಕಜಾ ಮತ್ತು ಸ್ವಾಗತ್ ಸಭಾಂಗಣದ ಬಿದ್ರುಪಣೆ ಗಣೇಶ್ ದಂಪತಿಯನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ.ಕ.: ಪಶುಪಾಲನಾ ಇಲಾಖೆಗೆ ತೀವ್ರ ಸಿಬ್ಬಂದಿ ಕೊರತೆ!
ಚೌಕಿ ರಂಗಶಾಲೆಯೂ ಆಗಿತ್ತು: ದಿವಾಣ ಶಿವಶಂಕರ ಭಟ್