ಕನ್ನಡಪ್ರಭ ವಾರ್ತೆ ಇಂಡಿ
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದ ಕಾರ್ಯದರ್ಶಿ ಸಿದ್ದಾರಾಮ ಗೋರನಾಳ ಜ್ಞಾನ ದೇಗುಲದಂತಿರುವ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಹತ್ಯೆ ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿಚಾರವಾಗಿದೆ. ಕೂಡಲೇ ಆರೋಪಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಪ್ರೀತಿಸುವಂತೆ ಒತ್ತಾಯಿಸಿ, ಹೇಯ್ಯ ಕೃತ್ಯ ಎಸಗಿದ್ದು ಖಂಡನೀಯ. ಆರೋಪಿಗೆ ಕಾನೂನಿನ ಯಾವುದೇ ಭಯವಿಲ್ಲದೆ ಹಾಡಹಗಲೇ ಇಂತಹ ಕೃತ್ಯ ನಡೆಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಲವ್ ಜಿಹಾದಿ ಕಾರಣಕ್ಕಾಗಿ ಈ ಹತ್ಯೆ ನಡೆದಿದ್ದು, ಸರ್ಕಾರ ಕೂಡಲೇ ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹತ್ಯೆಯಾದ ವಿದ್ಯಾರ್ಥಿನಿಯ ಕುಟುಂಬಕ್ಕೆ ರಕ್ಷಣೆ ನಿಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘದ ಅಧ್ಯಕ್ಷ ರಾಜಗುರು ದೇವರ, ಪ್ರತೀಕ ಬಿರಾದಾರ, ಅಶೋಕಗೌಡ ಬಿರಾದಾರ, ವೆಂಕಟೇಶ ಕುಲಕರ್ಣಿ, ಅನೀಲ ರಾಠೋಡ, ರತನ ಹಲವಾಯಿ, ಮುತ್ತು ಸಿಂದಗಿ, ಆನಂದ ದೇವರ, ಸಂತೋಷ ಬಿರಾದಾರ, ಸ್ವಸ್ತಿಕ ಗಳೆದ, ಶಿವಾಜಿ ಸಿಂಧೆ, ಅಂಬರೀಷ ಕುಂಬಾರ, ಅಭೀಷೇಕ ಬೀಳಗಿ, ಕಾರ್ತಿಕ ಮಹೇಂದ್ರಕರ, ವಿಶಾಲ ಮಹಾಜನಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.