ಬಾಯಿ ಕ್ಯಾನ್ಸರ್‌ಗೆ ಹೆದರಬೇಕಿಲ್ಲ: ಡಾ. ಚೂಂತಾರು

KannadaprabhaNewsNetwork |  
Published : Feb 07, 2026, 04:00 AM IST
ಡಾ.ಚೂಂತಾರು ಅವರ ಕೃತಿ ವಿತರಣೆ | Kannada Prabha

ಸಾರಾಂಶ

ಹೆಚ್ಚಿನ ಎಲ್ಲ ಬಾಯಿ ಕ್ಯಾನ್ಸರ್‌ಗಳು ತಡೆಗಟ್ಟಬಹುದಾದ ರೋಗವಾಗಿದ್ದು, ತಂಬಾಕು ಉತ್ಪನ್ನಗಳನ್ನು ಬಳಸದೆ ಇದ್ದಲ್ಲಿ ಖಂಡಿತವಾಗಿಯೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 90ರಷ್ಟು ಕ್ಷೀಣಿಸುತ್ತದೆ. ತಂಬಾಕು ಉತ್ಪನ್ನ ವರ್ಜಿಸಿದರೆ ಮುಂದೊದಗುವ ಅನಾಹುತ ತಡೆಗಟ್ಟಬಹುದು ಎಂದು ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ, ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ. ಮುರಲೀ ಮೋಹನ್ ಚೂಂತಾರು ಹೇಳಿದ್ದಾರೆ.

ಮಂಗಳೂರು: ಹೆಚ್ಚಿನ ಎಲ್ಲ ಬಾಯಿ ಕ್ಯಾನ್ಸರ್‌ಗಳು ತಡೆಗಟ್ಟಬಹುದಾದ ರೋಗವಾಗಿದ್ದು, ತಂಬಾಕು ಉತ್ಪನ್ನಗಳನ್ನು ಬಳಸದೆ ಇದ್ದಲ್ಲಿ ಖಂಡಿತವಾಗಿಯೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 90ರಷ್ಟು ಕ್ಷೀಣಿಸುತ್ತದೆ. ತಂಬಾಕು ಉತ್ಪನ್ನ ವರ್ಜಿಸಿದರೆ ಮುಂದೊದಗುವ ಅನಾಹುತ ತಡೆಗಟ್ಟಬಹುದು ಎಂದು ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ, ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ. ಮುರಲೀ ಮೋಹನ್ ಚೂಂತಾರು ಹೇಳಿದ್ದಾರೆ.

ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಬುಧವಾರ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಬಾಯಿ ಕ್ಯಾನ್ಸರ್ ಮಾಹಿತಿ ಶಿಬಿರ ಮತ್ತು ತಪಾಸಣಾ ಶಿಬಿರ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜರುಗಿತು.

ಒಂದು ವೇಳೆ ಬಾಯಿ ಕ್ಯಾನ್ಸರ್ ಬಂದರೂ ಆರಂಭಿಕ ಹಂತದಲ್ಲಿಯೇ ಅಂದರೆ ಸ್ಟೇಜ್ ಒಂದು ಮತ್ತು ಸ್ಟೇಜ್ ಎರಡರಲ್ಲಿ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಪಡಿಸಲು ಸಾಧ್ಯ. ಆದರೆ ಮುಂದುವರಿದ ಹಂತದಲ್ಲಿ ಚಿಕಿತ್ಸೆಗೆ ಸರಿಯಾಗಿ ಸ್ವಂದಿಸದೆ ಇರುವ ಸಾಧ್ಯತೆ ಹೆಚ್ಚು. ಹಳ್ಳಿ ಮದ್ದು, ಮಂತ್ರವಾದ, ಮತ್ತಿತರ ಅವೈಜ್ಞಾನಿಕ ಚಿಕಿತ್ಸೆಯಿಂದ ರೋಗ ಉಲ್ಬಣವಾಗಬಹುದೇ ಹೊರತು ಯಾವುದೇ ಪ್ರಯೋಜನ ಸಿಗದು ಎಂದು ಡಾ. ಚೂಂತಾರು ಹೇಳಿದರು.

ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯದ ಜಂಟಿ ಆಶ್ರಯದಲ್ಲಿ ಈ ಮಾಹಿತಿ ಶಿಬಿರ ನಡೆಯಿತು.

ದಂತ ವೈದ್ಯೆ ಡಾ. ರಾಜಶ್ರೀ ಮೋಹನ್, ದಂತ ಪರಿಚಾರಿಕೆಯರಾದ ರಮ್ಯಾ, ಚೈತ್ರ, ಸುಶ್ಮಿತಾ ಇದ್ದರು. ಹಲವಾರು ಮಂದಿ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದರು. ಇದೇ ಸಂದರ್ಭದಲ್ಲಿ ಡಾ. ಮುರಲೀ ಮೋಹನ್ ಚೂಂತಾರು ಅವರು ಬರೆದ ‘ಅರಿವು’ ಬಾಯಿ ಕ್ಯಾನ್ಸರ್ ಮಾರ್ಗದರ್ಶನ ಪುಸ್ತಕವನ್ನು ರೋಗಿಗಳಿಗೆ ಉಚಿತವಾಗಿ ಹಂಚಲಾಯಿತು ಮತ್ತು ಬಾಯಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರವನ್ನು ಹಂಚಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ