ಕನ್ನಡಪ್ರಭ ವಾರ್ತೆ ಮಂಗಳೂರು
ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ಪ್ರಥಮ ರಾಂಕ್ ಪಡೆದಿದ್ದಾರೆ.ಒಟ್ಟು 720 ಅಂಕಗಳಲ್ಲಿ 720 ಅಂಕ ಪಡೆದು ಜನರಲ್ ಮೆರಿಟ್ ವಿಭಾಗದಲ್ಲಿ ಅವರು ಪ್ರಥಮ ರಾಂಕ್ ದಾಖಲಿಸಿದ್ದಾರೆ. ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ಮೊದಲ ಬಾರಿಗೆ ರಾಜ್ಯಕ್ಕೆ ಪ್ರಥಮ ರಾಂಕ್‌ನ್ನು ಅರ್ಜುನ್ ಕಿಶೋರ್ ತಂದುಕೊಟ್ಟಿದ್ದಾರೆ.
720ರಲ್ಲಿ 715 ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿ ಸಂಜನಾ ಸಂತೋಷ್ ಕಟ್ಟಿ ಜನರಲ್ ಮೆರಿಟ್ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 255ನೇ ರಾಂಕ್, 710 ಅಂಕ ಪಡೆದ ಉತ್ಸವ್ ಆರ್. 533ನೇ ರಾಂಕ್, 705 ಅಂಕ ಪಡೆದ ವಿಘ್ನೇಶ್ ಎಂ.ಆರ್. 1114ನೇ ರಾಂಕ್, 705 ಅಂಕ ಪಡೆದ ಮಿಹಿರ್ ಗಿರೀಶ್ ಕಾಮತ್ 1164ನೇ ರಾಂಕ್ ಪಡೆದರೆ, 705 ಅಂಕ ಪಡೆದ ಸಾಯಿ ಭೇಶಜ್ ಜಿ. 1223ನೇ ರಾಂಕ್, 700 ಅಂಕ ಪಡೆದ ಲಿಂಗರಾಜ್ ಹೀರೆಮಠ್ 1708ನೇ ರಾಂಕ್, 700 ಅಂಕ ಪಡೆದ ಪ್ರಣವ್ ಟಾಟಾ ಆರ್. 1737ನೇ ರಾಂಕ್, 700 ಅಂಕ ಪಡೆದ ಪ್ರತೀಕ್ ಪಿ. ಗೌಡ 1931ನೇ ರಾಂಕ್, 700 ಅಂಕ ಪಡೆದ ಆಕಾಶ್ ಎಸ್. ಕನಕವಾಡಿ 2013ನೇ ರಾಂಕ್, 700 ಅಂಕ ಪಡೆದ ಸಂಜನ್ ಡಿ. 2110ನೇ ರಾಂಕ್, 700 ಅಂಕ ಪಡೆದ ಸ್ವಸ್ತಿಕ್ ಅಖಿಲ್ ಶರ್ಮಾ 2197ನೇ ರಾಂಕ್, 700 ಅಂಕ ಪಡೆದ ಲೋಚನ್ ಬಿ.ಎಚ್. 2198ನೇ ರಾಂಕ್ ಪಡೆದಿದ್ದಾರೆ.ಜನರಲ್ ಮೆರಿಟ್‌ನಲ್ಲಿ ಅಖಿಲ ಭಾರತ ಮಟ್ಟದ ಮೊದಲ ಒಂದು ಸಾವಿರ ರಾಂಕ್‌ಗಳಲ್ಲಿ 4 ರಾಂಕ್ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರೆತಿದೆ.ದೆಹಲಿ ಏಮ್ಸ್‌ಗೆ ಸೇರುವೆ: ಅರ್ಜುನ್
ನೀಟ್‌ನಲ್ಲಿ ರಾಂಕ್ ಬರುವ ನಿರೀಕ್ಷೆ ಇತ್ತು. ಆದರೆ ಮೊದಲ ರಾಂಕ್ ಬರುತ್ತದೆ ಎಂದುಕೊಂಡಿರಲಿಲ್ಲ. ಇದು ಬಹಳ ಖುಷಿ ಕೊಟ್ಟಿದೆ. ಮುಂದಿನ ವ್ಯಾಸಂಗಕ್ಕಾಗಿ ದೆಹಲಿಯ ಏಮ್ಸ್ ಸೇರುವ ಬಯಕೆ ಇದು ಎಂದು ಅರ್ಜುನ್ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.ವಿಶೇಷವಾಗಿ ಎಕ್ಸ್‌ಪರ್ಟ್ ಕಾಲೇಜಿನ ನೀಟ್ ಮೊಡ್ಯುಲ್‌ಗಳು, ಉಪನ್ಯಾಸಕರು ನೀಡಿದ ಟಿಪ್ಸ್, ನೋಟ್ಸ್‌ಗಳು, ಎನ್‌ಸಿಆರ್‌ಟಿ ಪಠ್ಯಪುಸ್ತಕದ ಜತೆಗೆ ನನ್ನ ಶ್ರಮ ಸೇರಿದ್ದರಿಂದ ರಾಂಕ್ ಗಳಿಸಲು ಸಾಧ್ಯವಾಯಿತು ಎಂದರು. ಮೈಸೂರಿನ ಗೋಕುಲಂ ನಿವಾಸಿ, ಮೈಸೂರು ಮೆಡಿಕಲ್ ಕಾಲೇಜಿನ ಫಾರ್ಮಾಕಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಕಿಶೋರ್, ಮೈಸೂರಿನ ಸೀನಿಯರ್ ಗೈನೋಕೋಲಾಜಿಸ್ಟ್ ಡಾ. ರಶ್ಮಿ ಅವರ ಪುತ್ರ. ನೀಟ್‌ನಲ್ಲಿ ರಾಂಕ್ ಪಡೆದ ಅರ್ಜುನ್ ಕಿಶೋರ್ ಅವರನ್ನು ಹೆತ್ತವರು ಸಿಹಿ ನೀಡಿ ಸಂಭ್ರಮಿಸಿದರು.