ಕನ್ನಡಪ್ರಭ ವಾರ್ತೆ ತಾಳಿಕೋಟೆ
ಅಭಿವೃದ್ದಿ ಕಾರ್ಯಗಳಲ್ಲಿ ನಾನೆಂದೂ ರಾಜಕಾರಣ ಮಾಡುವುದಿಲ್ಲ. ಹಿರೂರ-ತಮದಡ್ಡಿ-ಚೊಕ್ಕಾವಿ ಗ್ರಾಮದ ಜನರು ನನಗೆ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲವನ್ನು ನೀಡಿದ್ದಾರೆ. ಅವರ ಋಣ ತೀರಿಸಲು ಪ್ರಾಮಾಣಿಕ ಸೇವೆ ಮಾಡುವುದಾಗಿ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ತಮದಡ್ಡಿ ಗ್ರಾಮದಲ್ಲಿ ತಾಂಡಾ ರಸ್ತೆ ಸುಧಾರಣೆ ಕಾಮಗಾರಿ ಹಾಗೂ ಹಿರೂರ ಗ್ರಾಮದಲ್ಲಿ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ರಸ್ತೆಯಲ್ಲಿ ಸೇತುವೆಗಳು ಬರಲಿದ್ದು ಉತ್ತಮ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಬಾಕಿ ಹಣವನ್ನು ಹಾಗೆ ಇಟ್ಟುಕೊಂಡು ಬಂದಿದ್ದಾರೆ. ಈಗ ಆ ಗುತ್ತಿಗೆದಾರರಿಗೆ ಹಣ ಪಾವತಿಸುತ್ತಿರುವುದರಿಂದ ಕ್ಷೇತ್ರಗಳಿಗೆ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಆದರೂ, ಮೂಲ ಸೌಕರ್ಯಗಳಿಗೆ ಅನುದಾನ ಕಡಿಮೆಯಾಗದಂತೆ ಸಿಎಂ ಸಿದ್ದರಾಮಯ್ಯನವರು ನೋಡಿಕೊಳ್ಳುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಸದ್ಯ ₹ ೧೫ ಕೋಟಿ ಅನುದಾನ ನೀಡಿದ್ದು, ಆದ್ಯತೆಯ ಮೇಲೆ ₹ ೪ ಕೋಟಿ ಅನುದಾನ ನೀಡಿದ್ದೇನೆ. ಈ ಬಾರಿ ₹ ೪ ಲಕ್ಷ ಕೋಟಿ ವೆಚ್ಚದ ಬಜೆಟ್ ಮಂಡಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ರಾಜಕೀಯ ಲೇಪನದಿಂದ ಬಡವರ ಉದ್ದಾರ ಸಾಧ್ಯವಿಲ್ಲ, ನಾವು ಕಾಯಕ ಶಿಲ್ಪಿಗಳಾಗಬೇಕು ಎಂದರು.
ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಆನಂದಸ್ವಾಮಿ ಮಾತನಾಡಿ, ಹಿರೂರ ಗ್ರಾಮದಲ್ಲಿ ಸುಂದರ ಸಮುದಾಯ ಭವನ ನಿರ್ಮಾಣವಾಗಲಿದೆ ಎಂದು ಹೇಳಿದರು.ಅನ್ನದಾನೇಶ್ವರ ಮಠದ ಗುರು ಜಯ ಸಿದ್ದೇಶ್ವರ ಮಹಾ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಹಾಲುಮತ ಸಮಾಜದ ನವಲಪ್ಪ ಪೂಜಾರಿ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ ಯಾಳಗಿ, ಬಿ.ಎನ್.ಹೂಗಾರ, ಸಿದ್ದನಗೌಡ ಪಾಟೀಲ, ಗುರಣ್ಣ ತಾರನಾಳ, ರೇವಣೆಪ್ಪ ಪೂಜಾರಿ, ಚಂದಪ್ಪ ಪೂಜಾರಿ, ಸುರೇಶಗೌಡ ಬಿರಾದಾರ, ಕೆಐಆರ್ ಡಿಎಲ್ ಕಾರ್ಯನಿರ್ವಾಹಕ ಅಭಿಯಂತರ ಆನಂದಸ್ವಾಮಿ, ಗುರಣ್ಣ ತಾರನಾಳ, ಬಿ.ಎನ್.ನಾಯ್ಕೋಡಿ, ಶಂಕರಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ(ತಮದಡ್ಡಿ), ಪ್ರಕಾಶಗೌಡ ಪಾಟಿಲ, ಬಿ.ಎ.ಬಿರಾದಾರ, ಸಂಗನಗೌಡ ಅಸ್ಕಿ, ಗುತ್ತಿಗೆದಾರ ಭೀಮನಗೌಡ ಬಿರಾದಾರ, ಮಹೇಶಗೌಡ ಭಂಟನೂರ, ಸುರೇಶಗೌಡ ಬಿರಾದಾರ, ಬಿ.ಎಂ.ಪಾಟೀಲ, ಮಲ್ಲನಗೌಡ ಬಿರಾದಾರ, ಶಿವಲೀಲಾ ಕೊಣ್ಣೂರ, ಬಿ.ಎನ್.ನಾಯ್ಕೋಡಿ, ವಿರೇಶಗೌಡ ಬಾಗೇವಾಡಿ, ಸಂಗಮೇಶ ದೇಸಾಯಿ, ಶಾಂತಪ್ಪಗೌಡ ಬಸರಕೋಡ, ಶೇಖರಗೌಡ ಸಾಸನೂರ, ಬಸನಗೌಡ ಕುಂಟರಡ್ಡಿ, ಶಾಂತಪ್ಪ ಚಲವಾದಿ, ತುಕಾರಾಮ ಗೊಂದಳಿ, ಸಂತೋಷ ನಾಯಕ, ಧರ್ಮಣ್ಣ ನಾಯಕ, ಅಧಿಕಾರಿಗಳಾದ ಜಿ.ಸಿ.ವಂದಾಲ, ಪ್ರವೀಣ್ ರಾಠೋಡ, ಅನುಷ ಪಾಟೀಲ, ಗ್ರಾಂಪಂ ಸದಸ್ಯರು ಮುಂತಾದವರು ಇದ್ದರು.