ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಸೂಲಿಬೆಲೆ ಸಮೀಪದ ಹೊಸಕೋಟೆ ಡೇರಿ ಆವರಣದಲ್ಲಿ ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡರಿಗೆ ಗೌರವ ಸನ್ಮಾನ ನೆರವೇರಿಸಿ ಮಾತನಾಡಿದರು. ಬೆಂಗಳೂರು ಹಾಲು ಒಕ್ಕೂಟ ಹಾಗೂ ಬಮೂಲ್ ಕಲ್ಯಾಣ ಟ್ರಸ್ಟ್ ಅನುದಾನದಲ್ಲಿ ೨ ಹೈಮಾಸ್ ದೀಪ, ೪ ಶುದ್ದಕುಡಿಯುವ ನೀರಿನ ಘಟಕ, ರಾಸುಗಳ ವಿಮೆ, ವೈಧ್ಯಕೀಯ ಪರಿಹಾರ ಚೆಕ್ ವಿತರಣೆ ಸೇರಿದಂತೆ 1 ಕೋಟಿ 50 ಲಕ್ಷ ಹಾಗೂ ಒಕ್ಕೂಟದ ಲಾಭಾಂಶದಲ್ಲಿ ಹೊಸಕೋಟೆ ತಾಲ್ಲೂಕಿಗೆ ಸುಮಾರು 3 ಕೋಟಿ ೫೦ ಲಕ್ಷ ಪ್ರೊತ್ಸಾಹ ಧನವನ್ನು ಹೈನುದಾರರಿಗೆ ವಿತರಣೆ ಮಾಡಿದ್ದಾರೆ ಎಂದರು.
ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶ್ರೀರಾಮ್ ಮಾತನಾಡಿ, ಸದಸ್ಯರ ಸ್ವಾಭಾವಿಕ ಮರಣ ವೆಚ್ಚದಡಿಯಲ್ಲಿ ೧೩ ಜನರಿಗೆ ೩ ಲಕ್ಷ ೬೫ ಸಾವಿರ,ವಿಶೇಷ ವೈಧ್ಯಕೀಯ ವೆಚ್ಚ ೫೦ ಜನರಿಗೆ ೧೧ ಲಕ್ಷ ೫೦ ಸಾವಿರ, ೨ ಹೈ ಮಾಸ್ ಲೈಟ್ ೭ ಲಕ್ಷ ೨೦ ಸಾವಿರ, ೪ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕ ೭ ಲಕ್ಷ ೮೦ ಸಾವಿರ ,೨೦೨೫-೨೬ನೇ ಸಾಲಿನ ವಿಮೆ ನೊಂದಣಿ ಮಾಡಿದ ೯೮೭ ಸದಸ್ಯರಿಗೆ ೪ ಲಕ್ಷ ೧ ಸಾವಿರ, ಮರಣ ವಿಮೆ ಪಾವತಿ ೬ ಜನರಿಗೆ ೬ ಲಕ್ಷ ನೀಡಲಾಗಿದೆ ಇದಕ್ಕೆ ನಿರ್ದೇಶಕರಾದ ಬಿ.ವಿ.ಸತೀಶಗೌಡರ ಪರಿಶ್ರಮ ಸಹಕಾರಿಯಾಗಿದೆ ಎಂದರು.ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡರು ಮಾತನಾಡಿ, ೨೦೨೫-೨೬ನೇ ಸಾಲಿನಲ್ಲಿ ವಿಮೆ ಪಡೆದು ಮರಣ ಹೊಂದಿದ ವಡ್ಡಹಳ್ಳಿ ರತ್ನಮ್ಮ, ಅತ್ತಿಬೆಲೆ ಮುನಿರಾಜು, ದೊಡ್ಡಹರಳಗೆರೆ ಮುನಿರತ್ನಮ್ಮ, ಒಬಳಹಳ್ಳಿ ನಾರಾಯಣಸ್ವಾಮಿ,ಒಬಳಹಳ್ಳಿ ನಾರಾಯಣಮ್ಮ, ನೆಲವಾಗಿಲು ಮಂಜುನಾಥ್ ಇವರ ನಾಮಿನಿಗಳಿಗೆ ತಲಾ ೧ ಲಕ್ಷದಂತೆ ೬ ಲಕ್ಷದ ವಿಮೆ ಚೆಕ್ ವಿತರಣೆ ಹಾಗೂ ೨೦೨೫-೨೬ನೇ ಸಾಲಿನಲ್ಲಿ ಸಕ್ರಿಯ ಸದಸ್ಯರ ಹಾಗೂ ಅವಲಂಬಿತರ ಒಳರೋಗಿ ವೈಧ್ಯಕೀಯ ಪರಿಹಾರ ನನ್ನ ವೈಯಕ್ತಿಕ ಕೋಟಾದಲ್ಲಿ ಸುಮಾರು ೧೧ ಲಕ್ಷ ೫೦ ಸಾವಿರ ರೂ.ಗಳ ಚೆಕ್ ವಿತರಣೆ ಮಾಡಲಾಗಿದೆ ಎಂದರು.