ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ಮುಕ್ಕಾಟಿರ (ಬೋಂದ) ಮತ್ತು ನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ನಂತರ ನಡೆದ ಟೈ ಬ್ರೇಕರ್ ನಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಕುಪ್ಪಂಡ (ಕೈಕೇರಿ) ಮತ್ತು ಕಲಿಯಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಟೈ ಬ್ರೇಕರ್ ನಲ್ಲಿ ಕುಪ್ಪಂಡ (ಕೈಕೇರಿ) ತಂಡವು ಕಲಿಯಂಡ ಎದುರು ಜಯ ಸಾಧಿಸಿತು.
ಉಳಿದಂತೆ ನೆಲ್ಲ ಮಕ್ಕಡ ತಂಡವು ಅಂಜಪರವಂಡ ತಂಡದ ವಿರುದ್ಧ 4-0 ಅಂತರದ ಜಯ ಸಾಧಿಸಿದರೆ ಪುದಿಯೋಕ್ಕಡ ಕೂತಂಡ ತಂಡದ ವಿರುದ್ಧ 3-1 ಅಂತರದ ಜಯ ಸಾಧಿಸಿತು.ಇಂದಿನ ಪಂದ್ಯಗಳು: 9:30 ಗಂಟೆಗೆ ಕುಲ್ಲೇಟಿರ -ಐನಂಡ, 10:30 ಗಂಟೆಗೆ ಚೆಪ್ಪುಡಿರ- ಚೆಕ್ಕೆದ, 12 ಗಂಟೆಗೆ ಚೇಂದಂಡ-ಕರಿನೆರವಂಡ, 1 ಗಂಟೆಗೆ ಬೋವೇರಿಯಂಡ -ಐಚ್ಚಿಟ್ಟಿರ