ರೈತರಿಗೆ ಜಾನುವಾರು ಹಿತರಕ್ಷಣೆಗೆ ಸರ್ಕಾರ ಬದ್ಧ: ಬಸವರಾಜ ಪಾಟೀಲ್ ಊಡಗಿ

KannadaprabhaNewsNetwork |  
Published : Aug 20, 2026, 03:15 AM IST
ಫೋಟೋ- ಬಸು ಊಡಗಿ | Kannada Prabha

ಸಾರಾಂಶ

negligence, Municipal Corporation, officials, public village, suffering

ಮಳಖೇಡ ಎಪಿಎಂಸಿ ಉಪ ಮಾರುಕಟ್ಟೆ ಪ3ಾಂಗಣದಲ್ಲಿ ಟಿನ್‌ ಶೆಡ್‌ ನಿರ್ಮಾಣ ಕಾಮಗಾರಿಗೆ ಚಾಲನೆ

---

ಸೇಡಂ: ಜಾನುವಾರು ಸಂತೆಗೆ ಆಗಮಿಸುವ ರೈತರು ಮತ್ತು ಅವರ ಜಾನುವಾರುಗಳಿಗೆ ಮೂಲಸೌಕರ್ಯ ಒದಗಿಸುವುದು ಹಾಗೂ ಅವುಗಳ ಹಿತರಕ್ಷಣೆ ಮಾಡುವುದು ಸರ್ಕಾರದ ಆದ್ಯತೆ ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ ಹೇಳಿದರು.

ತಾಲೂಕಿನ ಮಳಖೇಡ ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ವಾರ್ಷಿಕ ಕ್ರಿಯಾ ಯೋಜನೆಯಡಿ ಮಂಜೂರಾದ ೧ ಕೋಟಿ ೩೫ ಲಕ್ಷ ವೆಚ್ಚದಲ್ಲಿ ಜಾನುವಾರುಗಳಿಗೆ ಶೆಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಜಾನುವಾರು ಮಾರಾಟಕ್ಕೆ ದೂರದಿಂದ ಬರುವ ರೈತರು ಮಳೆ ಮತ್ತು ಬಿಸಿಲಿನಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದರು.

ವಿಶ್ರಾಂತಿ ಪಡೆಯಲು ಸರಿಯಾದ ನೆರಳಿನ ವ್ಯವಸ್ಥೆಯಿಲ್ಲದೆ ಜಾನುವಾರು ಸಹ ಸಂಕಷ್ಟಕ್ಕೆ ಸಿಲುಕುತ್ತಿದ್ದವು.

ರೈತರ ಈ ದೀರ್ಘಕಾಲದ ಸಮಸ್ಯೆಗೆ ಸ್ಪಂದಿಸಿ, ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಸುಸಜ್ಜಿತ ಜಾನುವಾರು ಶೆಡ್ ನಿರ್ಮಿಸಲು ಇಂದು ಚಾಲನೆ ನೀಡಲಾಗಿದ್ದು. ಎರಡು ಮೂರು ತಿಂಗಳ ಒಳಗಾಗಿ ಶೆಡ್ ನಿರ್ಮಾಣ ಕಾಮಗಾರಿ ಗುತ್ತಿಗೆದಾರರು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದರು.

ಇದರಿಂದಾಗಿ ಇನ್ಮುಂದೆ ಮಳೆ ಮತ್ತು ಕಡು ಬಿಸಿಲಿನಿಂದ ಜಾನುವಾರುಗಳಿಗೆ ಪೂರ್ಣ ರಕ್ಷಣೆ ಸಿಗಲಿದೆ.

ರೈತರ ಕಲ್ಯಾಣಕ್ಕಾಗಿ ಮತ್ತು ಕೃಷಿ ವಲಯದ ಸಬಲೀಕರಣಕ್ಕಾಗಿ ನಮ್ಮ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ಮಾರುಕಟ್ಟೆಗಳಲ್ಲಿ ಇನ್ನಷ್ಟು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಗ್ರಾಪಂ ಅಧ್ಯಕ್ಷರಾದ ರಾಜಶೇಖರ ಪುರಾಣಿಕ, ನಾಗರಾಜ ನಂದೂರ, ದಿನೇಶ್ ಪಾಟೀಲ್, ಎಪಿಎಂಸಿ ಕಾರ್ಯದರ್ಶಿ ರಾಜಕುಮಾರ ಕೌಡಲ್, ಗುತ್ತಿಗೆದಾರ ವೀರಭದ್ರಯ್ಯ, ಎಪಿಎಂಸಿ ಎಇಇ ರಾಕೇಶ್ ಡಿಗ್ಗಿಕರ್, ದೇವೇಂದ್ರಪ್ಪ ಹಳಿಜೋಳ ವೀರಣ್ಣ ಸಜ್ಜನ್ ಶೆಟ್ಟಿ, ಮಲ್ಲಪ್ಪ ಅರಬೋಳ,ಸುಂದರ್ ಮಂಗ,ಅಲಿಯಾಗ ಜಾಗಿರ್ದಾರ್, ಅಮ್ಜಾದ್ ಹುಸೇನ್ ಖಾನ್, ಶರಣಪ್ಪ ಎಂ ಗುಡಿ, ಕೀರ್ತಿ ಕುಮಾರ್ ಮಾಳಗಿ, ಅಂಬರೀಶ್ ಎಂ.ಗುಡಿ ಫಯಾಜ್ ಇನಾಮ್ದಾರ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.

ಫೋಟೋ- ಬಸು ಊಡಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ: ಇಂದು ಕಲಬುರಗಿ ಬಂದ್‌ ಕರೆ
ರಾಜ್ಯಕ್ಕೆ ಬರ ಅಧ್ಯಯನ ತಂಡ ಕಳುಹಿಸಲು ಮಲತಾಯಿ ಧೋರಣೆ