ಇಂದು ಬೊಟ್ಟಿಯತ್‌ನಾಡ್ ಶ್ರೀ ಈಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ

KannadaprabhaNewsNetwork |  
Published : Feb 21, 2025, 11:46 PM IST
ಕುಳಿಪೊ | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ಧ ಬೊಟ್ಟಿಯತ್‌ನಾಡ್‌ ಶ್ರೀ ಈಶ್ವರ ದೇವರ ವಾರ್ಷಿಕೋತ್ಸವ ಇದೇ ಫೆ. 22, 23ರಂದು ನಡೆಯಲಿದೆ.

ಮಡಿಕೇರಿ : ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕೋತ್ಸವ ಇದೇ ಫೆಬ್ರವರಿ 22 ಶನಿವಾರ ಹಾಗೂ 23 ಭಾನುವಾರ ನಡೆಯಲಿದೆ ಎಂದು ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಬೊಟ್ಟಿಯತ್ ನಾಡಿಗೆ ಸೇರಿದ ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಈಚೂರು ಹಾಗೂ ಅರುವತೋಕ್ಲು ಸೇರಿದಂತೆ ಈ ಸುತ್ತಾಮುತ್ತಲ ಗ್ರಾಮಗಳ ಜನರು ಒಂದೆಡೆ ಸೇರಿ ನಡೆಸುವ ಶ್ರೀ ಈಶ್ವರ ದೇವರ (ನಾಡ್ ದೇವಸ್ಥಾನ) ವಾರ್ಷಿಕ ಉತ್ಸವ ಇದೇ ಫೆಬ್ರವರಿ 15ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊಂಡಿದ್ದು, ಇದೇ 22ರಂದು ಶನಿವಾರ ನೆರ್ಪು ಹಾಗೂ 23ರಂದು ಭಾನುವಾರ ದೇವರ ಅವಭೃತ ಸ್ನಾನ (ದೇವ ಕುಳಿಪೊ) ನಡೆಯಲಿದೆ.

ನಾಡ್ ದೇವಸ್ಥಾನ ಎಂದು ಖ್ಯಾತಿ ಪಡೆದಿರುವ ಕುಂದಾ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಈಶ್ವರ ದೇವಸ್ಥಾನಕ್ಕೆ ಪೂರ್ವ ಕಾಲದ ಇತಿಹಾಸವಿದ್ದು ಇಲ್ಲಿನ ತಕ್ಕಮುಖ್ಯಸ್ಥರಾಗಿ ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬ ಕಾರ್ಯನಿರ್ವಹಿಸುತ್ತಾರೆ. ಫೆಬ್ರವರ-22ರಂದು ಶನಿವಾರ ಸಂಜೆ ಸುಮಾರು 4-30 ಗಂಟೆಗೆ ಎತ್ತು ಪೋರಾಟ್ ಆಗಮಿಸುವ ಮೂಲಕ ನೆರ್ಪು ಉತ್ಸವಕ್ಕೆ ಚಾಲನೆ ದೊರೆಯಲಿದ್ದು ನಂತರ ವಿವಿಧ ಪೂಜಾವಿಧಿ ವಿಧಾನಗಳು ನಡೆಯಲಿವೆ. 23ರಂದು ಭಾನುವಾರ ಬೆಳಿಗ್ಗೆಯಿಂದಲೆ ವಿವಿಧ ಪೂಜಾ ವಿಧಿವಿಧಾನಗಳು ನಡೆಯಲಿದ್ದು ರಾತ್ರಿ 7 ಗಂಟೆಗೆ ದೇವರ ಅವಭೃತ ಸ್ನಾನ (ದೇವ ಕುಳಿಪೊ) ನಡೆಯಲಿದ್ದು ಬಳಿಕ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.

---------------------------------------

26ರಂದು ಮಹಾ ಶಿವರಾತ್ರಿ ಹಬ್ಬದ ಆರಾಧನೆನಾಪೋಕ್ಲು: ಈಸ್ಟ್ ಕೊಳಕೇರಿ ಗ್ರಾಮದ ಬಿದ್ದಾಟಂಡ ವಾಡೆ ಸಮೀಪ ಇರುವ ಶ್ರೀ ಮಹಾದೇವ ಕೋಟ ಈಶ್ವರ ದೇವಸ್ಥಾನದಲ್ಲಿ ಫೆ. 26ರಂದು ಮಹಾ ಶಿವರಾತ್ರಿ ಹಬ್ಬದ ಆರಾಧನೆ ನಡೆಯಲಿದೆ.ಅಂದು ಬೆಳಗ್ಗೆ 9 ಗಂಟೆಗೆ ರುದ್ರಾಭಿಷೇಕ, ಮಹಾಪೂಜೆ ಹಾಗೂ ಅನ್ನದಾನ ಜರುಗಲಿದೆ ಎಂದು ದೇವಾಲಯದ ಅಧ್ಯಕ್ಷರು ಹಾಗು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ