ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡ ಸರ್ವೇಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ

KannadaprabhaNewsNetwork |  
Published : Dec 08, 2024, 01:19 AM ISTUpdated : Dec 08, 2024, 08:49 AM IST
BBMP

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ಗುರುತಿಸುವ ಕಾರ್ಯ ನೆನೆಗುದಿಗೆ ಬಿದ್ದಿದು, ನಾಮಕವಸ್ಥೆಗೆ ಅನಧಿಕೃತ ಕಟ್ಟಡ ಸರ್ವೇ ಕಾರ್ಯವನ್ನು ಬಿಬಿಎಂಪಿ ನಡೆಸುತ್ತಿದಂತೆ ಕಾಣುತ್ತಿದೆ.

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ಗುರುತಿಸುವ ಕಾರ್ಯ ನೆನೆಗುದಿಗೆ ಬಿದ್ದಿದು, ನಾಮಕವಸ್ಥೆಗೆ ಅನಧಿಕೃತ ಕಟ್ಟಡ ಸರ್ವೇ ಕಾರ್ಯವನ್ನು ಬಿಬಿಎಂಪಿ ನಡೆಸುತ್ತಿದಂತೆ ಕಾಣುತ್ತಿದೆ.

ಅಕ್ಟೋಬರ್‌ನಲ್ಲಿ ಮಹದೇವಪುರದ ಬಾಬುಸಾಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿತದಿಂದ 9 ಮಂದಿ ಕಾರ್ಮಿಕರು ಮೃತಪಟ್ಟ ಹಿನ್ನೆಲೆ ನಗರದ ಎಲ್ಲ ನಿರ್ಮಾಣ ಹಂತದಲ್ಲಿರುವ ಅನಧಿಕೃತ ಕಟ್ಟಡಗಳನ್ನು 1 ವಾರದಲ್ಲಿ ಗುರುತಿಸಿ ವರದಿ ನೀಡುವಂತೆ ಬಿಬಿಎಂಪಿಯ ಎಲ್ಲಾ 8 ವಲಯದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು.

ಬಿಬಿಎಂಪಿಯು ನ.28ರಿಂದ ಅಧಿಕೃತವಾಗಿ ಸರ್ವೇಕಾರ್ಯ ಆರಂಭಿಸಿದ್ದು, 1.5 ತಿಂಗಳು ಕಳೆದರೂ ಅನಧಿಕೃತ ಕಟ್ಟಡ ಸರ್ವೇ ಕಾರ್ಯ ಪ್ರಗತಿ ಕಂಡಿಲ್ಲ.

ಈವರೆಗೆ ಬಿಬಿಎಂಪಿಯ 8 ವಲಯದಲ್ಲಿ ಕೇವಲ 2,280 ಅನಧಿಕೃತವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳು ಎಂದು ಗುರುತಿಸಿದ್ದಾರೆ.

ಈ ಪೈಕಿ ನಕ್ಷೆ ಮಂಜೂರಾತಿಯನ್ನು ಬಿಬಿಎಂಪಿಯಿಂದ ಪಡೆದುಕೊಂಡು ಉಲ್ಲಂಘಿಸಿದ ಕಟ್ಟಡಗಳು ಹಾಗೂ ಬಿ ಖಾತಾ ಆಸ್ತಿಯಲ್ಲಿ ಹಾಗೂ ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಾಣ ಮಾಡುತ್ತಿರುವ ಎಂಬ 2 ಭಾಗ ಮಾಡಲಾಗಿದೆ.

ವಲಯ ಆಯುಕ್ತರಿಂದ ನೋಟಿಸ್‌ ಇಲ್ಲ: ಅನಧಿಕೃತ ಕಟ್ಟಡಗಳ ಸರ್ವೇ ಹಾಗೂ ನೋಟಿಸ್‌ ಜಾರಿ ಮಾಡಿ ಕ್ರಮಕೈಗೊಳ್ಳುವ ಅಧಿಕಾರಿವನ್ನು ವಲಯ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ, ವಲಯ ಮಟ್ಟದ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುತ್ತಿಲ್ಲ. ಅನಧಿಕೃತ ಕಟ್ಟಡ ಎಂದು ಗುರುತಿಸಿರುವ ಕಟ್ಟಡಗಳಿಗೂ ನೋಟಿಸ್‌ ಮಾಡುವ ಕೆಲಸವನ್ನು ವಲಯ ಆಯುಕ್ತರು ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

ಪಟ್ಟಿಯಿಂದ ಕೈ ಬಿಡುವ ಕೆಲಸ: ಅನಧಿಕೃತ ಕಟ್ಟಡ ಎಂದು ಗುರುತಿಸಿರುವ ಪಟ್ಟಿಯಿಂದ ಕೆಲವು ಅನಧಿಕೃತ ಕಟ್ಟಡಗಳನ್ನು ಕೈ ಬಿಡಲಾಗುತ್ತದೆ. ಹೀಗಾಗಿ, ದಿನದಿಂದ ದಿನಕ್ಕೆ ಅನಧಿಕೃತ ಕಟ್ಟಡ ಎಂದು ಗುರುತಿಸಲಾದ ಪಟ್ಟಿಯಲ್ಲಿನ ಸಂಖ್ಯೆ ಕಡಿಮೆಯಾಗುತ್ತಿದೆ.

ವಲಯವಾರು ಗುರುತಿಸಲಾದ ಅಕ್ರಮ ಕಟ್ಟಡ ವಿವರ

ವಲಯಕಟ್ಟಡ ಸಂಖ್ಯೆಮಹದೇವಪುರ586

ಯಲಹಂಕ488ದಾಸರಹಳ್ಳಿ203ಪೂರ್ವ240ದಕ್ಷಿಣ143ಪಶ್ಚಿಮ194ಬೊಮ್ಮನಹಳ್ಳಿ230ಆರ್ ಆರ್‌ ನಗರ196ಒಟ್ಟು2,280

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ