ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಇಂಗಳೇಶ್ವರದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳ ೯೧ನೇ ಜಾತ್ರಾ ಮಹೋತ್ಸವದಂಗವಾಗಿ ಮಂಗಳವಾರ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಸಹಯೋಗ ಹಮ್ಮಿಕೊಂಡಿದ್ದ ಇಂಗಳೇಶ್ವರ ಉತ್ಸವದ ಮಹಿಳಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿ, ಜ್ಞಾನವೇ ಸಕಲ ಶಕ್ತಿ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಹೂವಿನಹಿಪ್ಪರಗಿ ಪತ್ರಿಮಠದ ದ್ರಾಕ್ಷಾಯಿಣಿ ಮಾತಾಜಿ ಆಶೀವ೯ಚನ ನೀಡಿದರು. ಮಹಿಳೆಗೆ ತಾಯಿಯ ಸಂಸ್ಕಾರ ಪ್ರಭಾವ ಬೀರುವದು. ತಾಯಿ ದೇವರ ಸ್ವರೂಪಿ. ಕುಟುಂಬದ ನಿವ೯ಹಣೆ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಡಿವಾಳಮ್ಮ ನಾಡಗೌಡ ಮಾತನಾಡಿ, ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದಿದ್ದಾಳೆ. ಬಸವಾದಿ ಶರಣರು ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಿದ್ದು, ನಂತರ ಡಾ.ಬಾಬಾಸಾಹೇಬ ಅಂಬೇಡ್ಕರ ಸಂವಿಧಾನದ ಮೂಲಕ ಮಹಿಳೆಗೆ ಸಮಾನತೆಯ ಹಕ್ಕುಗಳನ್ನು ನೀಡಿ ಸಮಥ೯ರನ್ನಾಗಿ ಮಾಡಿದರು ಎಂದು ಹೇಳಿದರು.ಉಪನ್ಯಾಸ ನೀಡಿದ ಸಾಹಿತಿ ಶಿಲ್ಪಾ ಭಸ್ಮೆ ಮಾತನಾಡಿ, ಇತ್ತೀಚಿಗೆ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಬಾನು ಮುಸ್ತಾಕ್ ಅವರ ಸಾಹಿತ್ಯ ದೇಶಕ್ಕೆ ಕನ್ನಡ ಸಾಹಿತ್ಯ ಪರಿಚಯಿಸಿದ ಕೀರ್ತಿ ಮಹಿಳಾ ಸಮಾಜಕ್ಕೆ ಸಲ್ಲುತ್ತದೆ. ಪಾಕಿಸ್ತಾನ ಯುದ್ಧದ ರೂವಾರಿ ಸೂಫಿಯಾ ಖುರೇಶಿ, ವ್ಯೂಮ್ ಸಿಂಗ್ ಮಹಿಳೆಯರು ನೇತೃತ್ವದ ವಹಿಸಿದ್ದು ಅತ್ಯಂತ ಶ್ಲಾಘನೀಯ. ಮಹಿಳೆಯರ ಸ್ಥಾನ ಪಡೆಯುವ ಶಕ್ತಿ ಮಹಿಳೆಯರೇ ಪಡೆಯಬೇಕು ಎಂದರು.ಸಾಹಿತಿ ರಶ್ಮೀ ಬದ್ನೂರ, ಚಿತ್ರ ಕಲಾ ಮಂಡಳಿ ಸದಸ್ಯೆ ರಾಜೇಶ್ವರಿ ಮೋಪಗಾರ, ಸಾಹಿತಿ ಶಾಂತಾ ಬಿರಾದಾರ ಮಾತನಾಡಿದರು.