ನೇಹಾ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಜೀವರಾಜ್

KannadaprabhaNewsNetwork |  
Published : Apr 23, 2024, 12:55 AM IST
೨೨ಬಿಹೆಚ್‌ಆರ್ ೧: ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಖಂಡಿಸಿ ಬಾಳೆಹೊನ್ನೂರು ಜೇಸಿ ವೃತ್ತದಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು. ಡಿ.ಎನ್.ಜೀವರಾಜ್, ಭಾಸ್ಕರ್ ವೆನಿಲ್ಲಾ, ಟಿ.ಎಂ.ಉಮೇಶ್, ಕೆ.ಆರ್.ದೀಪಕ್, ಗೋವಿಂದೇಗೌಡ ಇದ್ದರು. | Kannada Prabha

ಸಾರಾಂಶ

ಹುಬ್ಬಳ್ಳಿ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯಿಸಿದರು.

ಲವ್ ಜಿಹಾದ್‌ಗೆ ಬೆಂಬಲ ನೀಡುತ್ತಿರುವ ರಾಜ್ಯ ಸರ್ಕಾರ: ಆರೋಪಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹುಬ್ಬಳ್ಳಿ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯಿಸಿದರು. ನೇಹಾ ಹಿರೇಮಠ್ ಹತ್ಯೆಖಂಡಿಸಿ ಪಟ್ಟಣದ ಜೇಸಿಐ ವೃತ್ತದಲ್ಲಿ ಬಿಜೆಪಿ - ಜೆಡಿಎಸ್‌ ನಿಂದ ಸೋಮವಾರ ನಡೆದ ಪ್ರತಿಭಟನೆ ಯಲ್ಲಿ ಮಾತನಾಡಿ, ಈ ಹಿಂದೆ ಭಾರತ ದೇಶ ವಿಭಜನೆಯಾಗಿದ್ದೆ ಜಾತಿಯ ಮೇಲೆ. ದೇಶದ ಮುಸಲ್ಮಾನರ ಇತ್ತೀಚಿನ ನಡವಳಿಕೆ ಬಗ್ಗೆ ನಾವು ಇಂದು ಪ್ರಶ್ನೆ ಮಾಡುವಂತಾಗಿದೆ. ರಾಜ್ಯದ ಮುಖ್ಯಮಂತ್ರಿ ಸಹ ಈ ಘಟನೆ ಬಗ್ಗೆ ಖಂಡಿಸದೆ ನೇಹಾಗೆ ಫಯಾಜ್ ಜೊತೆ ಸಂಬಂಧವಿತ್ತು ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಈ ಘಟನೆ ವೈಯುಕ್ತಿಕ ಎನ್ನುತ್ತಾರೆ. ಯಾವ ಕಾರಣಕ್ಕೆ ನಡೆದಿದೆ ಎಂಬುದನ್ನು ಬಹಿರಂಗಗೊಳಿಸಲಿ ಎಂದು ಹೇಳಿದರು.

ಯಾರಿಗಾದರೂ ಯಾರ ಜೊತೆಯಾದರು ಸಂಬಂಧ, ಪ್ರೇಮವಿದ್ದರೆ ಕೊಲೆ ಮಾಡಬೇಕೇ ? ರಾಜ್ಯ ಸರ್ಕಾರ ಲವ್ ಜಿಹಾದ್‌ಗೆ ಬೆಂಬಲ ನೀಡುತ್ತಿದ್ದು, ಕಾಂಗ್ರೆಸ್ ನ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸಬೇಕಿದೆ. ಲವ್ ಜಿಹಾದ್‌ಗೆ ಒಪ್ಪದಿದ್ದರೆ ಹೆಣ್ಣು ಮಗಳನ್ನು ಕೊಚ್ಚಿ ಕೊಲ್ಲುತ್ತಾರೆ. ಒಪ್ಪಿ ಮದುವೆಯಾದರೆ ಬಳಿಕ ಕೊಚ್ಚಿ ಪ್ರಿಡ್ಜ್ ನಲ್ಲಿ ದೇಹವಿಡುತ್ತಾರೆ. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡದ ಪರಿಸ್ಥಿತಿ ರಾಜ್ಯದಲ್ಲಿದ್ದು, ನಾಳೆ ದಿನ ನಮ್ಮ ಮನೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇದೆಯಾ ಎಂಬುದನ್ನು ಪ್ರಶ್ನಿಸಬೇಕಿದೆ. ಇಂತಹ ಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಅತ್ಯಂತ ನಾಚಿಕೆಗೇಡಿನ ಸಂಗತಿ. ಘಟನೆ ಬಗ್ಗೆ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ರಾಜ್ಯ ಸರ್ಕಾರದ ತನಿಖೆ ಬಗ್ಗೆ ನಮಗೆ ನಂಬಿಕೆಯಿಲ್ಲ. ಘಟನೆ ಬಗ್ಗೆ ಈಗಾಗಲೇ ಚಾರ್ಜ್ ಶೀಟ್ ಆಗಿದ್ದು, ಇದರಿಂದ ನೇಹಾ ಪ್ರಕರಣದಲ್ಲಿ ಆಕೆ ಕುಟುಂಬಕ್ಕೆ ನ್ಯಾಯ ದೊರೆಯುವ ವಿಶ್ವಾಸವಿಲ್ಲ ಎಂದು ಹೇಳಿದರು. ಬಿಜೆಪಿ ಮುಖಂಡರಾದ ಭಾಸ್ಕರ್ ವೆನಿಲ್ಲಾ, ಟಿ.ಎಂ.ಉಮೇಶ್ ಕಲ್ಮಕ್ಕಿ, ಪ್ರಭಾಕರ್ ಪ್ರಣಸ್ವಿ, ಬಿ.ಜಗದೀಶ್ಚಂದ್ರ, ಕೆ.ಕೆ. ವೆಂಕಟೇಶ್, ಮಾಗಲು ಪ್ರೇಮೇಶ್, ಮಂಜು ಹೊಳೆಬಾಗಿಲು, ಟಿ.ಎಂ.ಗುರುಮೂರ್ತಿ, ಕೆ.ಕೆ.ವೆಂಕಟೇಶ, ಯೋಗಾನಂದ, ಜೆಡಿಎಸ್ ಮುಖಂಡರಾದ ಕೆ.ಆರ್.ದೀಪಕ್, ಕೆ.ಟಿ.ಗೋವಿಂದೇಗೌಡ, ಎಂ.ಆರ್.ಜಗದೀಶ್ ಮತ್ತಿತರರು ಇದ್ದರು.೨೨ಬಿಹೆಚ್‌ಆರ್ ೧:

ಹುಬ್ಬಳ್ಳಿ ನೇಹಾ ಹಿರೇಮಠ್ ಹತ್ಯೆಖಂಡಿಸಿ ಬಾಳೆಹೊನ್ನೂರಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದಲ್ಲಿಯೇ ಅತ್ಯಂತ ಗೌರವ ಗಳಿಸಿರುವ ಹಿಂದೂ ಧರ್ಮ
ವಿಕಲಚೇತನರ ಸವಲತ್ತುಗಳ ಸಮರ್ಪಕ ನಿರ್ವಹಣೆಗೆ ಒತ್ತು