ಕನ್ನಡಪ್ರಭ ವಾರ್ತೆ ಮಸ್ಕಿ
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಗುತ್ತಿದೆ ಕೋಲೆಗಳು ಅಧಿಕವಾಗತೊಡಗಿದೆ. ಈಗಿನ ಸರ್ಕಾರ ಅಲ್ಪಸಂಖ್ಯಾತರ ತುಷ್ಠಿಕರಣದಿಂದಾಗಿ ಕಿಡಿಗೇಡಿಗಳು ಮೇರೆಯುವಂತಾಗಿದೆ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.ಮಸ್ಕಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜ, ಬಜರಂಗದಳ, ಎಬಿವಿಪಿ, ಹಿಂದು ಸಮಾಜದವರು ಶನಿವಾರ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಂಗಮ ಸಮಾಜದ ಮುಖಂಡ ಶಿವಕುಮಾರ ಎನ್ ಮಾತನಾಡಿ, ಅಲ್ಪಸಂಖ್ಯಾತರ ಒಂದು ಕೋಮಿನ ವರ್ಗದವರು ಹಿಂದುಗಳ ಮೇಲೆ ಅತ್ಯಾಚಾರ, ಹತ್ಯೆ, ನಿಂದನೆ ಪ್ರಕರಣಗಳು ಹೆಚ್ಚುತ್ತಿರುವುದು ನೋಡಿದರೆ ಆ ಕೋಮಿನ ಬಗ್ಗೆ ಇರುವ ಗೌರವ ಕಳೆದುಕೊಳ್ಳುವಂತಾಗಿದೆ. ನೇಹಾ ಪ್ರಕರಣದಲ್ಲಿ ಹತ್ಯೆ ಮಾಡಿರುವ ವ್ಯಕ್ತಿಗೆ ಅತೀ ಬೇಗ ಶಿಕ್ಷೆಯಾಗಬೇಕು. ತಪಿತಸ್ಥರಿಗೆ ಶಿಕ್ಷೆಯಾದಾಗ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಜರುಗುವುದಿಲ್ಲ ಎಂದರು.ಸಿದ್ದಣ್ಣ ಹೂವಿನಬಾವಿ, ಮಲ್ಲಪ್ಪ ಅಂಕುಶದೊಡ್ಡಿ, ಶಿವಪ್ರಸಾದ ಕ್ಯಾತ್ನಟ್ಟಿ, ಶರಣಯ್ಯ ಗುಡದೂರು, ಮಲ್ಲಿಕಾರ್ಜುನ ಪಾಟೀಲ, ಚಂದ್ರಕಲಾ ದೇಶಮುಖ ಹಾಗೂ ಇತರರು ಮಾತನಾಡಿದರು.
ತಹಸೀಲ್ದಾರ ಅರಮನೆ ಸುಧಾ ಅವರಿಗೆ ಜಂಗಮ ಸಮಾಜದ ಅಧ್ಯಕ್ಷ ಕರಿಬಸಯ್ಯ ಸ್ವಾಮಿ ಸಿಂಧನೂರು ಮಠ ಮನವಿ ಪತ್ರ ಸಲ್ಲಿಸಿದರು.ಗ್ರಾಮದ ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಶಿವಶಂಕ್ರಪ್ಪ ಹಳ್ಳಿ, ಪ್ರಕಾಶ ಧಾರಿವಾಲ, ಪಂಚಾಕ್ಷರಯ್ಯ ಕಂಬಾಳಿಮಠ, ಸಿದ್ದಲಿಂಗಯ್ಯ ಹಿರೇಮಠ, ಘನಮಠದಯ್ಯ ಸಾಲಿಮಠ, ಜಗದೀಶಸ್ವಾಮಿ ಹಾಲಪೂರು, ರಾಕೇಶ ಪಾಟೀಲ, ಯರಿತಾತ ಜಂಗಮರಹಳ್ಳಿ, ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲುರು, ಮಂಜುನಾಥ ಬಿಜ್ಜಳ, ಮಲ್ಲಯ್ಯ ಕುಚ್ಚಾ, ಸಿದ್ದಲಿಂಗಯ್ಯ ಸೊಪ್ಪಿಮಠ, ಮೌನೇಶ ನಾಯಕ, ಯಲ್ಲೋಜಿರಾವ್ ಕೊರೆಕರ್, ಸುಗಣ್ಣ ಬಾಳೆಕಾಯಿ, ಶಿವರಾಜ ಯಂಬಲದ, ಶರಣಬಸವ ಹರವಿ, ಶರಣಯ್ಯ ಸೊಪ್ಪಿಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಮಲ್ಲಿಕಾರ್ಜುನ ನಾಯೆನಗಲಿ, ಪಂಪಣ್ಣ ಕೋಡಿಹಾಳ, ಪೂರ್ಣೀಮಾ ಪಾಟೀಲ, ಪುಷ್ಪಾ ಬಿಜ್ಜಳ, ಯಶೋಧ ಕಡಾಮುಡಿಮಠ, ದುರ್ಗಮ್ಮ, ಕಾವೇರಿ, ಶಾಂತಮ್ಮ ಹಾಗೂ ಇತರರು ಇದ್ದರು.