ಕನ್ನಡಪ್ರಭ ವಾರ್ತೆ ಸಕಲೇಶಪುರ
ಸಕಲೇಶಪುರದಿಂದ ವಿಜಯಪುರಕ್ಕೆ ಆರಂಭವಾಗಿರುವ ನೂತನ ಬಸ್‌ಗೆ ಶಾಸಕರು ಹಸಿರು ಧ್ವಜ ತೋರಿಸುವ ಮುಖಾಂತರ ಚಾಲನೆ ನೀಡಿ ಮಾತನಾಡಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಹೊಸ ಬಸ್‌ನ್ನು ಸಕಲೇಶಪುರ ಡಿಪೋದಿಂದ ವಿಜಯಪುರಕ್ಕೆ ಬಿಡಲಾಗುತ್ತಿದೆ. ಈ ಬಸ್‌ನಿಂದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ, ವಿಜಯಪುರ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪ್ರತಿ ದಿನ ಪಟ್ಟಣದಿಂದ ಮಧ್ಯಾಹ್ನ ೧೨.೩೦ರ ವೇಳೆಗೆ ಬಿಡುವ ಈ ಬಸ್ ಮರುದಿನ ಮುಂಜಾನೆ ೬ ಗಂಟೆಗೆ ವಿಜಯಪುರ ತಲುಪುತ್ತದೆ. ನಂತರ ಸಂಜೆ ೭ ಗಂಟೆಗೆ ವಿಜಯಪುರ ಬಸ್ ಮರುದಿನ ಮಧ್ಯಾಹ್ನದ ವೇಳೆಗೆ ಸಕಲೇಶಪುರ ತಲುಪುತ್ತದೆ. ಸಾರ್ವಜನಿಕರು ಈ ಬಸ್‌ನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಈ ಬಸ್ ನಿಲ್ದಾಣದಲ್ಲಿ ಕೆಲವೊಂದು ಸಮಸ್ಯೆಗಳಿದ್ದು ಇದನ್ನು ಬಗೆಹರಿಸಲು ಆದ್ಯತೆ ನೀಡಲಾಗುವುದು ಎಂದರು.