ನೇಹಾ ಹಿರೇಮಠ ಹತ್ಯೆ ಆರೋಪಿ ಕಾಲೇಜಿನಿಂದ ಅಮಾನತು

KannadaprabhaNewsNetwork |  
Published : Feb 01, 2025, 12:04 AM IST
ಅಮಾನತು | Kannada Prabha

ಸಾರಾಂಶ

ಪಿ.ಸಿ. ಜಾ​ಬೀನ್‌ ಸೈನ್ಸ್‌ ಕಾ​ಲೇ​ಜಿನ ಪ್ರಿ​ನ್ಸಿ​ಪಾ​ಲರು ಶು​ಕ್ರ​ವಾರ ಆ​ರೋಪಿ ಫ​ಯಾಜ್‌ ನಾಯ್ಕನನ್ನು ಅ​ಮಾ​ನ​ತು​ಗೊ​ಳಿಸಿ ಆ​ದೇಶ ಹೊ​ರ​ಡಿ​ಸಿ​ದ್ದಾರೆ. ಇದರಿಂದ ಫಯಾಜ್‌ ಬಿಸಿಎ ಪರೀಕ್ಷೆಯಲ್ಲಿ ಕೆಲ ವಿಷಯಗಳಲ್ಲಿ ಫೇಲ್‌ ಆಗಿದ್ದ. ಈಗ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿಲ್ಲದಂತಾಗಿದೆ.

ಹು​ಬ್ಬ​ಳ್ಳಿ:

ಹಾ​ಡ​ಹ​ಗಲೇ ಕಾ​ಲೇಜು ಕ್ಯಾಂಪ​ಸ್‌​ನಲ್ಲಿ ವಿ​ದ್ಯಾ​ರ್ಥಿನಿ​ ನೇಹಾ ಹಿರೇಮಠಳನ್ನು ಚಾ​ಕು​ವಿ​ನಿಂದ ಇ​ರಿದು ಬ​ರ್ಬ​ರ​ವಾ​ಗಿ ಹ​ತ್ಯೆ​ಗೈ​ದ ಆ​ರೋ​ಪಿ ಫ​ಯಾಜ್‌ ನಾಯ್ಕನನ್ನು ಪಿಸಿ ಜಾ​ಬೀನ್‌ ಸೈನ್ಸ್‌ ಕಾ​ಲೇಜಿ​ನಿಂದ ಅ​ಮಾ​ನ​ತು​ಗೊ​ಳಿಸಿ ಶು​ಕ್ರ​ವಾರ ಆ​ದೇಶ ಹೊ​ರ​ಡಿಸ​ಲಾ​ಗಿದೆ.

ದೇಶಾ​ದ್ಯಂತ ತೀವ್ರ ಸಂಚ​ಲನ ಸೃಷ್ಟಿಸಿದ್ದ ವಿ​ದ್ಯಾ​ರ್ಥಿನಿ ನೇಹಾ ಹಿ​ರೇ​ಮಠ ಕೊಲೆ ಪ್ರ​ಕ​ರಣದ ಆ​ರೋ​ಪಿ ಫಯಾಜ್‌ ನಾಯ್ಕ ಜಾಬಿನ್‌ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ಆತ ಹತ್ಯೆಗೈದು ಜೈಲು ಸೇರಿದ್ದರೂ ಆತನ ನೋಂದಣಿ, ದಾಖಲಾತಿ ಕಾ​ಲೇಜು ಈ ವರೆಗೂ ಮುಂದು​ವರಿ​ಸಿತ್ತು. ಈ ಮಾ​ಹಿತಿ ತಿ​ಳಿದ ಶ್ರೀ​ರಾ​ಮ​ಸೇನೆ ಮು​ಖ್ಯ​ಸ್ಥ ಪ್ರ​ಮೋದ ಮು​ತಾ​ಲಿಕ್‌ ಶು​ಕ್ರ​ವಾರ ಕಾ​ಲೇ​ಜಿಗೆ ಭೇಟಿ ನೀಡಿ ಪ್ರಿ​ನ್ಸಿ​ಪಾ​ಲ್‌ ಅ​ವ​ರಿಗೆ ಘೇ​ರಾವ್‌ ಹಾ​ಕಿ​ ತೀವ್ರ ತ​ರಾ​ಟೆಗೆ ತೆ​ಗೆ​ದು​ಕೊಂಡ​ರು. ಕೊ​ಲೆ​ಗ​ಡು​ಕ​ನಿಗೆ ಶಿ​ಕ್ಷ​ಣ​ದಲ್ಲಿ ಮುಂದು​ವ​ರಿ​ಯುವ ಯಾವ ಅ​ರ್ಹತೆ ಇಲ್ಲ. ಆ​ದರೆ, ಘ​ಟನೆ ನ​ಡೆದ ತ​ತ್‌​ಕ್ಷ​ಣ​ದ​ಲ್ಲಿಯೇ ಆ​ತ​ನನ್ನು ವ​ಜಾ​ಗೊ​ಳಿ​ಸಿ​ದ್ದರೆ, ಕಾ​ಲೇ​ಜಿನ ಕೀರ್ತಿ ಮ​ತ್ತಷ್ಟು ಹೆ​ಚ್ಚು​ತ್ತಿತ್ತು. ಕಾ​ಲೇ​ಜಿನ ಈ ಕ್ರಮ ಖಂಡ​ನೀ​ಯ​ವಾ​ಗಿದ್ದು, ಈ ಕೂ​ಡ​ಲೇ ಆ​ರೋ​ಪಿ​ಯನ್ನು ಕಾ​ಲೇ​ಜಿ​ನಿಂದ ಅ​ಮಾ​ನ​ತು​ಗೊ​ಳಿ​ಸ​ಬೇ​ಕೆಂದು ಒತ್ತಾಯಿಸಿದರು.

ಇ​ದ​ರ ಬೆ​ನ್ನಲ್ಲೆ ಎ​ಚ್ಚೆತ್ತ ಪಿ.ಸಿ. ಜಾ​ಬೀನ್‌ ಸೈನ್ಸ್‌ ಕಾ​ಲೇ​ಜಿನ ಪ್ರಿ​ನ್ಸಿ​ಪಾ​ಲರು ಶು​ಕ್ರ​ವಾರ ಆ​ರೋಪಿ ಫ​ಯಾಜ್‌ ನಾಯ್ಕನನ್ನು ಅ​ಮಾ​ನ​ತು​ಗೊ​ಳಿಸಿ ಆ​ದೇಶ ಹೊ​ರ​ಡಿ​ಸಿ​ದ್ದಾರೆ. ಈ ವಿಷಯವನ್ನು ಬಳಿಕ ಮಾಧ್ಯಮಗಳಿಗೆ ಮುತಾಲಿಕ ತಿಳಿಸಿದರು. ಫಯಾಜ್‌ ಬಿಸಿಎ ಪರೀಕ್ಷೆಯಲ್ಲಿ ಕೆಲ ವಿಷಯಗಳಲ್ಲಿ ಫೇಲ್‌ ಆಗಿದ್ದ. ಈಗ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿಲ್ಲದಂತಾಗಿದೆ.

ಈ ವೇಳೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ದೇವಟಗಿ, ಉಪಾಧ್ಯಕ್ಷ ಗುಣಧರ ದಡೋತಿ, ಬಸು ದುರ್ಗದ, ಪ್ರವೀಣ ಮಾಳದಕರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯವಸ್ಥಿತವಾಗಿ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌
ಉದ್ಯೋಗ ಖಾತ್ರಿ ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರದ ಕ್ರಮಕ್ಕೆ ಶಾಸಕ ಮಾನೆ ಆಕ್ರೋಶ