ರಫ್ತು ಪ್ರಮಾಣ ಹೆಚ್ಚಿಸುವುದು ಅಗತ್ಯ: ಯೋಗೀಶ್ ಸಲಹೆ

KannadaprabhaNewsNetwork |  
Published : Oct 31, 2026, 01:15 AM IST
30ಕೆಆರ್ ಎಂಎನ್ 4.ಜೆಪಿಜಿಮಾಗಡಿ ಪಟ್ಟಣದ ತಿರುಮಲೆ ಶ್ರೀ ಕುರುಹಿನಶೆಟ್ಟಿ ರಂಗನಾಥ ಸ್ವಾಮಿ ಅರವಂಟಿಕೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಫ್ತು ಕಾರ್ಯಾಗಾರವನ್ನು ಅತಿಥಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಮಾಗಡಿ: ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಉತ್ಪನ್ನಗಳಿದ್ದರೂ ರಫ್ತು ಪ್ರಕ್ರಿಯೆಗಳ ಅರಿವಿನ ಕೊರತೆಯಿಂದಾಗಿ ಉದ್ಯಮಿಗಳು ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಆರ್.ಯೋಗೀಶ್ ತಿಳಿಸಿದರು

ಮಾಗಡಿ: ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಉತ್ಪನ್ನಗಳಿದ್ದರೂ ರಫ್ತು ಪ್ರಕ್ರಿಯೆಗಳ ಅರಿವಿನ ಕೊರತೆಯಿಂದಾಗಿ ಉದ್ಯಮಿಗಳು ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಆರ್.ಯೋಗೀಶ್ ತಿಳಿಸಿದರು.

ಪಟ್ಟಣದ ತಿರುಮಲೆ ಶ್ರೀ ಕುರುಹಿನಶೆಟ್ಟಿ ರಂಗನಾಥಸ್ವಾಮಿ ಅರವಂಟಿಕೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಆಯೋಜಿಸಿದ್ದ ರಫ್ತು ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಉತ್ಪನ್ನಗಳ ಗುಣಮಟ್ಟದ ಜೊತೆಗೆ ಕೊರತೆ ಬ್ರಾಂಡಿಂಗ್ ಪ್ಯಾಕೇಜಿಂಗ್‌ಗೂ ಆದ್ಯತೆ ನೀಡಬೇಕು ಹಾಗೂ ರಫ್ತು ವಹಿವಾಟು ಆರಂಭಿಸಲು ಅಗತ್ಯವಿರುವ ಆಮದು ಮತ್ತು ರಫ್ತು ಕೋಡ್‌ಗಳನ್ನು ಪಡೆಯುವ ವಿಧಾನ ಹಾಗೂ ಅದಕ್ಕೆ ಬೇಕಾದ ದಾಖಲೆಗಳು ಕುರಿತು ಉದ್ಯಮಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉತ್ಪನ್ನಗಳನ್ನು ಹಡಗು, ವಿಮಾನ, ಸರಕು ಸಾಗಾಣಿಕೆಯನ್ನು ಅಂಚೆ ಇಲಾಖೆ ಮೂಲಕ ವಿದೇಶಗಳಿಗೆ ಕಳುಹಿಸಬಹುದು. ಸರಕುಗಳಿಗೆ ವಿಮೆ ಮಾಡಿಸುವ ಮಹತ್ವ ಹಾಗೂ ಸಣ್ಣ ಉದ್ಯಮಿಗಳು ಅಂಚೆ ಇಲಾಖೆ ಮೂಲಕ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಜವಳಿ ಸಚಿವಾಲಯ 2030ರ ವೇಳೆಗೆ ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತನ್ನು ನೂರು ಮಿಲಿಯನ್ ಅಮೆರಿಕನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಿದೆ. ಪ್ರಸ್ತುತ ಸುಮಾರು 35 ಬಿಲಿಯನ್ ಡಾಲರ್ ಮಟ್ಟದಲ್ಲಿರುವ ಭಾರತದ ಜವಳಿ ರಫ್ತನ್ನು ನಿಗದಿತ ಗುರಿಗೆ ತಲುಪಿಸಲು ಜಾಗತಿಕ ಮಾರುಕಟ್ಟೆಯಲ್ಲಿ ದೇಶಿಯ ವಸ್ತುಗಳ ರಫ್ತು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ. ಈ ಉದ್ದೇಶದಿಂದ ಉದ್ಯಮಿಗಳು ರಫ್ತು ಅವಕಾಶಗಳ ನೋಂದಣಿ ಪ್ರಕ್ರಿಯೆಗಳು ಹಾಗೂ ರಫ್ತು ವಹಿವಾಟಿನ ಕುರಿತು ಅರಿವು ಮೂಡಿಸಲು ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಯೋಗೀಶ್ ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಶೈಲಜಾ ಮಾತನಾಡಿ, ಇಲಾಖೆಯಿಂದ ಆಯೋಜಿಸಲಾಗುತ್ತಿರುವ ಯೋಜನೆಗಳ ಕುರಿತು ರೇಷ್ಮೆ ಹುರಿಗಾರರಿಗೆ ಹಾಗೂ ನೇಕಾರರಿಗೆ ಮಾಹಿತಿ ನೀಡಿದರು.

ತಿರುಮಲೆಯ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಜೆ.ವಿ. ದುರ್ಗಪ್ರಸಾದ್ ರಾವ್ ಅವರು ನೇಕಾರರಿಗೆ ಸರ್ಕಾರದಿಂದ ದೊರೆಯುವ ಹಣಕಾಸಿನ ನೆರವಿನ ಬಗ್ಗೆ ತಿಳಿಸಿದರು.

ಮಾಗಡಿ ಅಂಚೆ ಕಚೇರಿಯ ಮುಖ್ಯಸ್ಥರಾದ ರಂಗನಾಯಕಿ ಅಂಚೆ ಕಚೇರಿಯಿಂದ ರಫ್ತನ್ನು ಮಾಡುವ ಹಾಗೂ

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕೈಗಾರಿಕಾ ಸಲಹೆಗಾರರಾದ ಉಮೇಶ್, ಆಮದು ಮತ್ತು ರಫ್ತಿನ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಆರ್.ಆಶಾ, ಸಂಘದ ಅಧ್ಯಕ್ಷ ಎಂ.ಆರ್.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

30ಕೆಆರ್ ಎಂಎನ್ 4.ಜೆಪಿಜಿ

ಮಾಗಡಿ ಪಟ್ಟಣದ ತಿರುಮಲೆ ಶ್ರೀ ಕುರುಹಿನಶೆಟ್ಟಿ ರಂಗನಾಥ ಸ್ವಾಮಿ ಅರವಂಟಿಕೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಆಯೋಜಿಸಿದ್ದ ರಫ್ತು ಕಾರ್ಯಾಗಾರವನ್ನು ಅತಿಥಿಗಳು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ