ನೆಟ್ಲ: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಅತಿಮಹಾ ರುದ್ರಯಾಗ ಸಮಾಪನ

KannadaprabhaNewsNetwork |  
Published : May 07, 2025, 12:53 AM IST
4 ಬಿಟಿಎಲ್- ನೆಟ್ಲ ಬಂಟ್ವಾಳ ತಾಲ್ಲೂಕಿನ ಮೊಗನರ್ಾಡು ಸಾವಿರ ಸೀಮೆ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಭಾನುವಾರ ನಡೆದ ಅತಿಮಹಾ ರುದ್ರಯಾಗ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. 4ಬಿಟಿಎಲ್-ರುದ್ರಯಾಗಬಂಟ್ವಾಳ ತಾಲ್ಲೂಕಿನ ಮೊಗನರ್ಾಡು ಸಾವಿರ ಸೀಮೆ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಕಾಶಿ ಸಂಸ್ಥಾನ ಮಠಾಧೀಶ ವಾರಣಾಸಿ ಡಾ.ಮಲ್ಲಿಕಾಜರ್ುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಮಾರ್ಗದರ್ಶನದಲ್ಲಿ ಭಾನುವಾರ ಅತಿಮಹಾ ರುದ್ರಯಾಗ ನೆರವೇರಿತು. ಸಮಿತಿ ಅಧ್ಯಕ್ಷ ಬ್ರಹ್ಮಾನಂದ ರೆಡ್ಡಿ ಚಿತ್ರದುರ್ಗ, ಕಾಯರ್ಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಗೌರವಾಧ್ಯಕ್ಷ ಬಿ.ರಘುನಾಥ ಸೋಮಯಾಜಿ ಮತ್ತಿತರರು ಇದ್ದಾರೆ.  | Kannada Prabha

ಸಾರಾಂಶ

ಮೊಗರ್ನಾಡು ಸಾವಿರ ಸೀಮೆ ನೆಟ್ಲ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಮೇ 2ರಂದು ಆರಂಭಗೊಂಡ ‘ಅತಿ ಮಹಾ ರುದ್ರಯಾಗ’ ಭಾನುವಾರ ಸಮಾಪನಗೊಂಡಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳಕಲ್ಲಡ್ಕ ಸಮೀಪದ ಮೊಗರ್ನಾಡು ಸಾವಿರ ಸೀಮೆ ನೆಟ್ಲ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಮೇ 2ರಂದು ಆರಂಭಗೊಂಡ ‘ಅತಿ ಮಹಾ ರುದ್ರಯಾಗ’ ಭಾನುವಾರ ಸಮಾಪನಗೊಂಡಿತು.ಕಾಶಿ ಸಂಸ್ಥಾನ ಮಠಾಧೀಶ ವಾರಣಾಸಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ನಡೆದ ಯಾಗ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿಗೊಂಡಿತು. ವಿದ್ವಾನ್ ಗಣಪತಿ ಭಟ್ ತಿರುಪತಿ ಯಾಗದ ಮಹತ್ವ ಬಗ್ಗೆ ವಿವರಿಸಿದರು.ಎರಡು ದಿನಗಳಲ್ಲಿ ವಿದ್ವಾನ್ ಅನಂತರಾಮ ಐತಾಳ್ ಪೌರೋಹಿತ್ಯದಲ್ಲಿ ಸುಮಾರು 300 ಮಂದಿ ಋತ್ವಿಜರು ಒಟ್ಟು 14,641 ರುದ್ರ ಪಾರಾಯಣ ಮಾಡಿ 11 ಯಜ್ಞಕುಂಡಗಳಿಗೆ ಹವಿಸ್ಸು ಸಮರ್ಪಿಸಿದರು. ಅಂಜನಾಪುರ ಚಿಕ್ಕಮಗಳೂರಿನ ಶಿವಾನಂದಾಶ್ರಮದ ಸ್ವಾಮಿ ಚಿದಾನಂದಗಿರಿ, ರಾಜಸ್ಥಾನದ ಕೇದಾರ ಸ್ವಾಮೀಜಿ, ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ವಿಧಾನಪರಿಷತ್ ಸದಸ್ಯ ಬಿ.ಮಂಜುನಾಥ ಭಂಡಾರಿ, ಆರ್‌ಎಸ್‌ಎಸ್‌ ಮುಖಂಡ ಡಾ. ಕೆ.ಪ್ರಭಾಕರ ಭಟ್ ಕಲ್ಲಡ್ಕ ದಂಪತಿ ಸಹಿತ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಕಟೀಲು ಕ್ಷೇತ್ರದ ಅರ್ಚಕ ವೆಂಕಟರಮಣ ಆಸ್ರಣ್ಣ, ವಾಸುದೇವ ಆಸ್ರಣ್ಣ ಸಹಿತ ಅಪಾರ ಮಂದಿ ಗಣ್ಯರು, ಸಾರ್ವಜನಿಕರು ಯಾಗದಲ್ಲಿ ಪಾಲ್ಗೊಂಡರು. ಯಾಗ ಸಮಿತಿ ಅಧ್ಯಕ್ಷ ಬ್ರಹ್ಮಾನಂದ ರೆಡ್ಡಿ ಚಿತ್ರದುರ್ಗ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಗೌರವಾಧ್ಯಕ್ಷ ಬಿ.ರಘುನಾಥ ಸೋಮಯಾಜಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು, ಪ್ರಧಾನ ಅರ್ಚಕ ಸಂಪ್ರೀತ್ ಭಟ್, ಸೂರಜ್ ಕುಮಾರ್ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ರವಿಶಂಕರ ಶೆಟ್ಟಿ ಬಡಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಪ್ರಮುಖರಾದ ಸಚಿನ್ ರೈ ಮಾಣಿಗುತ್ತು, ಅಜಿತ್ ಕುಮಾರ್ ಬರಿಮಾರ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಎನ್.ಪ್ರಕಾಶ ಕಾರಂತ, ಗಣೇಶ ರಾವ್ ಬರಿಮಾರು, ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಕೃಷ್ಣಪ್ಪ ಮೂಲ್ಯ ಅಮ್ಟೂರು, ಪ್ರವೀಣ್ ವಾಲ್ಕೆ ಕಾರ್ಕಳ, ದೇವದಾಸ ಪೂಜಾರಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ