ನೆಲ್ಯಹುದಿಕೇರಿ: ಬೃಹತ್ ಪ್ರಾಣಿಗಳ ಕಳೇಬರ ಪತ್ತೆ

KannadaprabhaNewsNetwork |  
Published : Jun 08, 2026, 03:45 AM IST
ಆಗ್ರಹ  | Kannada Prabha

ಸಾರಾಂಶ

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4ನೇ ವಾರ್ಡಿನ ಅತ್ತಿಮಂಗಳ ಸಮೀಪ ರಸ್ತೆ ಬದಿ ಬೃಹತ್ ಪ್ರಾಣಿಗಳ ಮೂಳೆ ಚರ್ಮ ಹಾಗೂ ಇನ್ನಿತರ ವೆಸ್ಟ್ ಗಳನ್ನು ತುಂಬಿರುವ ಪ್ಲಾಸ್ಟಿಕ್ ಚೀಲಗಳನ್ನು ತಂದು ಇಲ್ಲಿನ ನೀರಿನ ಟ್ಯಾಂಕ್ ಸಮೀಪದಲ್ಲೇ ಎಸೆಯಲಾಗಿದ್ದು, ದುರ್ವಾಸನೆ ಬೀರುತ್ತಿದೆ.

ಮಡಿಕೇರಿ: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4ನೇ ವಾರ್ಡಿನ ಅತ್ತಿಮಂಗಳ ಸಮೀಪ ರಸ್ತೆ ಬದಿ ಬೃಹತ್ ಪ್ರಾಣಿಗಳ ಮೂಳೆ ಚರ್ಮ ಹಾಗೂ ಇನ್ನಿತರ ವೆಸ್ಟ್ ಗಳನ್ನು ತುಂಬಿರುವ ಪ್ಲಾಸ್ಟಿಕ್ ಚೀಲಗಳನ್ನು ತಂದು ಇಲ್ಲಿನ ನೀರಿನ ಟ್ಯಾಂಕ್ ಸಮೀಪದಲ್ಲೇ ಎಸೆಯಲಾಗಿದ್ದು, ದುರ್ವಾಸನೆ ಬೀರುತ್ತಿದೆ.ಇಲ್ಲಿ ಎಸೆದಿರುವ ಬೃಹತ್ ಪ್ರಾಣಿಯ ಕಳೇಬರ ಗೋವಿನದೋ ಅಥವಾ ಕಾಡುಕೋಣದೋ ಎಂಬ ಸಂಶಯ ಇದೀಗ ಸಾರ್ವಜನಿಕರ ವಲಯದಲ್ಲಿ ಉದ್ಭವಿಸಿದ್ದು, ಕೂಡಲೇ ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿ ಕೃತ್ಯ ಎಸಗಿರುವವರ ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಪ್ರಾಣಿಯ ಕಳೇಬರವನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಅಲ್ಲದೆ ಮುಂದೆ ಇಂತಹ ಕೃತ್ಯ ಎಸಗದಂತೆ ತಡೆಯುವ ನಿಟ್ಟಿನಲ್ಲಿ ಇಲ್ಲಿಗೆ ಸಿಸಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಬೇಕೆಂದು ಆಗ್ರಹಿಸಿದ್ದಾರೆ.ಇಂತಹ ವ್ಯವಸ್ಥಿತ ಷಡ್ಯಂತ್ರದಿಂದ ಸೂಕ್ಷ್ಮ ಪ್ರದೇಶವಾದ ಸಿದ್ದಾಪುರ, ನೆಲ್ಯಹುದಿಕೇರಿ ಭಾಗದಲ್ಲಿನ ಜನಾಂಗಗಳ ನಡುವೆ ಸಂಘರ್ಷಕ್ಕೆ ಕಾರಣಗುವ ಸಾಧ್ಯತೆಗಳಿದ್ದು, ಇದನ್ನು ಸಂಬಂಧ ಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.---------------ಕೋಟ್-----------------

ಸಂಘರ್ಷ ಉಂಟುಮಾಡುವ ಉದ್ದೇಶದಿಂದ ಕೃತ್ಯ ಎಸಗಿರುವ ಸಂಶಯ ಇದೆ. ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸಬೇಕು, ಗ್ರಾಮ ಪಂಚಾಯಿತಿ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತಾಗಬೇಕು.

। ಭರತ್, ಸಾಮಾಜಿಕ ಹೋರಾಟಗಾರ

------------------------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಗೀಸರ್ ಸೋರಿಕೆ: ಪ್ರವಾಸಿ ಯುವತಿ ಸಾವು
ಜಿಲ್ಲೆಯ ಗೌರವ ಹೆಚ್ಚಿಸುವ ಕಾರ್ಯ ಮಾಡುವೆ: ಸಚಿವ ಖಾದರ್