15 ರವರೆಗೆ ನೇಪಾಳದ ರುದ್ರಾಕ್ಷಿ ಪ್ರದರ್ಶನ, ಮಾರಾಟ ಮೇಳ

KannadaprabhaNewsNetwork |  
Published : Jul 12, 2024, 01:37 AM IST
ರುದ್ರಾಕ್ಷಿ ಮೇಳ  | Kannada Prabha

ಸಾರಾಂಶ

ವಿಜಯಪುರ ನಗರದ ಗೋಳಗುಮ್ಮಟದ ಎದುರಿಗಿರುವ ಹೋಟೆಲ್ ಮೆರಿಡಿಯನ್‌ನಲ್ಲಿ ಜು.10 ರಿಂದ 15ರವರೆಗೆ ಹೈದ್ರಾಬಾದ್ ಮೂಲದ ಇಂಡಸ್-ನೇಪಾಳ ರುದ್ರಾಕ್ಷ ಸಂಸ್ಥೆ ಆಯೋಜಿಸಿರುವ ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಗೋಳಗುಮ್ಮಟದ ಎದುರಿಗಿರುವ ಹೋಟೆಲ್ ಮೆರಿಡಿಯನ್‌ನಲ್ಲಿ ಜು.10 ರಿಂದ 15ರವರೆಗೆ ಹೈದ್ರಾಬಾದ್ ಮೂಲದ ಇಂಡಸ್-ನೇಪಾಳ ರುದ್ರಾಕ್ಷ ಸಂಸ್ಥೆ ಆಯೋಜಿಸಿರುವ ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.

ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೇ ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮನಕ್ಷತ್ರದ ಆಧಾರದ ಮೇಲೆ ಮತ್ತು ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ಭಿನ್ನತೆ ತಿಳಿಸಲಾಗುವುದು. ಗುಣಮಟ್ಟದ ರುದ್ರಾಕ್ಷಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದರಲ್ಲಿ ಇಂಡಸ್-ನೇಪಾಳ ರುದ್ರಾಕ್ಷ ಸಂಸ್ಥೆ ವಿಶ್ವಾಸಾರ್ಹತೆ ಹೊಂದಿದೆ. ಮೇಳದಲ್ಲಿ ಜಗತ್ತಿನಲ್ಲಿ ಅತ್ಯಂತ ವಿರಳವಾಗಿರುವ ದುಂಡುಮುಖದ ಒಂದು ಮುಖಿ ರುದ್ರಾಕ್ಷಿ (ಸುಮಾರು ₹4.5 ಲಕ್ಷ ಬೆಲೆಯುಳ್ಳ) ರುದ್ರಾಕ್ಷಿಗಳು ಲಭ್ಯವಿವೆ. ಆಸಕ್ತರಿಗೆ ಇತರ ಮುಖಗಳ ರುದ್ರಾಕ್ಷಿಗಳನ್ನೂ ತರಿಸಿ ಕೊಡಲಾಗುವುದು. ರುದ್ರಾಕ್ಷಿಯನ್ನು ಧರಿಸುವುದು ಶುಭದಾಯಕವಾಗಿದ್ದು, ಸಸ್ಯಾಹಾರಿ ಹಾಗೂ ಮಾಂಸಹಾರಿಗಳು ಧರಿಸಬಹುದು. ವ್ಯಕ್ತಿಯ ಜನ್ಮದಿನಾಂಕ ಆಧರಿಸಿ ಯಾವ ರಾಶಿಗೆ ಯಾವ ಮುಖದ ರುದ್ರಾಕ್ಷಿ ಸೂಕ್ತವೆಂದು ನಿರ್ಧರಿಸಿ ಆ ಪ್ರಕಾರದ ರುದ್ರಾಕ್ಷಿ ಕೊಡಲಾಗುವುದು. ಗ್ರಾಹಕರಿಗೆ ಭೂಮಿ ಮೇಲೆ ವಿರಳವಾಗಿ ದೊರಕುವ ಹಾಗೂ ರತ್ನದ ಹರಳುಗಳು ಸಹ ಲಭ್ಯಗಳಿವೆ. ಮಳಿಗೆಯು ಬೆಳಗ್ಗೆ 10.30 ರಿಂದ ರಾತ್ರಿ 9 ರವರೆಗೆ ತೆರೆದಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ ನರೇಂದ್ರ ಕಾಸಿರೆಡ್ಡಿ ಮೊ.7097296666 ಸಂಪರ್ಕಿಸಿ.

-ಜಗತ್ತಿನಲ್ಲಿ ಅತ್ಯಂತ ವಿರಳವಾಗಿರುವ ದುಂಡುಮುಖದ ಒಂದು ಮುಖಿ ರುದ್ರಾಕ್ಷಿ (ಸುಮಾರು ₹4.5 ಲಕ್ಷ ಬೆಲೆಯುಳ್ಳ) ರುದ್ರಾಕ್ಷಿಗಳು ಲಭ್ಯ.

-ಇತರ ಮುಖಗಳ ರುದ್ರಾಕ್ಷಿಗಳನ್ನೂ ತರಿಸಿ ಕೊಡಲಾಗುವುದು.

-ವ್ಯಕ್ತಿಯ ಜನ್ಮದಿನಾಂಕ ಆಧರಿಸಿ ಯಾವ ರಾಶಿಗೆ ಯಾವ ಮುಖದ ರುದ್ರಾಕ್ಷಿ ಸೂಕ್ತವೆಂದು ನಿರ್ಧರಿಸಿ ಆ ಪ್ರಕಾರದ ರುದ್ರಾಕ್ಷಿ ಕೊಡಲಾಗುವುದು.

-ಗ್ರಾಹಕರಿಗೆ ಭೂಮಿ ಮೇಲೆ ವಿರಳವಾಗಿ ದೊರಕುವ ಹಾಗೂ ರತ್ನದ ಹರಳುಗಳು ಸಹ ಲಭ್ಯಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ